ad

ತಗ್ಗಿದ ತುಂಗೆಯ ಆರ್ಭಟ-inflow down of the river Tunga

 SUDDILIVE || SHIVAMOGGA

ತಗ್ಗಿದ ತುಂಗೆಯ ಆರ್ಭಟ-inflow down of the river Tunga

Inflow, river


ಶಿವಮೊಗ್ಗದಲ್ಲಿ ರಾತ್ರಿ ಸ್ವಲ್ಪ ಮಳೆ ಬಿದ್ದರೂ ತುಂಗ ನದಿಯ ಜಲಾನಯನ ಪ್ರದೇಶದಲ್ಲಿ ಮಳೆ ಕೊಂಚ ಕಡಿಮೆಯಿಂದಾಗಿ ನದಿಯ ಒಳಹರಿವು ತಗ್ಗಿದೆ. ನಿನ್ನೆ ಬೆಳಿಗ್ಗೆ 80 ಸಾವಿರ ಕ್ಯೂಸೆಕ್ ನೀರು ಒಳಹರಿವು ಬಂದ ಹಿನ್ನಲೆಯಲ್ಲಿ ಆತಂಕ ಮೂಡಿಸಿದ್ದ ನದಿಯ ನೀರು ಈಗ ಸಾಧಾರಣ ಮಟ್ಟದಲ್ಲಿ ಹರಿಯುತ್ತಿದೆ.

ನಿನ್ನೆ ರಾತ್ರಿ 64 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿತ್ತು. ಇಂದು ಬೆಳಿಗ್ಗೆ ಮತ್ತೊಮ್ಮೆ ಗೇಜ್ ರೀಡಗ್ ಆಗಲಿದ್ದು ಸಧ್ಯಕ್ಕೆ 55 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಗಾಜನೂರು ಜಲಾಶಯದಲ್ಲಿ 22 ಗೇಟ್ ಗಳನ್ನ ತೆರೆದು ನದಿಗೆ ನೀರು ಹರಿಸಲಾಗುತ್ತಿದೆ. ನಿನ್ನೆ 80 ಸಾವಿರ ಕ್ಯೂಸೆಕ್ ನೀರು ಒಳಹರಿವಿನ ಹಿನ್ನಲೆಯಲ್ಲಿ ಮಹಾನಗರ ಪಾಲಿಕೆ ನದಿಪಾತ್ರದ ಬಡಾವಣೆಗಳಲ್ಲಿ ಸ್ಥಳಾಂತರಕ್ಕೆ ಮೈಕ್ ಅನೌನ್ಸ್ ಮೆಂಟ್ ಮಾಡಲಾಗಿತ್ತು. 

ಇಂದು ಮಂಟಪ ಮುಳುಗಿದ್ದರೂ ಒಳಹರಿವು ಕಡಿಮೆಯಾಗಿದೆ

inflow down of the river Tunga

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close