ad

ಕಳಪೆ ಕಾಮಗಾರಿ ನಡೆಸಿ ದೇವಸ್ಥಾನ ಉದ್ಘಾಟಿಸಿದ ಪ್ರಾಚ್ಯವಸ್ತು ಇಲಾಖೆ ಅಧಿಕಾರಿಗಳನ್ನ ಹೊಣೆಗಾರರನ್ನಾಗಿ ಮಾಡುವಂತೆ ವಾಟಾಳ್ ಮಂಜು ಅವರಿಂದ ಪ್ರತಿಭಟನೆ-Vatal Manju protest

 SUDDILIVE || SHIVAMOGGA

ಕಳಪೆ ಕಾಮಗಾರಿ ನಡೆಸಿ ದೇವಸ್ಥಾನ ಉದ್ಘಾಟಿಸಿದ ಪ್ರಾಚ್ಯವಸ್ತು ಇಲಾಖೆ ಅಧಿಕಾರಿಗಳನ್ನ ಹೊಣೆಗಾರರನ್ನಾಗಿ ಮಾಡುವಂತೆ ವಾಟಾಳ್ ಮಂಜು ಅವರಿಂದ ಪ್ರತಿಭಟನೆ-Vatal Manju protest

Vatal, Manju

ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನಲ್ಲಿರುವ ಆನವಟ್ಟಿ ನೇರಲಗಿಯಲ್ಲಿ ನಿರ್ಮಾಣಗೊಂಡಿರುವ ದೇವಸ್ಥಾನ ಬಿದ್ದು ಹೋಗುವ ಸ್ಥಿತಿಯಲ್ಲಿದ್ದು ಈ ದೇವಸ್ಥಾನ ವನ್ನು ಕಳಪೆ ಕಾಮಗಾರಿಯಾಗಿ ನಿರ್ಮಿಸಿರುವ ಅಧಿಕಾರಿಗಳನ್ನೇ ಹೊಣೆಗಾರನಾಗಿ ಮಾಡಬೇಕೆಂದು ಆಗ್ರಹಿಸಿ ಇಂದು ಕನ್ನಡ ಕಾರ್ಮಿಕ ರಕ್ಷಣಾ ವೇದಿಕೆ ವಾಟಾಳ್ ಮಂಜು ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಆನವಟ್ಟಿ ನೇರಲಗಿ ಎಲ್ಲಿ ಪುರಾತನ ಕಾಲದಿಂದ ಬಸವೇಶ್ವರ ದೇವಸ್ಥಾನ ವಿದ್ದು ಈ ದೇವಸ್ಥಾನವನ್ನು ನೆಲಸಮ ಮಾಡಿ ಹೊಸ ಕಟ್ಟಡ ವನ್ನು 50 ಲಕ್ಷ ವೆಚ್ಚದಲ್ಲಿ ಸರ್ಕಾರದ ಪ್ರಾಚ್ಯ ವಸ್ತು ಇಲಾಖೆಯಿಂದ ನಿರ್ಮಿಸಲಾಗಿತ್ತು ಮೇ 12ರಂದು ಸ್ಥಳೀಯ ಗ್ರಾಮಸ್ಥರಿಂದ ದೇವಸ್ಥಾನದ ಕಾರ್ಯಕ್ರಮ ಉದ್ಘಾಟನೆ ಸಮಾರಂಭ ನಡೆಸಲಾಗಿತ್ತು ಅದಕ್ಕಿಂತ ಮುಂಚೆ ಕಳಪಕಾಮಗಾರಿ ಹಿನ್ನೆಲೆಯಲ್ಲಿ ದೇವಸ್ಥಾನ ಬಿರುಕು ಬಿಟ್ಟು ವಲಿಕೊಂಡು ಬಿದ್ದಿದೆ.

ಈ ಕಳಪೆ ಕಾಮಗಾರಿಯ ನೇರ ಹೊಣಗಾರನಾಗಿ ಕಮಿಷನರ್ ದೇವರಾಜ್ ಕಾರ್ಯ ಪಾಲಕ ಇಂಜಿನಿಯರ್ ಗಳಾದ ತಾರುಕೇಶ್ ಸತೀಶ್ ಮತ್ತು ಗುತ್ತಿಗೆದಾರ ಸುಬ್ರಹ್ಮಣ್ಯ ಇವರ ಮೇಲೆ ಹೋರಿಸಬೇಕು ಸರ್ಕಾರ ಸೂಕ್ತ ಕಾನೂನು ಕ್ರಮ ಜರುಗಿಸಿ ಕರ್ತವ್ಯದಿಂದ ವಜಾಗೊಳಿಸಬೇಕು ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಸಂಘಟನೆಯೂ ಆವರಣದಲ್ಲಿಯೇ ಬೃಹತ್ ಪ್ರತಿಭಟನೆ ಸತ್ಯಾಗ್ರಹವನ್ನು ನಡೆಸಲಾಗುವುದು ಎಂದು ವಾಟಾಳ್ ಮಂಜು ಎಚ್ಚರಿಸಿದ್ದಾರೆ

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close