SUDDILIVE || HOLEHONNURU
ದೆವ್ವ ಬಿಡಿಸುವುದಾಗಿ ಹೇಳಿ ಮಹಿಳೆಯ ಜೀವವನ್ನೇ ತೆಗೆದ ಮಾಟಗಾತಿ?A witch who took a woman's life by claiming to cast out demons?
ಮೈ ಮೇಲೆ ದೆವ್ವ ಬಂದಿದ್ದು, ಅದನ್ನ ಬಿಡಿಸುವುದಾಗಿ ಹೇಳಿ ಮಹಿಳೆಯ ಪ್ರಾಣವನ್ನೇ ತೆಗೆದ ಘಟನೆ ಈಗ ಹೊಳೆ ಹೊನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಗೀತಮ್ಮ(45) ಎಂಬ ಮಹಿಳೆಗೆ ಕಳೆದ 15 ದಿನಗಳಿಂದ ಅನಾರೋಗ್ಯವಾಗಿತ್ತು. ಇದನ್ನ ಗಮನಿಸಿದ ಮಗ ಸಂಜಯ್ ತಾಯಿಯನ್ನ ಹಳೆ ಜಂಬರಕಟ್ಟೆಯ ಆಶಾ ಯಾನೆ ಶಾಂತಮ್ಮ ಎಂಬುವರ ಬಳಿ ಕರೆದುಕೊಂಡು ಹೋಗಿದ್ದಾರೆ. ತಾಯಿಯನ್ನ ಪರಿಶೀಲಿಸಿದ ಆಶಾ ತಾಯಿಗೆ ಆತ್ಮ ಬಂದಿದೆ ಎಂದು ಹೇಳಿದ್ದಾಳೆ.
ಆಶಾರಿಗೂ ಕಳೆದ 15 ದಿವಸಗಳಿಂದ ಮೈಮೇಲೆ ದೇವರು ಬರುತ್ತಿದ್ದು, ದೆವ್ವ ಬಿಡಿಸುವ ಮಹಿಳೆ ಎಂದು ಊರಿನಲ್ಲಿ ಹೆಸರುವಾಸಿಯಾಗಿದ್ದಳು. ಇದರಿಂದ ಈಕೆಯ ಬಳಿ ಗೀತಮ್ಮರನ್ನ ಮಗ ಕರೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ. ನಿನ್ನೆ ಗೀತಮ್ಮರ ಮೈಮೇಲೆ ಆತ್ಮ ಬಂದಿದ್ದು ಆಶಾ ಪೂಜೆ ಆರಂಭಿಸೋಣ ಎಂದು ಗೀತಮ್ಮಳನ್ನ ಮೆರವಣಿಗೆಯ ಮೂಲಕ ಊರ ಹೊರಗೆ ಕರೆದುಕೊಂಡು ಬಂದು ಕೋಲಿನಿಂದ ಹೊಡೆಯುವ ಪೂಜೆ ಆರಂಭಿಸಿದ್ದಾರೆ.
ಈ ವಿಡಿಯೋ ವೈರಲ್ ಆಗಿದೆ. ಗೀತಮ್ಮ ಈ ಘಟನೆಯಿಂದ ಜರ್ಜರಿತಳಾಗಿ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ. ಆಕೆಯ ಶವವನ್ನ ಹೊಳೆಹೊನ್ನೂರು ಸಮುದಾಯ ಭವನದಲ್ಲಿರಿಸಲಾಗಿದೆ. ಘಟನೆ ದೂರು ದಾಖಲಿಸಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಆಶಾ ಮತ್ತು ಅವರ ಗಂಡನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.
claiming to cast out demons,