SUDDILIVE || SHIVAMOGGA
ನಾಳೆ ಅಪ್ಪರ್ ತುಂಗ ಕಚೇರಿ ಎದುರು ಪ್ರತಿಭಟನೆ-ರೇಣುಕಾಚಾರ್ಯ-protest held in front of upper tunga project office
ಭದ್ರ ಬಲದಂಡೆ ಸೀಳಿ ರೈತರಿಗೆ ಮರ್ಮಾಘಾತವಾಗಿದೆ ಮತ್ತು ಮರಣ ಶಾಸನ ಬರೆಯಲಾಗಿದೆ. ಐಐಎಸ್ಸಿ ವರದಿ ಶಾಸಕರ ಒತ್ತಡದಿಂದ ನಡೆದಿದೆ ಎಂದು ಮಾಜಿ ಸಚಿವ ರೇಣುಕಾಚಾರ್ಯ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಭದ್ರ ಬಲದಂಡೆ ನಾಲೆಯನ್ನ ಸೀಳಿ ಎರಡು ಜಿಲ್ಲೆಗಳಿಗೆ ನೀರು ಉಣಿಸುವ ಯೋಜನೆಗೆ ವಿವಿಧ ಹಂತದ ಹೋರಾಟದ ನಂತರ ಐಐಎಸ್ಸಿ ವರದಿ ಸರಿಯಿದೆ ಎಂದು ಉತ್ತರ ಬಂದಿದೆ ಅದಕ್ಕೆ ಕಾಂಗ್ರೆಸ್ ಮತ್ತು ಎರಡು ಜಿಲ್ಲೆಯ ಶಾಸಕರ ಒತ್ತಡವಿದ್ದ ಕಾರಣ ವರದಿ ಸರಿಯೆಂದು ಬಂದಿದೆ ಎಂದರು.
ಜಲಾಶಯ ಭರ್ತಿಯಾಗಿದೆ 3300 ಕ್ಯೂಸೆಕ್ ನೀರು ಬಿಟ್ಟರು ಕೊನೆ ಹಂತದ ರೈತರಿಗೆ ನೀರು ತಲುಪಿಲ್ಲ. ಚಿತ್ರದುರ್ಗ ಲೋಕಸಭಾ ಸದಸ್ಯರಾಗಿ ಕುಡಿಯುವ ನೀರಿಗೆ ವಿನಂತಿ ಸರಿಯಿದೆ. ಅವರು ಹೋರಾಟ ಸರಿಯಿದೆ ಎಂದಿದ್ದಾರೆ ಮತ್ತು ಶಿವಮೊಗ್ಗದ ಎಂಪಿ ಹೋರಾಟ ಸರಿಯಿದೆ ಎಂದಿದ್ದಾರೆ. ಹೋರಾಟ ಸರಿಯಿದೆ ಎಂದು ಇಬ್ಬರು ಹೇಳಿರುವುದರಿಂದ ನಮಗೆ ಅವರ ಬೆಂಬಲವಿದೆ ಎಂದರು. .
ವಿವಿಧ ಹಂತದಲ್ಲಿ ಪ್ರತಿಭಟನೆ ಮಾಡಲಾಗಿದೆ. ನಾವು ವೀಕ್ಷಣೆ ಮಾಡದಿದ್ದರೆ ಇಷ್ಟು ಹೊತ್ತಿಗೆ ನಮ್ಮ ಕಥೆ ಮುಗಿದೋ ಹೋಗುತ್ತಿತ್ತು. ಇದು ಬಿಜೆಪಿಯ ಹೋರಾಟವಲ್ಲ. ರೈತರ ಹೋರಾಟ ಪ್ರಜಾಪ್ರಭುತ್ವದಲ್ಲಿ ಸೆಕ್ಷನ್ 144 ಅಡಿ ಬಂಧಿಸುತ್ತದೆ. ಯಾರನ್ನ ಬಗ್ಗು ಬಡಿಯುತ್ತೀರಿ ನಾವೇನು ಪಾಕಿಸ್ತಾನದಿಂದ ಬಂದಿದ್ದೀವಾ? ಅನಿವಾರ್ಯ ಎನಿಸಿದರೆ ಪಕ್ಷಾತೀತವಾಗಿ ರಕ್ತಕಾಂತ್ರಿ ನಡೆಸುತ್ತೇವೆ ಎಂದು ಎಚ್ಚರಿಸಿದರು.
ಹಲವು ಹಂತದ ಹೋರಾಟ ನಡೆದಿದೆ. ಜೂ.20 ಭದ್ರ ವೀಕ್ಷಣೆ ಮಾಡಿ ಜೂ. 23 ರಂದು ಬೃಹತ್ ಹೋರಾಟ ಮಾಡಲಾಗಿದೆ. ಪೊಲೀಸರು ಸರ್ಕಾರದ ಏಜೆಙಟ್ ರ ರೀತಿ ನಡೆದುಕೊಙಡರು 144 ಸೆಕ್ಷನ್ ಅಡಿ ಬಂಧಿಸಿದ್ದಾರೆ. ಜೂ.25 ರಂದು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿದ ವೇಳೆ ರಕ್ಷಣ ಇಲಾಖೆಯವರು ಬಲವಂತವಾಗಿ ಮ್ಯಾನ್ ಹ್ಯಾಡ್ಲಿಂಗ್ ಮಾಡಿದರು. ಬಂಧಿಸಲಾಯಿತು.
ಎಸ್ಪಿ ಡಿಸಿ ಬರುವ ವರೆಗೂ ಪ್ರತಿಭಟಿಸಿದೆವು. ಜೂ.28 ದಾವಣಗೆರದ ಬಂದ್ ಮಾಡಿದೆವು. ಯಶಸ್ವಿಯಾಯಿತು ಸ್ವಾರ್ಥಕ್ಕಾಗಿ ಬಂದ್ ಮಾಡಲಿಲ್ಲ. ಡಿಕೆಶಿಯವರನ್ನ ಭೇಟಿ ಮಾಡಿ ಮನವರೆಕೆ ಮಾಡಲಾಯಿತು. ಬೇಡಿಕೆ ಈಡೇರಿಲ್ಲ. ದಾವಣಗೆರೆ ರೈತರಿಗೆ ಆಗುವ ದುಷ್ಪರಿಣಾಮವನ್ನ ಜಾಗೃತಿ ಮೂಡಿಸಲಾಗುತ್ತಿದೆ. ಬುಧವಾರ ನಾಳೆ ಸಾಗರ ರಸ್ತೆಯ ಅಪ್ಪರ್ ತುಂಗ ಕಚೇರಿಯನ್ನ ಮುತ್ತಿಗೆ ಹಾಕಲಾಗುವುದು. ಸರ್ಕಾರ ಮಣಿಯದಿದ್ದರೆ ದೊಡ್ಡಮಟ್ಟದ ಹೋರಸಟಕ್ಕೆ ಸಿದ್ಧ ಎಂದ ಅವರು ಎಲ್ಲಾ ತ್ಯಾಗಕ್ಕೂ ಸಿದ್ದರಾಗಿದ್ದೇವೆ ಎಂದರು.
ಭದ್ರ ಬಲದಂಡೆಯಲ್ಲಿ ನಡೆಯುತ್ತಿರುವ ಕಾಮಗಾರಿ ನಿಲ್ಲಿಸಬೇಕು.ಸಿಎಂಗೆ ಎಚ್ಚರಿಕೆಯನ್ನೂ ನೀಡುತ್ತೇವೆ ಭದ್ರ ಎಡ ಮತ್ತು ಬಲದಂಡೆಯಿಂದ 5000 ಹೆಕ್ಟರ್ ಜಮೀನಿಗೆ ನೀರು ಹರಿಸಲಾಗುತ್ತಿದೆ. ಇಷ್ಟುಹೊತ್ತಿಗೆ ಬಲದಂಡೆಗೆ ನೀರು ಹರಿಸಬೇಕಿತ್ತು ಹರಿಸಿಲ್ಲ. ನಮ್ಮ ನೀರು ನಮ್ಮ ಹಕ್ಕು ಅಡಿ ಹೋರಾಟ ಮಾಡುತ್ತೇವೆ. 7 ಟಿಎಂಸಿ ಯನ್ನ ಲಿಫ್ಟ್ ಮಾಡಿ ಕುಡಿಯುವ ನೀರು ಕೊಡಿ ಎಂಬುದು ನಮ್ಮ ಆಗ್ರಹವಾಗಿದೆ ಎಂದರು.
ಬಿಜೆಪಿಯ ಯೋಜನೆ ಇದು. ಬೃಹತ್ ಯೋಜನೆ ಮಂಜೂರು ಮಾಡಲು ಕಾಂಗ್ರೆಸ್ ಅಶಕ್ತ ವಾಗಿದೆ ಬಿಎಸ್ ವೈ ಸಿಎಂ ಆಗಿದ್ದಾಗ ಮಂಜೂರಾದ ಯೋಜನೆಯಾಗಿದೆ. ಪ್ಲಾನ್ ನಲ್ಲಿ ನಾಲೆ ಸೀಳಲು ಅವಕಾಶ ಇರಲಿಲ್ಲ ಎಂದರು.