ad

ಮಾಚೇನಹಳ್ಳಿಯ ಹಾಸ್ಟೆಲ್ ನಲ್ಲಿ ಹೊಡೆದಾಟದ ವಿಡಿಯೋ ವೈರಲ್, ನಡೆದಿದ್ದು ಏನು?Video of fight at Machenahalli hostel goes viral

 SUDDILIVE || SHIVAMOGGA

ಮಾಚೇನಹಳ್ಳಿಯ ಹಾಸ್ಟೆಲ್ ನಲ್ಲಿ ಹೊಡೆದಾಟದ ವಿಡಿಯೋ ವೈರಲ್, ನಡೆದಿದ್ದು ಏನು?Video of fight at Machenahalli hostel goes viral, what happened?



10 ದಿನಗಳ ಹಿಂದೆ ನಡೆದ ಘಟನೆ ಈಗ ವೈರಲ್ ಆಗುತ್ತಿದೆ. ಸಾಮಾಜಿಕ ಜಾಲತಾಣ ಫೇಸ್ ಬುಕ್ ಮತ್ತು ಇನ್ಸ್ಟಾಗ್ರಾಮ್ ನಲ್ಲಿ ಶಾಹೀ ಗಾರ್ಮೆಂಟ್ಸ್ ನ ಹಾಸ್ಟೆಲ್ ನಲ್ಲಿ ಕನ್ನಡಿಗರ ಮೇಲೆ ಹಿಂದಿವಾಲಾಗಳು ಹಲ್ಲೆ ನಡೆಸಿದ್ದಾರೆ ಎನ್ನಲಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಒಳಗಾಗಿದೆ. 

ಸ್ಥಳೀಯರ ಮಾಹಿತಿ ಪ್ರಕಾರ ನಡೆದಿದ್ದೇನು?

ಶಾಹೀ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುವ ಕನ್ನಡಿಗರು ಮತ್ತು ಹಿಂದಿ ಭಾಷಿಗರು ಒಟ್ಟಿಗೆ ಮದ್ಯಸೇವನೆಗೆ ಹೊರ ಹೋಗಿದ್ದಾರೆ. ಊಟದಿಂದ ಬರುವಾಗ ಸಿಗರೇಟ್ ವಿಚಾರದಲ್ಲಿ ಗಲಾಟೆ ನಡೆದಿದೆ. ಈ ವಿಚಾರದಲ್ಲಿ ಕನ್ನಡ ಭಾಷಿಗ ಸಿಬ್ಬಂದಿಗಳು ಹಿಂದಿ ಭಾಷ ಮಾತನಾಡುವ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ. ಈ ಮದ್ಯ ಸೇವನೆ ಬೆಳಗ್ಗಿನಿಂದ ನಡೆದಿದೆ. 

ನಂತರ ಶಾಹೀಗಾರ್ಮೆಂಟ್ಸ್ ನ ಹಾಸ್ಟೆಲ್ ಗೆ ಬಂದ ನಂತರ ಕನ್ನಡಿಗರು ನತ್ತು ಹಿಂದಿ ಭಾಷಿಗರ ನಿರಂತರ ಹೊಡೆದಾಟ ನಡೆದಿದೆ. ಕನ್ನಡಿಗರು ಯಾವಾಗ ಓರ್ವ ಯುವಕನ ಮೇಲೆ ತೀವ್ರಗತಿಯಾಗಿ ಹಲ್ಲೆಮಾಡ್ತಾರೆ. ಅಲ್ಲಿಗೆ ಗಲಾಟೆ ತೀವ್ರಸ್ವರೂಪ ಪಡೆದುಕೊಳ್ಳುತ್ತದೆ. ಅಲ್ಲಿ ಮಧ್ಯಾಹ್ನ ಊಟ ತರುವ ಸ್ಥಳೀಯ ಯುವಕನ ಮೇಲೂ ಹಲ್ಲೆಯಾದಾಗ ಈ ಗಲಾಟೆ ಹೊರಗೆ ಬಿದ್ದಿದೆ. 

ಹಿಂದಿ ಭಾಷಿಗನ ಮೇಲೆ ಹಲ್ಲೆಯಾದ ನಂತರ ಹಿಂದಿ ಭಾಷಿಗರು ತೀವ್ರತರನಾದ ಹೊಡೆದಾಟವನ್ನ ಕನ್ನಡಿಗರ ಮೇಲೆ ನಡೆಸಿದ್ದಾರೆ. ಈ ಗಲಾಟೆ ಸಂಬಂಧ ಇಬ್ಬರು ಕನ್ನಡಿಗ ಯುವಕರನ್ನ ಸಂಸ್ಥೆ ವರ್ಗಾವಣೆ ಮಾಡಿದೆ ಎಂಬ ಮಾಹಿತಿಯನ್ನ ಸ್ಥಳೀಯರು ಸುದ್ದಿಲೈವ್ ಗೆ ನೀಡಿದ್ದಾರೆ.

ಈ ಕುರಿತು ಸ್ಪಷ್ಟನೆ ನೀಡಿದ ಎಸ್ಪಿ ಮಿಥುನ್ ಕುಮಾರ್ 10 ದಿನಗಳ ಹಿಂದೆ ನಡೆದ ಘಟನೆಯಾಗಿದ್ದು, ಸ್ಥಳೀಯ ಭದ್ರಾವತಿ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ ಸಂಸ್ಥೆ ಮತ್ತು ಎರಡೂ ಭಾಷಿಗರನ್ನ ವಿಚಾರಿಸಲಾಗಿದೆ. ಯಾರೂ ದೂರು ಕೊಡಲು ಮುಂದೆ ಬಂದಿಲ್ಲದ ಕಾರಣ ಎಫ್ಐಆರ್ ಆಗಿಲ್ಲ ಎಂದು ತಿಳಿಸಿದ್ದಾರೆ.  

ಈ ಘಟನೆ ಕುರಿತು ಸ್ಥಳೀಯ ಕೆಆರ್ ಎಸ್ ಪಕ್ಷ ಮತ್ತು ಕನ್ನಡ ರಕ್ಷಣ ವೇದಿಕೆ ಸಂಸ್ಥೆಯ ಎದುರು ಪ್ರತಿಭಟನೆ ನಡೆಸಿದ್ದಾರೆ. ಸಂಸ್ಥೆಯ ಯಾವ ಸಿಬ್ಬಂದಿಗಳು ಮತ್ತು ಅಧಿಕಾರಿಗಳು ಮಾಹಿತಿ ನೀಡದ ಕಾರಣ ಸ್ಥಳೀಯ ಮಾಹಿತಿ ಪ್ರಕಾರ ಸುದ್ದಿ ಮಾಡಲಾಗಿದೆ. 

Video of fight at Machenahalli hostel goes viral

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close