SUDDILIVE || SHIVAMOGGA
ನಾಳೆ ಭಾರತ್ ಬಂದ್-Tomorrow is Bharat Bandh
ಕೇಂದ್ರ ಸರ್ಕಾರದ “ಕಾರ್ಮಿಕ, ರೈತ ವಿರೋಧಿ ಮತ್ತು ಕಾರ್ಪೋರೆಟ್ ಪರವಾದ ನೀತಿಗಳನ್ನು ವಿರೋಧಿಸಿ ೧೦ ಕೇಂದ್ರ ಕಾರ್ಮಿಕ ಸಂಘಗಳ ಒಕ್ಕೂಟ ನಾಳೆ ಭಾರತ್ ಬಂದ್‌ಗೆ ಕರೆ ನೀಡಿದೆ. ಈ ಹಿನ್ನೆಲೆಯಲ್ಲಿ ಹಲವು ಸೇವೆಗಳಲ್ಲಿ ವ್ಯತ್ಯಯವಾಗಲಿದ್ದು ಸಾರ್ವಜನಿಕರು ಪರದಾಡುವಂತಾಗುವ ಸಾಧ್ಯತೆ ಇದೆ.
ದೇಶಾದ್ಯಂತ ೨೫ ಕೋಟಿಗೂ ಹೆಚ್ಚು ಕಾರ್ಮಿಕರು ನಾಳೆ ಮುಷ್ಕರಕ್ಕೆ ಇಳಿಯಲಿದ್ದಾರೆ, ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಭಾರತ್ ಬಂದ್‌ಗೆ ಕರೆ ನೀಡಲಾಗಿದೆ. ರಾಷ್ಟ್ರವ್ಯಾಪಿ ಸಾರ್ವತ್ರಿಕ ಮುಷ್ಕರ ಅಥವಾ ’ಭಾರತ್ ಬಂದ್’ನಲ್ಲಿ ಕಾರ್ಮಿಕರ ಸಂಘಟನೆಗಳು ಭಾಗಿಯಾಗುತ್ತಿವೆ
ನಾಳೆ ನಡೆಯಲಿರುವ ಭಾರತ್ ಬಂದ್ ಜನರಿಗೆ ತೊಂದರೆಯಾಗುವ ಸಾಧ್ಯತೆಯಿದೆ. ಬರೋಬ್ಬರಿ ೨೫ ಕೋಟಿಗೂ ಹೆಚ್ಚು ಕಾರ್ಮಿಕರು ನಾಳೆ ಬೀದಿಗಿಳಿದು ಬಂದ್ ನಡೆಸುವ ನಿರೀಕ್ಷೆ ಇದೆ. ಬ್ಯಾಂಕಿಂಗ್, ವಿಮೆ, ಅಂಚೆ, ಕಲ್ಲಿದ್ದಲು ಗಣಿಗಾರಿಕೆ, ಸಾರಿಗೆ, ಮತ್ತು ಸಾರ್ವಜನಿಕ ವಲಯದ ಕೈಗಾರಿಕೆಗಳಂತಹ ಪ್ರಮುಖ ಕ್ಷೇತ್ರಗಳಲ್ಲಿ ವ್ಯಾಪಕವಾಗಿ ನಿರೀಕ್ಷಿಸಲಾಗಿದೆ.
ಈ ಮುಷ್ಕರದಿಂದ ದೇಶದ ಆರ್ಥಿಕ ಚಟುವಟಿಕೆಗಳ ಮೇಲೆ ಗಮನಾರ್ಹ ಪರಿಣಾಮ ಬೀರಲಿದೆ. ಹಿಂದ್ ಮಜ್ದೂರ್ ಸಭಾದ ಹರ್ಭಜನ್ ಸಿಂಗ್ ಸಿಧು ಅವರ ಪ್ರಕಾರ, “ಬ್ಯಾಂಕಿಂಗ್, ಅಂಚೆ, ಕಲ್ಲಿದ್ದಲು ಗಣಿಗಾರಿಕೆ, ಕಾರ್ಖಾನೆಗಳು, ಮತ್ತು ರಾಜ್ಯ ಸಾರಿಗೆ ಸೇವೆಗಳ ಮೇಲೆ ಮುಷ್ಕರ ತೀವ್ರವಾಗಿ ಪರಿಣಾಮ ಬೀರುತ್ತದೆ.”
ನಾಳೆ ರಾಷ್ಟ್ರವ್ಯಾಪಿ ಬ್ಯಾಂಕ್ ಶಾಖೆಗಳನ್ನು ಮುಚ್ಚಬಹುದು, ಚೆಕ್ ಕ್ಲಿಯರೆನ್ಸ್, ಗ್ರಾಹಕ ಸೇವೆಗಳು ಮತ್ತು ಇತರ ಹಣಕಾಸು ಚಟುವಟಿಕೆಗಳು ಸ್ಥಗಿತಗೊಳ್ಳಬಹುದು. ಇದರ ಜೊತೆಗೆ, ಅಂಚೆ ಕಚೇರಿಗಳು, ಕಲ್ಲಿದ್ದಲು ಗಣಿಗಾರಿಕೆ ಘಟಕಗಳು, ಮತ್ತು ಕೆಲವು ಶಿಕ್ಷಣ ಸಂಸ್ಥೆಗಳ ಶಾಲೆಗಳು ಮತ್ತು ಕಾಲೇಜುಗಳು ಸಹ ಮುಚ್ಚಬಹುದು. ಸಾರಿಗೆ ವಲಯದಲ್ಲಿ, ರಾಜ್ಯ ಸಾರಿಗೆ ಬಸ್‌ಗಳ ಕಾರ್ಯಾಚರಣೆಯೂ ಉಂಟಾಗುವ ಸಾಧ್ಯತೆಗಳಿವೆ
ಚಿಕಿತ್ಸೆ, ಆರೋಗ್ಯ, ಮತ್ತು ತುರ್ತು ಸೇವೆಗಳಂತಹ ಅಗತ್ಯ ಸೇವೆಗಳಿಗೆ ಈ ಮುಷ್ಕರದಿಂದ ವಿನಾಯಿತಿ ನೀಡಲಾಗುತ್ತದೆ. ಮಾರುಕಟ್ಟೆಗಳು ಮತ್ತು ಅಂಗಡಿಗಳು ಕಾರ್ಯನಿರ್ವಹಿಸುವ ಸಾಧ್ಯತೆಯಿದೆ. ಡಿಜಿಟಲ್ ಬ್ಯಾಂಕಿಂಗ್ ಸೇವೆಗಳಾದ ಮತ್ತು ನೆಟ್ ಬ್ಯಾಂಕಿಂಗ್ ಎಂದಿನಂತೆ ಕಾರ್ಯನಿರ್ವಹಿಸಬಹುದಾದರೂ, ಕೆಲವು ತಾಂತ್ರಿಕ ತೊಂದರೆಗಳು ಉಂಟಾಗಬಹುದು ಎಂದು ಹೇಳಲಾಗಿದೆ
ಕಾರ್ಮಿಕರ ಬೇಡಿಕೆಗಳು
ಕಾರ್ಮಿಕ ಸಂಘಗಳು ಕಳೆದ ವರ್ಷ ಕಾರ್ಮಿಕ ಸಚಿವ ಮನ್ಸುಖ್ ಮಾಂಡವಿಯಾ ಅವರಿಗೆ ಸಲ್ಲಿಸಿದ ೧೭ ಅಂಶಗಳ ಬೇಡಿಕೆಗಳ ಸನ್ನದಿನ ಮೇಲೆ ಈ ಮುಷ್ಕರವನ್ನು ಆಯೋಜಿಸಲಾಗಿದೆ.
ಸರ್ಕಾರವು ಕಾರ್ಮಿಕರ ಕಳವಳಗಳನ್ನು ನಿರ್ಲಕ್ಷಿಸಿದೆ ಮತ್ತು ದಶಕಕ್ಕೂ ಹೆಚ್ಚು ಕಾಲ ವಾರ್ಷಿಕ ಕಾರ್ಮಿಕ ಸಮ್ಮೇಳನವನ್ನು ನಡೆಸಲು ವಿಫಲವಾಗಿದೆ ಒಕ್ಕೂಟಗಳು ಆರೋಪಿಸಲಾಗಿದೆ
ಕಾರ್ಮಿಕರ ಕೆಲಸದ ಸಮಯವನ್ನು ಹೆಚ್ಚಿಸುವ ನೀತಿಗಳನ್ನು ವಿರೋಧ,ಗುತ್ತಿಗೆ ಮತ್ತು ಹೊರಗುತ್ತಿಗೆ: ಸಾರ್ವಜನಿಕ ವಲಯದಲ್ಲಿ ಗುತ್ತಿಗೆ ಆಧಾರಿತ ನೇಮಕಾತಿಗಳು ಕಾರ್ಮಿಕರ ಭತ್ಯೆಗೆ ಧಕ್ಕೆ ತರುತ್ತಿವೆ,ಹೊಸ ವಲಯ ನೇಮಕಾತಿಗಳ ಕೊರತೆ: ಸರ್ಕಾರಿ ಮತ್ತು ಸಾರ್ವಜನಿಕ ಶಾಶ್ವತ ಉದ್ಯೋಗ ಸೃಷ್ಟಿಯ ಕೊರತೆ ಎದುರಿಸುವಂತಾಗಿದೆಸರ್ಕಾರವು ಕಾರ್ಪೋರೆಟ್ ಹಿತಾಸಕ್ತಿಗಳಿಗೆ ಆದ್ಯತೆ ನೀಡುತ್ತಿದೆ ಎಂದು ಆರೋಪಿಸಲಾಗಿದೆ
ವಿವಿಧ ಸಂಘಟನೆಗಳ ಬೆಂಬಲ
ಕಾರ್ಮಿಕರು ವಿವಿಧ ಬೇಡಿಕೆ ಈಡೇರಿಕೆಗಾಗಿ ನಡೆಯುತ್ತಿರುವ ಹೋರಾಟಕ್ಕೆ ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ವಿವಿಧ ಕೃಷಿ ಕಾರ್ಮಿಕ ಸಂಘಗಳು ಬೆಂಬಲ ಘೋಷಿಸಿವೆ.
ರೈತರು ಮತ್ತು ಗ್ರಾಮೀಣ ಕಾರ್ಮಿಕರು ಗ್ರಾಮೀಣ ಪ್ರದೇಶಗಳಲ್ಲಿ ರ್ಯಾಲಿಗಳು ಮತ್ತು ಪ್ರತಿಭಟನೆಗಳನ್ನು ನಡೆಸಲು ಯೋಜಿಸಲಾಗಿದೆ. ಈ ಬಾರಿಯ ಮುಷ್ಕರ ತನ್ನ ವ್ಯಾಪಕ ಭಾಗವಹಿಸುವಿಕೆಯಿಂದ ದೇಶದ ದೈನಂದಿನ ಜೀವನದ ಮೇಲೆ ಗಮನಾರ್ಹ ಪರಿಣಾಮ ಬೀರಲಿದೆ.
ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ಮತ್ತು ರೈತ ವಿರೋಧಿ ನೀತಿಗಳ ವಿರುದ್ಧ ಕಾರ್ಮಿಕ ಸಂಘಗಳು, ರೈತ ಸಂಘಟನೆಗಳು ಮತ್ತು ಗ್ರಾಮೀಣ ಕಾರ್ಮಿಕರ ಒಗ್ಗಟ್ಟಿನ ಪ್ರದರ್ಶನ ಮಾಡಲಿದ್ದು ಕೇಂದ್ರ ಸರ್ಕಾರದ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆ ಇದೆ.
ಶಿವಮೊಗ್ಗದಲ್ಲೂ ಬಂದ್ ಆಚರಣೆ
ಸಿಐಟಿಯು ನೇತೃತ್ವದಲ್ಲಿ ನಡೆಯುವ ಬಂದ್ ಶಿವಮೊಗ್ಗದಲ್ಲೂ ಕರದ ನೀಡಲಾಗಿದೆ. ಸಿಐಟಿಯು ನೇತೃತ್ವದ ಪ್ರತಿಭಟನೆಗೆ ಹಲವು ಸಂಘಟನೆಗಳು ಭಾಗಿಯಾಗಲಿದ್ದಾರೆ. ಸುಮಾರು 10 ಗಂಟೆಯ ವೇಳೆ ಸಾವಿರಾರು ಕಾರ್ಯಕರ್ತರು ಬಸ್ ನಿಲ್ದಾಣದಿಂದ ಡಿಸಿ ಕಚೇರಿಯವರೆಗೆ ಪ್ರತಿಭಟನೆ ನಡೆಸಿ ಡಿಸಿಗೆ ಮನವಿ ನೀಡಲಿದ್ದಾರೆ.
Tomorrow is Bharat Bandh