ad

ಬಿಜೆಪಿಗೆ ಕಿಮ್ಮನೆ ರತ್ನಾಕರ್ ಪ್ರಶ್ನೆ-Kimmane Rathnakar questions Bjp

 SUDDILIVE || SHIVAMOGGA

ಬಿಜೆಪಿಗೆ ಕಿಮ್ಮನೆ ರತ್ನಾಕರ್ ಪ್ರಶ್ನೆ-Kimmane Rathnakar questions Bjp

Kimmane, Rathnakar


ಬಿಹೆಪಿಗರಿಗೆ ಹಲವು ಪ್ರಶ್ನೆಯ ಮೂಲಕ  ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹಲವು ಪ್ರಶ್ನೆಗಳ ಅಭಿಪ್ರಾಯಗಳನ್ನ ಕೇಳಿದ್ದಾರೆ. ಸಂವಿದಾನ ಬದಲಾವಣೆ ಮಡುವುದು ಬಿಜೆಪಿಯ ಹಿಡನ್ ಅಜೆಂಡಾವಾಗಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ವಾಗ್ದಾಳಿ ನಡೆಸಿದ್ದಾರೆ. 

ಪ್ರಧಾನಿ ಮೋದಿಯವರ ಆಡಳಿತ ಮತ್ತು ಆರ್ಥಿಕ ನೀತಿ ಶ್ರೀಮಂತರನ್ನ ಅತಿ ಶ್ರೀಮಂತರನ್ನಾಗಿ, ಮಧ್ಯಮದವರನ್ನ ಬಡವರನ್ನಾಗಿಸುವ ಬಡವರನ್ನ ಕಡುಬಡವರನ್ನಾಗಿಸುವ ನೀತಿಯಾಗಿದ್ದು ಕಾಂಗ್ರೆಸ್ ಇದನ್ನ ಖಂಡಿಸುತ್ತದೆ ಎಂದು ಅವರು ಆಗ್ರಹಿಸಿದರು.

ಕಾಂಗ್ರೆಸ್ ಜಾತ್ಯಾತೀತತೆ ಬಗ್ಗೆ ಒಲವಿದೆ. ಬಿಜೆಪಿಗೆ ಒಲವಿದೆಯಾ? ಆರ್ ಎಸ್ ಎಸ್ ಮತ್ತು ಬಿಜೆಪಿ ಸಂವಿಧಾನವನ್ನ ನಂಬುತ್ತದೆಯಾ? ಸಂವಿಧಾನ ಒಪ್ಪುವುದಾದರೆ ಇದನ್ನ ವಿರೋಧಿಸಬೇಕಿದೆ. ಇದರ ಬಗ್ಗೆ ಬಿಜೆಪಿ ಸ್ಪಷ್ಠಿಕರಿಸಬೇಕೆಂದರು‌. 

ಮನು ಧರ್ಮವನ್ನ ಒಪ್ಪಿಕೊಳ್ಳುವ ನೀವು ಸಂವಿಧಾನದಲ್ಲಿಹೇಗೆ ನಂಬಿಕೆ ಇಡುತ್ತೀರಾ? ವಿಶ್ವಗುರು ಎಂಬ ನಾಮಕರಣ ಮಾಡಿರುವ ಮೋದಿಗೆ ಕಾರ್ಯಕರ್ತರು ಕೊಡುವುದಲ್ಲ. ಅದು ಬುದ್ಧನಿಗೆ ನೀಡಿದ ಗೌರವವಾಗಿದೆ. ಬುದ್ಧ ದೇಶದ ಗಡಿ ದಾಡಿ ನೆಲಸಿದ್ದಾನೆ. ಆ ರೀತಿ ಮೋದಿ ಆಗಿಲ್ಲ. ಅಮಿತ್ ಶಾ ಅವರು ಇಂಗ್ಲೀಷ್ ನ್ನ ತಿರಸ್ಕರಿಸಬೇಕು ಎಂದು ಹೇಳಿದ್ದಾರೆ. ಈ ದೇಶದಲ್ಲಿ ಸಂಸ್ಕೃತ ಮೊದಲನೆ ಭಾಷೆಯಾಗಿದೆ. 4000 ಸಂಪರ್ಕ ಭಾಷೆ ಬೇರೆಯಾಗಿದೆ. 

ಹಾಗಾಗಿ ಇಂಗ್ಲೀಷನ್ನ ತಿರಸ್ಕರಿಸಿ ಎನ್ನಲಾಗಿದೆ. ಸಂವಿಧಾನದಲ್ಲಿ ಜಾತ್ಯಾತೀತತೆಯನ್ನ ಸ್ವಾಮಿವಿವೇಕಾನಂದ, ನಾರಾಯಣ ಗುರು, ಅಂಬೇಡ್ಕರ್ ಸಹ ಒಪ್ಪಿಕೊಂಡಿದ್ದರು. ಆರ್ ಎಸ್ಎಸ್ ನ ಸರಸಂಚಾಲಕ ದತ್ತಾತ್ರಿ ಹೊಸಬಾಳೆ ತಿರಸ್ಕರಿಸುವುದಾಗಿ ಹೇಳಿದ್ದಾರೆ. 

ಒಕ್ಕೂಟ ವ್ಯವಸ್ಥೆಯನ್ನ ತಿರಸ್ಕರಿಸಿರುವುದಾಗಿ ಬಿಜೆಪಿ ಹೇಳಿದೆ. ಮೀಸಲಾತಿ ತೆಗೆಯುವುದಾಗಿ ಹೇಳುವ ಬಗ್ಗೆ ಸಂವಿಧಾನ ಬದಲಾವಣೆ ಮಾಡುವುದಾಗಿ ಹೇಳಿದ್ದಾರೆ. ಇದನ್ನ ಹೆಗ್ಗಡೆವಾರ್ ಒಪ್ಪಿಕೊಂಡಿದ್ದಾರೆ. ಆದರೆ ಕಾಂಗ್ರೆಸ್ ಸಂವಿಧಾನ ಬದಲಾಯಿಸುವ ಮೂಲಕ ತಿರುಚಲಾಗುತ್ತಿದೆ. ಸಂವಿಧಾನ ಬದಲಿಸುತ್ತೇವೆ ಎನ್ನುವ ಶಾಸಕನೋರ್ವನಿಗೆ ಬಿಜೆಪಿ ಚುನಾವಣೆ ಟಿಕೇಟ್ ನಿರಾಕರಿಸಿದರೂ ಸಹ ಅದು ಅವರ ಹಿಡನ್ ಅಜೆಂಡಾ ಎಂದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close