ad

ವಿಶ್ವ ಹಿಂದೂ ಪರಿಷತ್ ಪ್ರಮುಖರಾದ ಕೃಷ್ಣಾಮೂರ್ತಿ ಹೃದಯಾಘಾತಕ್ಕೆ ಬಲಿ-Vishwa Hindu Parishad leader Krishnamurthy dies of heart attack

 SUDDILIVE || SHIVAMOGGA

ವಿಶ್ವ ಹಿಂದೂ ಪರಿಷತ್ ಪ್ರಮುಖರಾದ ಕೃಷ್ಣಾಮೂರ್ತಿ ಹೃದಯಾಘಾತಕ್ಕೆ ಬಲಿ-Vishwa Hindu Parishad leader Krishnamurthy dies of heart attack

Vhp, heartattack


ಹೃದಯಾಘಾತಕ್ಕೆ ವಿಶ್ವ ಹಿಂದೂ ಪರಿಷತ್ ಪ್ರಮುಖರಾದ ಕೃಷ್ಣಮೂರ್ತಿ(45) ಎಂಬುವರು ಬಲಿಯಾಗಿದ್ದಾರೆ. ಹೃದಯಾಘಾತದ ಪ್ರಕರಣ ಹೆಚ್ಚುತ್ತಿರುವ ಈ ದಿನಗಳಲ್ಲಿ ಇವರ ಸಾವು ಆಘಾತಮೂಡಿಸಿದೆ. 

ಗಾಂಧಿ ಬಜಾರ್ ನ ಐದನೇ ತಿರುವಿನಲ್ಲಿ ದಿನಸಿ ಅಂಗಡಿಯೊಂದಿಗೆ ಮನೆಯಲ್ಲಿ ವಾಸವಾಗಿದ್ದ  ಕೃಷ್ಣಮೂರ್ತಿ ಅವರು ಇಂದು ಮಕ್ಕಳನ್ನ ಬೆಳಿಗ್ಗೆ 10 ಗಂಟೆಗೆ ಮಕ್ಕಳನ್ನ ಶಾಲೆಗೆ ಬಿಟ್ಟು ಬಂದಿದ್ದಾರೆ. ಅಂಗಡಿಯಲ್ಲಿದ್ದ ವೇಳೆ ಸಣ್ಣಕ್ಕೆ ಎದೆ ನೋವು ಕಾಣಿಸಿಕೊಂಡಿದೆ. 

ತಕ್ಷಣವೇ ಪತ್ನಿಯೊಂದಿಗೆ ಖಾಸಗಿ ಆಸ್ಪತ್ರೆಗೆ ತೆರಳಿದ್ದಾರೆ. ಆಸ್ಪತ್ರೆಯ ಪ್ರವೇಶ ದ್ವಾರದ ಬಳಿ ಕುಸಿದು ಬಿದ್ದಾರೆ. ತಕ್ಷಣವೇ ಅವರನ್ನ ತಪಾಸಣೆ ನಡೆಸಿದ ವೈದ್ಯರು ಮೆಗ್ಗಾನ್ ಗೆ ತೆಗೆದುಕೊಂಡು ಹೋಗಲು ಸೂಚಿಸಿದ್ದಾರೆ. ಮೆಗ್ಗಾನ್ ಗೆ ಕರೆದುಕೊಂಡು ಹೋದಾಗ ಮಾರ್ಗ ಮಧ್ಯದಲಗಲಿಯೇ ಕೃಷ್ಣಮೂರ್ತಿ ಅವರ ಪ್ರಾಣ ಪಕ್ಷಿ ಹಾರಿಹೋಗಿದೆ. 

ಸಣ್ಣ ವಯಸ್ಸಿನಲ್ಲಿ ಇವರ ಸಾವು ಚರ್ಚೆಗೆ ಕಾರಣವಾಗಿದೆ. ಕುಟುಂಬವು ಕೃಷ್ಣಮೂರ್ತಿ ಅವರ ಹೃದಯಾಘಾತಕ್ಕೆ ಕಾರಣ ತಿಳಿಸುವಂತೆ ಕೋಟೆ ಪೊಲೀಸ್ ಠಾಣೆಗೆ ಮನವಿ ಮಾಡಿಕೊಂಡಿದೆ. ಸರ್ಕಾರ ಹೃದಯಾಘಾತದ ಬಗ್ಗೆ ಮನವಿ ನೀಡಲು ಅವಕಾಶ ಮಾಡಿಕೊಟ್ಟ ಹಿನ್ನಲೆಯಲ್ಲಿ ಕುಟುಂಬ ಈ ಕ್ರಮ ಜರುಗಿಸಿದೆ. 

Vishwa Hindu Parishad leader Krishnamurthy dies of heart attack

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close