SUDDILIVE || SHIVAMOGGA
ರಾಗಿಗುಡ್ಡದ 17 ಗಣಪತಿ ವಿಸರ್ಜನೆ, ಟಿಪ್ಪುನಗರದಲ್ಲಿ ಸೌಹಾರ್ದತೆ ಸಾರಿದ ಯುವಕರು-17 Ganpati idols immersed in Ragigudda, youth spread harmony in Tipunagar
ರಾಗಿಗುಡ್ಡದಲ್ಲಿ ಇವತ್ತು 17 ಗಣಪತಿಗಳ ಸಾಮೂಹಿಕ ವಿಸರ್ಜನೆ ಮಾಡಲಾಗುತ್ತಿದೆ. ಇದಕ್ಕೂ ಮೊದಲು ವಿವಿಧ ರಸ್ತೆಗಳಲ್ಲಿ ಗಣಪತಿ ಮೂರ್ತಿಗಳ ಮೆರವಣಿಗೆ ನಡೆಯುತ್ತಿದೆ. ಈ ಹಿನ್ನೆಲೆ ರಾಗಿಗುಡ್ಡದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.
ರಾಗಿಗುಡ್ಡ – ಶಾಂತಿನಗರ ಬಡಾವಣೆಯ ವಿವಿಧೆಡೆ ಪ್ರತಿಷ್ಠಾಪಿಸಲಾಗಿದ್ದ 17 ಗಣಪತಿಗಳನ್ನು ಇವತ್ತು ವಿಸರ್ಜನೆ ಮಾಡಲಾಗುತ್ತಿದೆ. ಪ್ರತಿ ರಸ್ತೆಯಿಂದ ಗಣಪತಿ ಮೂರ್ತಿಗಳನ್ನು ಮೆರವಣಿಗೆಯಲ್ಲಿ ಕೊಂಡೊಯ್ದು ವಿಸರ್ಜಿಸಲಾಗುತ್ತದೆ.
ಮೆರವಣಿಗೆಯಲ್ಲಿ ವಿವಿಧ ವಾದ್ಯಗಳು, ಡೊಳ್ಳಿನ ಶಬ್ದಕ್ಕೆ ಯುವಕರು ಡಾನ್ಸ್ ಮಾಡುತ್ತಿದ್ದಾರೆ. ರಾಗಿಗುಡ್ಡ ಸೇರಿದಂತೆ ಸುತ್ತಮುತ್ತಲ ಬಡಾವಣೆಯ ನಿವಾಸಿಗಳೂ ಮೆರವಣಿಗೆಯಲ್ಲಿ ಭಾಗವಹಿಸಿದ್ದಾರೆ.
ಎಲ್ಲೆಲ್ಲು ಬಗಿ ಬಂದೋಬಸ್ತ್
ಗಣಪತಿ ಮೂರ್ತಿಗಳ ಸಾಮೂಹಿಕ ವಿಸರ್ಜನೆ ಹಿನ್ನೆಲೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಸ್ಥಳೀಯರು ಪೊಲೀಸರು, ಆರ್‌ಎಎಫ್ ತುಕಡಿ, ಕೆಎಸ್‌ಆರ್‌ಪಿ, ಡಿಎಆರ್ ಸೇರಿದಂತೆ ದೊಡ್ಡ ಸಂಖ್ಯೆಯ ಪೊಲೀಸರನ್ನು ನಿಯೋಜಿಸಲಾಗಿದೆ. ರಾಗಿಗುಡ್ಡದಲ್ಲಿರುವ ಮಸೀದಿ ಮುಂಭಾಗ ಭಾರಿ ಬಂದೊಬಸ್ತ್ ಕೈಗೊಳ್ಳಲಾಗಿದೆ.
ಸ್ನೇಹಮಿಲನ ಗಣಪತಿ ವಿಸರ್ಜನೆ
ತುಂಗಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸ್ನೇಹ ಮಿಲನ ಯುವಕರ ಸಂಘ, ಟಿಪ್ಪು ನಗರ ಬಲಭಾಗ ಒಂದನೇ ತಿರುವು ಗಣಪತಿಗೆ ಟಿಪ್ಪುನಗರದ ಸ್ಥಳೀಯ ಮುಸ್ಲಿಮ್ ಮುಖಂಡರುಗಳಾದ ಜಹೀರ್ ಖಾನ್, ಅಮ್ಜದ್, ನವಾಜ್, ಇರ್ಫಾನ್ ರವರು ಮತ್ತು ಇತರ ಎಲ್ಲಾ ಸಾರ್ವಜನಿಕರು ಗಣಪತಿಯ ಮೂರ್ತಿಗೆ ಮೆರವಣಿಗೆ ವೇಳೆ ಹೂವಿನ ಮಾಲೆಯನ್ನು ಮಾಲೆಯನ್ನು ಸಮರ್ಪಿಸಿ ಭಾವೈಕ್ಯತೆಯನ್ನು ಮೆರೆದಿರುತ್ತಾರೆ. ಈ ವೇಳೆ ಗಣಪತಿ ಕಮಿಟಿಯ ಕಾರ್ತಿಕ, ರಮೇಶ್, ಕುಮಾರ್ ದೇವೇಂದ್ರ ಸುಂದರೇಶ ರಾಮಕೃಷ್ಣ ಹಾಗೂ ಇತರೆ ಕಮಿಟಿಯ ಸದಸ್ಯರು ಹಾಗೂ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ಹಾಜರಿರುತ್ತಾರೆ.
17 Ganpati idols immersed in Ragigudda, youth spread harmony in Tipunagar

