SUDDILIVE || SHIVAMOGGA
ರಾಜ್ಯಾಧ್ಯಕ್ಷರ ಸ್ಥಾನ ಖಾಲಿಯಿಲ್ಲ, ಸರ್ಕಾರ ಅಂತಹಕಲಹದಿಂದಲೇ ಪಥನವಾಗಲಿದೆ-ರೇಣುಕಾಚಾರ್ಯ-The post of state president is not vacant, the government will fall due to such strife - Renukacharya
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಖಾಲಿಯಿಲ್ಲ, ಸರ್ಕಾರ ಅಙತಹ ಕಲಹದಿಂದಲೇ ಪಥನವಾಗಲಿದೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಭವಿಷ್ಯ ನುಡಿದಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜೇಂದ್ರ ಸರ್ಕಾರದ ವಿರುದ್ಧ ಸಂಘರ್ಷ ಮತ್ತು ಹೋರಾಟವನ್ನೇ ನಡೆಸಿದ್ದಾರೆ. ಮೂಡಾ ವಿರುದ್ಧ ಪಾದಯಾತ್ರೆ ನಡೆಸಿದರು ವಾಲ್ಮೀಖಿ ಹಗರಣವನ್ನ ಇಡಿಗೆ ಕೊಡಿಸುವಲ್ಲಿ ಯಶಸ್ಸಾದರು. ವರಘಾವಣೆ ದಂಧೆ ವಿರುದ್ಧ ಹೋರಾಟ ನಡೆಸಿದ್ದಾರೆ. ವಿಜೇಂದ್ರ ಕಿರಿ ವಯಸ್ಸಿನಲ್ಲಿ ಜವಬ್ದಾರಿ ಹೊತ್ತು ಸಮಗ್ರವಾಗಿ ನಿಭಾಯಿಸಿದ್ದಾರೆ ಸ್ಥಳೀಯ ಮತ್ತು ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿಯನ್ನ ಅಧಿಕಾರಕ್ಕೆ ತರಲಿದ್ದಾರೆ. ರಾಜ್ಯಾಧ್ಯಕ್ಷ ಸ್ಥಾನ ಖಾಲಿಯಿಲ್ಲ ಎಂದರು.
ಅಂತಹಕಲಹದಿಂದ ಸರ್ಕಾರ ಬೀಳಲಿದೆ
ಸರ್ಕಾರದಲ್ಲಿ ಸಿಎಂ ಡಿಸಿಎಂ ನಡುವೆ ಕುರ್ಚಿಗಾಗಿ ಹೋರಾಟ ನಡೆಯುತ್ತಿದೆ. ಸರ್ಕಾರ ಶೀಘ್ರದಲ್ಲಿಯೇ ಪಥನವಾಗಲಿದೆ ಎಂದ ರೇಣುಕಾಚಾರ್ಯ,
ಸುರ್ಜೇಚಾಲ ಶಾಸಕರ ಸಭೆ ನಡೆಸುತ್ತಿದ್ದಾರೆ. ಬಿಆರ್ ಪಟೀಲ್, ರಾಜೂ ಕಾಗೆ ಗೋಪಾಲ ಕೃಷ್ಣ ಬೇಳೂರು ಅವರು ಸರ್ಕಾರದ ವಿರುದ್ಧ ಆಕ್ಷೇಪಿಸಿದ್ದಾರೆ. ಸಿಎಂ ಬದಲಾವಣೆ ಬೇಕು ಎಂದು ಶಾಸಕ ಬಾಲಕೃಷ್ಣ ಹೇಳಿದ್ದಾರೆ. ಸುರ್ಜೇವಾಲ ಸರಣಿ ಸಭೆ ನಡೆಸಿದರು ಕುರ್ಚಿ ಕದನ ಮುಂದುವರೆದಿದೆ ಎಂದರು.
ನಾಳೆ ಸಿಎಂ ಮತ್ತು ಡಿಸಿಎಂ ದೆಹಲಿಗೆ ಹೋಗುತ್ತಿದ್ದಾರೆ. ಅಂತಹ ಕಲಹದಿಂದ ಸರ್ಕಾರ ಬೀಳಲಿದೆ. ಹುಟ್ಟುಹಬ್ಬ ಯಾರಾದರೂ ಸಂಭ್ರಮಿಸಲಿ. ಬಿಜೆಪಿ ರಾಜ್ಯಾಧ್ಯಕ್ಷ ಬದಲಾವಣೆ ಬಗ್ಗೆ ಪ್ರತಿಕ್ರಿಯಿಸಿದ ರೇಣುಕಾಚಾರ್ಯ, ವಿಜೇಂದ್ರ ಅಧ್ಯಕ್ಷರಾದ ಮೇಲೆ ಒಂದು ಕಡೆ ಸಂಘರ್ಷ ಮಾಡಿದ್ದಾರೆ. ಅವರು ರಾಜ್ಯಾಧ್ಯಕ್ಷರಾಗಿ ಮುಂದುವರೆಯಲಿದ್ದಾರೆ ಎಂದರು.
ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ್ ಅವರ ಹುಟ್ಟು ಹಬ್ಬಕ್ಕೆ ಪಕ್ಷದ ಅನೇಕ ಗಣ್ಯ ವ್ಯಕ್ತಿಗಳು ಸೇರ್ಪಡೆಯಾಗುತ್ತಿರುವ ಬಗ್ಗೆಯೂ ಪ್ರಸ್ತಾಪಿಸಿದ ಇಲ್ಲಿಂದನೇ ನಾನು ಅವರಿಗೆ ಶುಭಹಾರೈಸುವೆ. ದೇವರು ಉತ್ತಮ ಆರೋಗ್ಯ ಐಶ್ವರ್ಯ ನೀಡಲಿ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಅರಕೆರೆ ನಾಗರಾಜ್, ಪುರಸಭೆ ಮಾಜಿ ಅಧ್ಯಕ್ಷರಾದ ರಂಗಪ್ಪ, ಹೊನ್ನಾಳಿ ಕುಬೇಂದ್ರಪ್ಪ ಉಪಸ್ಥಿತರಿದ್ದರು.
The post of state president is not vacant