SUDDILIVE || SHIVAMOGGA
ಜಿಲ್ಲೆಯಲ್ಲಿ ಮಳೆ ಚುರುಕು, ಜೋಗದಲ್ಲಿ ಪ್ರವಾಸಿಗರ ನಿರಾಸೆ-Rains in the district, water shortage in Jog
ಜಿಲ್ಲಾಧ್ಯಂತ ಪುನರ್ವಸು ಮಳೆ, ಚುರುಕುಗೊಂಡಿದೆ. ಶಿವಮೊಗ್ಗ, ಸಾಗರ, ಹೊಸನಗರ, ಮೊದಲಾದ ಕಡೆ ಮಳೆ ಮುಂದುವರೆದಿದೆ. ಸಾಗರ ತಾಲೂಕಿನಲ್ಲಿ ಮಳೆಯ ಮೋಡದಿಂದಾಗಿ ಜೋಗದಲ್ಲಿ ಪ್ರವಾಸಿಗರ ಪರದಾಡುವಂತಾಗಿದೆ.
ಶಿವಮೊಗ್ಗದಲ್ಲಿ ಬೆಳಗ್ಗೆ ಬಿಸಿಲು ಮಧ್ಯಾಹ್ನದ ಹೊತ್ತಿಗೆ ಮಳೆ ಬೀಳುವಂತಾಗಿದೆ. ಕಳೆದ ವಾರದಿಂದಲೇ ಮಳೆಯ ಆರ್ಭಟ ಇಲ್ಲದ ಶಿವಮೊಗ್ಗದಲ್ಲಿ ಮಳೆ ಕಾಣೆಯಾಗಿತ್ತು. ಇಂದು ಕೊಂಚ ನೆಮ್ಮದಿ ತಂದಿದೆ. ಇನ್ನು ಜಿಲ್ಲೆಯಾದ್ಯಂತ ಮಳೆ ಮುಂದುವರೆದಿದೆ. ಜೋಗದಲ್ಲಿ ಮಧ್ಯಾಹ್ನ 3 ಗಂಟೆಯ ವೇಳೆಗೆ ಮಳೆಯಿಂದಾಗಿ ಮೋಡ ಮುಸುಗಿದ್ದು ಜಲಪಾತ ಕಾಣದೆ ್ರವಾಸಿಗರು ವಾಪಾಸಾಗಿದ್ದಾರೆ.
ವೀಕ್ ಎಂಡ್ ಡೇ ಅಗದಿದ್ದರೂ ವೀಕ್ ಡೇ ನಡುವೆ ಜೋಗದಲ್ಲಿ ಪ್ರವಾಸಿಗರು ದಾಂಗುಡಿಯಿಟ್ಟಿರುವುದು ವಿಶೇಷವಾಗಿತ್ತು. ಕಳೆದ ಭಾನುವಾರ ಸುಮಾರು 9400 ಪ್ರವಾಸಿಗರು ಭೇಟಿ ನೀಡಿದ್ದರು ಶುಕ್ರವಾರವೇ 2 ರಿಂದ 3000 ರವರೆಗೆ ಈಗಾಗಲೇ ಪ್ರವಾಸಿಗರು ಭೇಟಿ ನೀಡಿದ್ದರು 3 ಗಂಟೆಯವರೆಗೂ ನೋಡೋ ಆವರಿಸಿಕೊಂಡಿದ್ದರಿಂದ ನಿರಾಶೆಗೊಂಡು ವಾಪಸ್ ಆಗಿರೋ ದೇಶಗಳು ಲಭ್ಯವಾಗಿದೆ.
ಶುಕ್ರವಾರವೇ ಜೋಗ ಜಲಪಾತದ ರಸ್ತೆಯ 2 ಎಕ್ಕಲಗಳಲ್ಲಿ ವಾಹನಗಳು ನಿಲ್ಲಿಸಿ ಸಂಚಾರಕ್ಕೆ ತೊಂದರೆ ಉಂಟಾಗುವಂತೆ ಏರ್ಪಡಾಗಿದೆ. ಜೋಗ ಜಲಪಾತದಲ್ಲಿ ಪಾರ್ಕಿಂಗ್ ವ್ಯವಸ್ಥೆ ಇಲ್ಲದ ಹಿನ್ನೆಲೆಯಲ್ಲಿ ರಸ್ತೆಗಳ ಮೇಲೆ ಪಾರ್ಕಿಂಗ್ ಮಾಡುತ್ತಿರುವುದರಿಂದ ಈ ಸಮಸ್ಯೆ ಮುಂದುವರೆದಿದೆ ಇದರ ಜೊತೆಗೆ ಪಾರ್ಕಿಂಗ್ ಜಾಗದಲ್ಲಿ ಛತ್ರಿ ರೈನ್ ಕೋಟು ವಸ್ತುಗಳನ್ನು ಮಾರಾಟ ಮಾಡುವ ವಾಹನಗಳು ನಿಲ್ಲುವುದರಿಂದ ಪ್ರವಾಸಿಗರಿಗೆ ತೊಂದರೆ ಉಂಟಾಗಿದೆ.
Rains in the district, water shortage in Jog