ad

ಕುಸಿದು ಬಿದ್ದ ಹೆಂಚಿನ ಛಾವಣಿ- tiles collpsed

SUDDILIVE || HOLEHONNURU

ಕುಸಿದು ಬಿದ್ದ ಹೆಂಚಿನ ಛಾವಣಿ-tiles collpsed

Tiles, collapsed

ಕಳೆದ ಕೆಲ ದಿನಗಳಿಂದ ಬೀಳುತ್ತಿರುವ ಮಳೆಯಿಂದಾಗಿ ಪಟ್ಟಣದ ಪೇಟೆಬೀದಿ ರಸ್ತೆಯಲ್ಲಿ ಕಲ್ಪನಾ ಎಂಬುವರ ಹೆಂಚಿನ ಮನೆಯ ಛಾವಣಿಯು ಕುಸಿದು ಬಿದ್ದಿದೆ. 

ಶುಕ್ರವಾರ ಕಲ್ಪನಾ ಅವರು ಶಿವಮೊಗ್ಗದ ಸೋದರನ ಮನೆಗೆ ಹೋಗಿದ್ದರಿಂದ ಮನೆಯಲ್ಲಿ ಯಾರು ಇರಲಿಲ್ಲ ಹಾಗಾಗಿ ಯಾವುದೇ ಪ್ರಾಣಾಪಾಯವಾಗಿಲ್ಲ. ಮನೆಗೆ ಬಂದು ನೋಡಿದಾಗ ಛಾವಣೆ ಕುಸಿದಿರುವುದು ಕಂಡು ಬಂದಿದೆ. ಇದರಿಂದ ಮನೆಯ ಹಂಚುಗಳು ಬಿದ್ದಿದ್ದರಿಂದ ಮನೆಯಲ್ಲಿದ್ದ ನಿತ್ಯ ಬಳಕೆಯ ಸಾಕಷ್ಟು ವಸ್ತುಗಳು ಹಾಳಾಗಿವೆ. 


ಕಲ್ಪನಾ ಅವರು ಟೈಲರಿಂಗ್ ಕೆಲಸ ಮಾಡಿಕೊಂಡು ಬರುತ್ತಿದ್ದ ಅಲ್ಪ ಆದಾಯದಿಂದ ಜೀವನ ನಡೆಸುತ್ತಿದ್ದರು. ಈ ಪ್ರಕೃತಿ ವಿಕೋಪಕ್ಕೆ ಮನೆ ತುತ್ತಾಗಿರುವುದರಿಂದ ಸೂರು ಇಲ್ಲದೆ ನಿರ್ಗತಿಕರಾಗಿದ್ದಾರೆ. ಆದ್ದರಿಂದ ಸರ್ಕಾರದಿಂದ ದೊರೆಯಬಹುದಾದ ತುರ್ತು ಪರಿಹಾರ ನೀಡಿ ಶಾಶ್ವತ ಆಸರೆ ಕಲ್ಪಿಸಿಕೊಡಬೇಕೆಂದು ಸ್ಥಳೀಯರು ಮನವಿ ಮಾಡಿದ್ದಾರೆ.

Tikes collapsed

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close