SUDDILIVE || SHIVAMOGGA
ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ-ಬಿವೈ ವಿಜೇಂದ್ರ-The state government is financially bankrupt - BY Vijendra
ರಾಜ್ಯದಲ್ಲಿ ಆರ್ಥಿಕ ಸ್ಥಿತಿ ದಿವಾಳಿಯಾಗಿದೆ. ಜನ ಸರ್ಕಾರದ ವಿರುದ್ಧ ದಂಡೆತ್ತಿ ಹೋಗುವ ದಿನವೂ ಸಹ ಬಹಳ ದೂರವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜೇಂದ್ರ ತಿಳಿಸಿದರು.
ನಗರದ ಬಾಲರಾಜ್ ಅರಸ್ ರಸ್ತೆಯಲ್ಲಿರುವ ಬಂಜಾರ ಹಾಲ್ ನಲ್ಲಿ ಶಿವಮೊಗ್ಗ, ಚಿಕ್ಕಮಗಳೂರು ಉತ್ತರ ಕನ್ನಡ ಜಿಲ್ಲೆಯ ಪ್ರಬುದ್ಧರ ಸಭೆಯನ್ನ ಉದ್ಘಾಟಿಸಿ ಮಾತನಾಡಿ ಇವೆಲ್ಲದರ ನಡುವೆ ಬಿಜೆಪಿ ನಿರಂತರ ಹೋರಾಟ ನಡೆಸಿದೆ ಎಂದು ತಿಳಿದರು.
ಲಾರಿ ಮಾಲೀಕರ ಸಂಘದ ಅಧ್ಯಕ್ಷರು ಒಡವೆಗಳಲನ್ನ ಅಡಯಿಟ್ಟು ಬದುಕುವಂತಾಗಿದೆ ರಾಜ್ಯ ಸರ್ಕಾರ ಅನುದಾನ ನೀಡುತ್ತಿಲ್ಲ ಎಂದು ಆಕ್ಷೇಪಿಸಿದ್ದಾರೆ. ರಾಜ್ಯದ ಜನರಿಗೆ ಗ್ಯಾರೆಂಟಿ ಎಂದು ಮಂಕುಬೂದಿ ಎರಚಲಾಗಿದೆ. ಸಿದ್ದರಾಮಯ್ಯ ಸಿಎಂ ಆಗಿ ಮುಂದುವರೆಯುತ್ತಾರೋ ಇಲ್ಲವೋ ಗೊತ್ತಿಲ್ಲ. ನಮ್ಮ ಜಿಲ್ಲೆಯ ಸಚಿವರಿಗೂ ಭಯವಿದೆ. ಅವರು ಮತ್ತೊಂದು ಕ್ಯಾಬಿನೆಟ್ ನಲ್ಲಿ ಸಚಿವರಾಗಿ ಮುಂದುವರೆಯುವ ಬಗ್ಗೆ ಅನುಮಾನವಾಗಿದೆ ಎಂದು ತಿಳುಸಿದರು.
ನನಗೆ ಮೈಸೂರಿನ ಪತ್ರಕರ್ತರು ನೀವು ಅಧ್ಯಕ್ಷರಾದ ನಂತರ ಯಾವುದೇ ಹೋರಾಟ ತಾರ್ಕಿಕ ಅಂತ್ಯಕ್ಕೆ ಹೊತ್ಯೊಯ್ಯುತ್ತಿಲ್ಲ ಎಂದು ಪ್ರಶ್ನೆ ಕೇಳಲಾಗಿತ್ತು. ಆಗ ಪತ್ರಕರ್ತರಿಗೆ ನಾನು ಉತ್ತರಿಸಿದ್ದೆ. ಸಿಎಂ ಮೈಸೂರಿಗೆ ಬಂದಾಗ ಕೇಳಿ ವಾಲ್ಮೀಕಿ ಹಗರಣದಲ್ಲಿ ಯಾರು ಸಚಿವರ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮಾಡಿದ್ದು ಎಂದು ಕೇಳಿ ಎಂದಿದ್ದೆ.
ಮೂಡಾಹಗರದಲ್ಲಿ ಸಿಎಂ ಅವರು 14 ನಿವೇಶನ ಹಿಂತಿರುಗಿಸಿದರು. ಇದು ಸಂಘಟಿತ ಹೋರಾಟದ ಗೆಲವಾಗಿದೆ. ಪಕ್ಷ ಸಂಘಟನೆಯನ್ನ ನಿರಂತರವಾಗಿ ಮಾಡುತ್ತಿರುವುದು. ಹಿಂದುಳಿದ ಮತ್ತು ದಲಿತ ನಾಯಕರನ್ನಗುರುತಿಸಿ ಮುಂಚೂಣಿಗೆ ತರುವಂತಹದ್ದು. ರಾಜ್ಯ ಭ್ರಷ್ಠ ಸರ್ಕಾರದ ವಿರುದ್ಧ ನಿರಂತರ ಹೋರಾಟ ಮಾಡಿ ಬಂಡವಾಳವನ್ನ ಬಯಲು ಮಾಡಬೇಕಿದೆ ಎಂದು ಕರೆ ನೀಡಿದರು.
ಬಿಜೆಪಿ ಕಾರ್ಯಕರ್ತರಾಗಿ ಉದ್ದೇಶ ಮತ್ತು ಗುರಿಯಿದೆ. ಇತರೆ ರಾಷ್ಟ್ರೀಯ ಪಕ್ಷದ ವ್ಯತ್ಯಾಸವೆಂದರೆ ಬಿಜೆಪಿ ಕಾರ್ಯಕರ್ತರಿಗೆ ರಾಷ್ಟ್ರೀಯತೆ ಮತ್ತು ರಾಷ್ಡ್ರೀಯ ವಿಷಯದ ಬಗ್ಗೆ ಬದ್ಧತೆಯಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ಜೆಪಿ ರಾಜ್ಯಾಧ್ಯಕ್ಷ ವಿಜೇಂದ್ರ ತಿಳಿಸಿದರು.
ಹಗಲು ರಾತ್ರಿ ಹೋರಾಟ ನಡೆಸಿಕೊಂಡು ಬಂದ ಬಿಜೆಪಿ ಕಾರ್ಯಕರ್ತರಿಗೆ ಔಪಚಾರಿಕತೆಯ ಬದ್ಧತೆ ಬೆಫೆಸಿಕೊಂಡು ಬಂದಿದ್ದೇವೆ. 2014 ರಲ್ಲಿ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ, 2019 ಮತ್ತು 2024 ರಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಬಂದಿದೆ. ಮೂರನೇ ಬಾರಿಗೆ ಮೋದಿ ನೇತೃತ್ವದ ಸರ್ಕಾರ ಬಂದಿದೆ. ಕಾಂಗ್ರೆಸ್ ಪಕ್ಷ ಸ್ವಾತಂತ್ರ್ಯ ನಂತರ 67 ವರ್ಷ ಸುಧೀರ್ಘ ಆಧಿಕಾರಕ್ಕೆ ಬಂದಿದೆ. ಅದು ಅನುಕಂಪ ಮತ್ತು ಬೇರೆ ಆಧಾರದ ಮೇರೆ ಬಂದಿದೆ.
ಮೋದಿ ಸಕಾರಾತ್ಮಕ ಅಂಶ ಮತ್ತು ಅಭಿವೃದ್ಧಿಯ ಆಧಾರದ ಮೇಲೆ ಬಂದಿದೆ.ಅನುಪದ ಆಧಾರದ ಮೇರೆ ಬಂದಿಲ್ಲ. ಮೋದಿ ಯೋಜನೆ ಕಾರ್ಯಕ್ರಮವನ್ನ ಕಾರ್ಯಕರ್ತರು ಮನೆಮನೆಗೆ ತಲುಪಿಸಬೇಕಿದೆ. ಸಾಮಾಜಿಕ ನ್ಯಾಯವನ್ನ ಜನರಿಗೆ ತಲುಪಿಸಬೇಲಿದೆ. ಪ್ರತಿಯೊಬ್ಬ ಕಾರ್ಯಕರ್ತರು ಮೋದಿಜಿ ಅಬರ ರಾಯಭಾರಿಯಾಗಿ ಕೆಲಸ ಮಾಡಬೇಕಿದೆ ಎಂದರು.
ಪಕ್ಷ ಸದೃಢಗೊಳಿಸಬೇಕು. ಕೇಂದ್ರ ಸರ್ಕಾರದ ಯೋಜನೆಯನ್ನ ಮನೆಮನೆಗೆ ತಲುಪಿಬೇಕಿದೆ. ಇಂದು ರಾಜಕೀಯ ಪರಿಸ್ಥಿತಿ ಸಿದ್ದರಾಮಯ್ಯ ಸರ್ಕಾರದ ಶಾದಕರ ಹೇಳಿಕೆ ಗಮನಿಸಿ.ಅಭಿವೃದ್ಧಿಗೆ ಅನುದಾನ ಕೊಡ್ತಾಯಿಲ್ಲ ಆತ್ಮಹತ್ಯೆಗೆ ಕಾರಣವಾಗಿದೆ ಎಂ್ಉ ಆಡಳಿತ ಪಕ್ಷದ ಶಾಸಕರು ಹೇಳಿತ್ತಾರೆ. ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಅಭಿವೃದ್ಧಿಗೆ ಗ್ಯಾರೆಂಟಿ ಹಣ ನಿಲ್ಲಿಸಬೇಕು. ಮತ್ತೋರ್ವರು ಲಾಟರಿ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಎದ್ದು ಬಂದಿದ್ದಾರೆ.
The state government is financially bankrupt - BY Vijendra