SUDDILIVE || HOLEHONNURU
ದೆವ್ವ ಬಿಡಿಸುವ ಪ್ರಕರಣ-ಕಾಂಪ್ರಮೈಸ್ ಆಗದ ಮಗ-ದಾಖಲಾಯಿತು ದೂರು-ಇಬ್ಬರ ಬಂಧನ-cast out a demon, two person arrest
ದೆವ್ವ ಬಿಡುಸುವ ವೇಳೆ ಮಹಿಳೆಯೊಬ್ಬರು ಸಾವು ಕಂಡಿರುವ ಘಟನೆ ಸಮೀಪದ ಜಂಬರಗಟ್ಟೆಯಲ್ಲಿ ನಡೆದಿದೆ. ಹೊಸ ಜಂಬರಘಟ್ಟೆ ಗ್ರಾಮದ ಗೀತಮ್ಮ (೪೫) ಮೃತೆ.
ಭಾನುವಾರ ರಾತ್ರಿ ಮೃತೆ ಗೀತಮ್ಮನನ್ನು ಆಶಾಳ ಬಳಿ ಕರೆದುಕೊಂಡು ಬಂದಿದ್ದಾರೆ. ಆಶಾಳಿಗೆ ಕಳೆದ ಹದಿನೈದು ದಿನ ದಿಂದ ಗ್ರಾಮದ ದೇವರೊಂದು ಮೈ ಮೇಲೆ ಬರುತ್ತಿದೆ ಎನ್ನಲಾಗುತ್ತಿದೆ. ಆಶಾ ಗೀತಾಳ ಮೈಯಲ್ಲಿ ಆತ್ಮವೊಂದು ಹೊಕ್ಕಿದೆ. ಪೂಜೆ ಮಾಡಿ ಆತ್ಮವನ್ನು ಹೋರ ಹಾಕುವುದಾಗಿ ಗೀತಮ್ಮನ ಮಗ ಸಂಜಯ್‌ಗೆ ತಿಳಿಸಿದ್ದಾರೆ.
ಗೀತಮ್ಮನ ಮನೆಯ ಮುಂಭಾಗದಲ್ಲಿ ಪೂಜೆ ಮಾಡಿದ್ದಾರೆ. ಪೂಜೆ ಮಾಡುತ್ತಿದಂತೆ ಗೀತಮ್ಮನ ಮೇಲೆ ದೇವ್ವ ಬಂದಿದೆ ಎನ್ನಲಾಗುತ್ತಿದು ಗೀತಮ್ಮನ ತಲೆ ಮೇಲೆ ಕಲ್ಲು ಹೊರಿಸಿಕೊಂಡು ಮನೆಯಿಂದ ಜಂಬರಗಟ್ಟೆ ಹೋರಗಿನ ಮರವೊಂದರ ಕೆಳಗೆ ಕರೆದುಕೊಂಡು ಹೋಗಿದ್ದಾರೆ. ಪೂಜೆ ಮಾಡಿದ ಕೆಲ ಹೊತ್ತಿನಲ್ಲೆ ಗೀತಮ್ಮ ಮೈ ಮೇಲೆ ದೇವ್ವ ಬಂದವರAತೆ ಕೂಗಾಡಲು ಶುರು ಮಾಡಿದ್ದಾರೆ. ಅಷ್ಟರಲ್ಲೆ ಆಶಾಳ ಮೈ ಮೇಲೂ ದೇವರು ಬಂದಿದೆ ಎನ್ನಲಾಗುತ್ತಿದೆ. ಆಶಾ ಗೀತಮ್ಮರಿಬ್ಬರ ಕೂಗಾಟ ಜೋರಾಗಿದೆ. ಶಬ್ದ ಕೇಳಿ ಕೆಲವರು ಸ್ಥಳಕ್ಕೆ ಬಂದು ಇಬ್ಬರ ಕೂಗಾಟ ರಂಪಾಟದ ವಿಡಿಯೋ ಮಾಡಿಕೊಂಡಿದ್ದಾರೆ.
ಜನ ಸೇರುತ್ತಿದಂತೆ ದೇವರು ಬಂದ ಆಶಾ ವಿಡಿಯೋ ಮಾಡುತ್ತಿದ ಕೆಲವರನ್ನು ವಾಪ್ಪಾಸ್ ಕಳಿಸಿ ಪೂಜೆ ಮುಂದುವರೆಸಿದ್ದಾರೆ. ಅಲ್ಲೆ ಇದ್ದ ಮರದ ಟೊಂಗೆಯೊAದನ್ನು ಕಿತ್ತುಕೊಂಡ ಆಶಾ ಗೀತಮ್ಮಗೆ ತಳಿಸಲು ಶುರು ಮಾಡಿದ್ದಾರೆ. ನಾನು ಹೋಗುವುದಿಲ್ಲ ಎಂದು ಹಠ ಮಾಡುತ್ತಿದ ಗೀತಮ್ಮನ ತಲೆ ಮೇಲೆ ದೊಡ್ಡ ಗಾತ್ರದ ಕಲ್ಲು ಹೊರಿಸಿ ಕಾಲುವೆಯಲ್ಲಿದ ತಣ್ಣಿರೆರಚಿದ್ದಾರೆ. ಚಳಿ ತಳಾಲಾಗದೆ ನಡುಗುತ್ತಿದ ಗೀತಮ್ಮ ಸ್ಥಳದಲ್ಲೆ ಕುಸಿದು ಬಿದ್ದಿದ್ದಾರೆ. ಗೀತಮ್ಮನ ಮೈಯಲ್ಲಿದ ಆತ್ಮ ಹೋರ ಹೋಗಿದೆ ಇನ್ನೂ ಮುಂದೆ ಯಾವುದೇ ತೊಂದರೆ ಇಲ್ಲ ಎಲ್ಲವೂ ಸರಿಯಾಗಿದೆ ಎಂದು ಗೀತಮ್ಮನನ್ನು ಆಶಾ ಮನೆಗೆ ಕಳಿಸಿದ್ದಾರೆ.
ನಡೆಯಲಾಗದೆ ತಿರ್ವ ಅಸ್ವಸ್ಥವಾಗಿದ ಗೀತಮ್ಮನನ್ನು ಹೊಳೆಹೊನ್ನೂರಿನ ಸಮುದಾಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಗೀತಮ್ಮ ಮೃತಪಟ್ಟಿದ್ದಾರೆ ಎಂದು ವೈದ್ಯಾಧಿಕಾರಿಗಳು ದೃಡ ಪಡಿಸಿದ್ದಾರೆ. ಮೃತೆ ಗೀತಮ್ಮಳಿಗೆ ಒಂದು ಹೆಣ್ಣು ಹಾಗೂ ಇಬ್ಬರು ಗಂಡು ಮಕ್ಕಳಿದ್ದಾರೆ. ದೇವರು ಬಂದ ಮಹಿಳೆ ದೆವ್ವ ಬಿಡುಸುವ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ಸಕತ್ ವೈರಲ್ ಹಾಗಿದೆ. ಸ್ಥಳೀಯ ಮುಖಂಡರು ರಾಜಿ ಪಂಚಾಯಿತಿ ನಡೆಸಲು ಮಾಡಿದ ಪ್ರಯತ್ನ ಫಲ ನೀಡಲಿಲ್ಲ. ಮೃತೆ ಮಗ ಸಂಜಯ್ ಹೊಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾನೆ. ಜಿಲ್ಲಾ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಬೇಟಿ ನೀಡಿದ್ದಾರೆ. ಆರೋಪಿಗಳಾದ ಮೃತ ಳ ಮಗ ಸಂಜಯ್, ಆಶಾ ಹಾಗೂ ಆಶಾ ಳ ಗಂಡ ಸಂತೋಷ ನನ್ನು ಹೊಳೆಹೊನ್ನೂರು ಪೊಲೀಸರು ಬಂದಿಸಿದ್ದಾರೆ.
cast out a demon, two person arrest