SUDDILIVE || SHIKARIPURA
SSLC ಪರೀಕ್ಷೆಯನ್ನ ಬೇರೊಬ್ಬ ವಿದ್ಯಾರ್ಥಿ ಬರೆಯಲು ಯತ್ನ-ದೂರು-Complaint about attempt to have another student write SSLC exam
SSLC ಪರೀಕ್ಷೆ 3ರಲ್ಲಿ ಅಭ್ಯರ್ಥಿಯ ಬದಲು ಮತ್ತೊಬ್ಬ ಅಭ್ಯರ್ಥಿ ಪರೀಕ್ಷೆಗೆ ಹಾಜರಾಗಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆ ಪರೀಕ್ಷಾ ಕೇಂದ್ರದ ಮುಖ್ಯಸ್ಥರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಶಿಕಾರಿಪುರದ ಪರೀಕ್ಷಾ ಕೇಂದ್ರವೊಂದರಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ 3ರ ವಿಜ್ಞಾನ ಪರೀಕ್ಷೆಗೆ ಒಬ್ಬ ವಿದ್ಯಾರ್ಥಿಯ ಬದಲು ಮತ್ತೊಬ್ಬ ಯುವಕ ಪರೀಕ್ಷೆಗೆ ಹಾಜರಾಗಿದ್ದ. ಪರೀಕ್ಷಾ ಕೇಂದ್ರದಲ್ಲಿ ಪ್ರವೇಶ ಪರೀಕ್ಷೆ ಪರಿಶೀಲನೆ ವೇಳೆ ಹಾಲ್ ಟಿಕೆಟ್‌ನಲ್ಲಿ ವಿದ್ಯಾರ್ಥಿಯ ಫೋಟೊದ ಮೇಲೆ ಇಂಕ್ ಹಾಕಲಾಗಿತ್ತು ಎಂದು ಆರೋಪಿಸಲಾಗಿದೆ.
ಮೇಲ್ವಿಚಾರಕರು ಮೂಲ ಪ್ರತಿಯನ್ನು ತಂದು ಪರಿಶೀಲಿಸಿದಾಗ ವಿದ್ಯಾರ್ಥಿ ಬದಲು ಬೇರೊಬ್ಬ ಯುವಕ ಪರೀಕ್ಷೆಗೆ ಹಾಜರಾಗಿರುವುದು ಗೊತ್ತಾಗಿದೆ ಎಂದು ಆರೋಪಿಸಲಾಗಿದೆ. ಶಿಕಾರಿಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Complaint about attempt to have another student write SSLC exam