SUDDILIVE || SHIVAMOGGA
ರಾಜ್ಯ ವಾಲ್ಮೀಕಿ ನಾಯಕ ಯುವಪಡೆಯಿಂದ ವಿದ್ಯಾರ್ಥಿ ವೇತನ- ಗುರುಪೂರ್ಣಿಮ-Scholarship from the State Valmiki Leader Youth Wing
ಕರ್ನಾಟಕ ರಾಜ್ಯ ವಾಲ್ಮೀಕಿ ನಾಯಕ ಯುವಪಡೆ (ರಿ)ಶಿವಮೊಗ್ಗ ಜಿಲ್ಲಾ ಘಟಕದ ವತಿಯಿಂದ ವಾಲ್ಮೀಕಿ ಸಮಾಜದ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ 85 ಪರ್ಸೆಂಟ್ ಅಧಿಕ ಅಂಕವನ್ನ ಪಡೆದಂತಹ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಗುರುಪೂರ್ಣಿಮಾ ಪ್ರಯುಕ್ತ ಮಹರ್ಷಿ ವಾಲ್ಮೀಕಿ ಅವರಿಗೆ ವಿಶೇಷ ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆರ್ ಹರೀಶ್ ಜಿಲ್ಲಾಧ್ಯಕ್ಷರು ವಾಲ್ಮೀಕಿ ನಾಯಕರ ಯುವ ಪಡೆ ಯುವಪಡೆ ಇವರು ವಹಿಸಿಕೊಂಡಿದ್ದು ಕಾರ್ಯಕ್ರಮದ ಉದ್ಘಾಟನೆಯನ್ನು ಡಾ. ಮಹೇಶ್ ಮೂರ್ತಿಯವರು ಖ್ಯಾತ ಹೃದಯ ರೋಗ ತಜ್ಞರು ಮೆಗನ್ ಹಾಸ್ಪಿಟಲ್ ಶಿವಮೊಗ್ಗ ಹಾಗೂ ಆರ್ ಪ್ರಸನ್ನ ಕುಮಾರ್ ಖ್ಯಾತ ನೇತ್ರ ತಜ್ಞರು ಶಿವಮೊಗ್ಗ ಇವರು ನೆರವೇರಿಸಿದರು.
ಜೊತೆಯಲ್ಲಿ ಮಕ್ಕಳಿಗೆ ದಿಕ್ಸೂಚಿಯ ಭಾಷಣವನ್ನು ಆರ್ ರಂಗಪ್ಪ ಶಿಕ್ಷಕರು ನೆರವೇರಿಸಿದರು, ವಾಲ್ಮೀಕಿ ಗುರುಪೀಠದ ಟ್ರಸ್ಟಿಗಳು ಆದಂತಹ ಡಿ ಬಿ ಹಳ್ಳಿ ಬಸವರಾಜಪ್ಪ ಶಿವಮೊಗ್ಗ ಜಿಲ್ಲಾ ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷರಾದ ಶೇಖರಪ್ಪ , ಖಜಾಂಚಿಗಳಾದ ಗಿರೀಶ,ಭದ್ರಾವತಿ ತಾಲೂಕು ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷರಾದ ಶಿವಕುಮಾರ್, ಪ್ರಮುಖರಾದ ಮಾಸ್ಟರ್ ನರಸಿಂಹಮೂರ್ತಿ, ಮೇಘರಾಜ್, ಮೋಹನ್ ,ಅವಿನಾಶ್ ,ನೀಲಪ್ಪ, ಅನಿಲ,ಇನ್ನು ಅನೇಕ ಪ್ರಮುಖರು ಮುಖಂಡರುಗಳು ಈ ಕಾರ್ಯಕ್ರಮದಲ್ಲಿ ಮಹಿಳೆಯರು ಮಕ್ಕಳು ಹಾಗೂ ಸಮಾಜ ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು
Scholarship from the State Valmiki Leader Youth Wing