SUDDILIVE || SHIVAMOGGA
ಸಿಗಂದೂರು ಸೇತುವೆ ಉದ್ಘಾಟನೆ ಎಲ್ಲಿ ನಡೆಯುತ್ತೆ? ಸಂಸದರು ಹೇಳಿದ್ದೇನು?Where will the inauguration of Sigandur Bridge take place? What did the MP says?
ಜು.14 ರಂದು ಸಿಗಂದೂರಿನಲ್ಪಿ ಸೇತುವೆ ಉದ್ಘಾಟನೆ ಆಗಲಿದ್ದು ಸಾಗರದ ಗಾಂಧಿ ಮೈದಾನದಲ್ಲಿ ಸಾರ್ವಜನಿಕ ಸಮಾರಂಭ ಜರುಗಲಿದೆ ಎಂದು ಸಂಸದ ರಾಘವೇಂದ್ರ ತಿಳಿಸಿದರು.
ತುಂಗ ನದಿಗೆ ಬಾಗಿನ ಅರ್ಪಿಸಿ ನಂತರ ಮಾಧ್ಯಮಗಳಿಗೆ ಮಾತನಾಡಿ, ಜು.14 ರಂದು ಬೆಳಿಗ್ಗೆ ಸಚಿವ ನಿತಿನ್ ಗಡ್ಕರಿ ಸಿಗಂದೂರು ಸೇತುವೆಯ ಲೋಕಾರ್ಪಣೆ ಮಾಡಲಿದ್ದು, ಮಧ್ಯಾಹ್ನ 12 ಗಂಟೆಗೆ ಸಾಗರದ ನೆಹರು ಮೈದಾನದಲ್ಲಿ ನಡೆಯುವ ಸಾರ್ವಜನಿಕ ಸಭೆಯಲ್ಲಿ ಭಾಗಿಯಾಗಲಿದ್ದಾರೆ.
ಇದೇ ಸಂದರ್ಭದಲ್ಲಿ 925 ಕೋಟಿ ವೆಚ್ಚದ ರಾಷ್ಟ್ರೀಯ ಹೆದ್ದಾರಿ 369 ಇ ಸಾಗರದಿಂದ ಮರುಕುಟಿಕದವರೆಗೆ ಸಾಗರ ಪಟ್ಟದ ಬೈಪಾಸ್ ಸೇರಿ ದ್ವಿಪಥ ಸಂಪರ್ಕ ರಸ್ತೆಯ ಶಂಕು ಸ್ಥಾಪನಾ ಸಮಾರಂಭ ನಡೆಯಲಿದೆ. ಒಟ್ಟು 2056 ಕೋಟಿ ವೆಚ್ಚದ ಕಾಮಗಾರಿಗಳು ಜಿಲ್ಲೆಗೆ ಬಿಡುಗಡೆಯಾಗಿದ್ದು ಅವುಗಳು ಚಾಲನೆಯಲ್ಲಿದೆ. ಎಂದರು.
ಇದೇ ವೇಳೆ ರಾಷ್ಟ್ರೀಯ ಹೆದ್ದಾರಿ 13 ರ ಚಿತ್ರದುರ್ಗದಿಂದ ಶಿವಮೊಗ್ಗದವರೆಗೆ ಬಾಕಿ ಇರುವ ದ್ವಿಪಥ ರಸ್ತೆ ನಿರ್ಮಾಣಕ್ಕೆ 518.93 ಕೋಟಿ, ವಿದ್ಯಾನಗರದ ರೈಲ್ವೆ ಅಂಡರ್ ಪಾಸ್ ಕಾಮಗಾರಿಗೆ 48 ಕೊಟಿ, ತೀರ್ಥಹಳ್ಳಿಯಿಂದ ಕೊಪಗಪದವರೆಗೆ 96 ಕೋಟಿ ತೀರ್ಥಹಳ್ಳಿಯ ತುಂಗ ಸೇತುವೆ, ಬೈಪಾಸ್ ರಸ್ತೆ, ತೀರ್ಥಹಳ್ಳಿಯಿಂದ ಆಗುಂಬೆಯ ವರೆಗೆ ಮೂರು ಕಿರು ಸೇತುವೆ, ಆಗುಂಬೆಯಿಂದ ಮೇಗರವಳ್ಳಿಯವರೆಗೆ 96 ಕೋಟಿ ವೆಚ್ಚದಲ್ಲಿ ದ್ವಿಪಥ ರಸ್ತೆ ಕಾಮಗಾರಿ ಸೇರಿದಂತೆ 16 ಕಾಮಗಾರಿಗಳು ಜಿಲ್ಲೆಯ ಒಳಗೆ ಪ್ರಗತಿಯಲ್ಲಿವೆ.
2022-23 ರಲ್ಲಿ ಮಂಜೂರಾದ ಮೂರು ಕಾಮಗಾರಿ, 2024-25 ರಂದು ಆಗುಂಬೆ ಘಾಟಿ ಅಭಿವೃದ್ಧಿ ರೂ.420 ಕೋಟಿ ವೆಚ್ಛದಲ್ಲಿ ನಡೆಯಲಿದೆ. ಒಟ್ಟು ಇದೂ ಸೇರಿದಂತೆ 4 ಕಾಮಗಾರಿ ಜರುಗಲಿದೆ ಎಂದರು.
ಬಾಗಿನ ಅರ್ಪಣೆ
ಗುರು ಪೂರ್ಣಿಮ ದಿನವಾಗಿದೆ. ಜ್ಞಾನೇಂದ್ರ ನೇತೃತ್ವದಲ್ಲಿ ಬಾಗಿನ ನೀಡಲಾಗಿದೆ ಪ್ರಕೃತಿಗಿಂತ ದೊಡ್ಡ ಗುರು ಬೇರೆಯಿಲ್ಲ. ಪ್ರಕೃತಿ ಸರಿಸಮಾನವಾಗಿ ಮಳೆಯಾಗಿದೆಬೆಳೆಗೆ ಅನುಕೂವಾಗಿದೆ. ಆಶಾದಾಯಕ ಮಾನ್ಸೂನ್ ಆಗಿದೆ ಎಂದರು.
ಸೇತುವೆಗೆ ಹೆಸರಿಡುವ ಬಗ್ಗೆ ಅನೇಕ ಅಭಿಪ್ರಾಯಗಳು ಕೇಳಿ ಬರುತ್ತಿದೆ. ನಮ್ಮ ಅಭಿಪ್ರಾಯವನ್ನ ಸರ್ಕಾರಕ್ಕೆ ತಿಳಿಸಿದ್ದೇವೆ ನಂತರ ಏನಾಗಲಿದೆ? ಸರ್ಕಾರ ಏನೋಡೋಣ ಕಾದು ನೋಡೋಣ ಎಂದರು.
ಇನ್ನೂ ಶಿವಮೊಗ್ಗದಿಂದ ವಂದೇಭಾರತ್ ರೈಲು ಸಙಚಾರದ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಂಸದರು, ಕೋಟೆಗಂಗೂರಿನಲ್ಲಿ ರೈಲ್ವೆ ಡಿಪೋ ಆದ ನಂತರ ಶಿವಮೊಗ್ಗ ತಿರುಪತಿ, ಕೇರಳದ ಎರ್ನಾಕುಲಂ ವಡೋದರ ಮೊದಕಾದ 6 ಕಡೆ ಸಂಚರಿಸಲಿದೆ ಎಂದರು.
Where will the inauguration of Sigandur Bridge take place? What did the MP says?