ಲಿಂಗನಮಕ್ಕಿ ಜಲಾಶಯದಿಂದ 7 ಗೇಟ್ ತೆರೆದು ನದಿಗೆ ನೀರು-7 gates opened from Linganamakki

 SUDDILIVE || SHIVAMOGGA

ಲಿಂಗನಮಕ್ಕಿ ಜಲಾಶಯದಿಂದ 7 ಗೇಟ್ ತೆರೆದು ನದಿಗೆ ನೀರು-7 gates opened from Linganamakki reservoir, water released into the river

Linganmakki, gate

Linganmakki, gate

ಶಿವಮೊಗ್ಗ ಜಿಲ್ಲೆ, ಸಾಗರ ತಾಲೂಕಿನ ಲಿಂಗನಮಕ್ಕಿಯಲ್ಲಿ ಮತ್ತೆ ಜಲಾಶಯಕ್ಕೆ ಒಳಹರಿವು ಹೆಚ್ಚಾದ ಬೆನ್ನಲ್ಲೇ ಲಿಂಗನಮಕ್ಕಿ ಜಲಾಶಯದಿಂದ ನದಿಗೆ ನೀರು ಹರಿಸಲಾಗುತ್ತಿದೆ. ಇಂದು ಬೆಳಿಗ್ಗೆ 5 ಗೇಟು ತೆರೆದು ರೂ.10,000 ನೀರು ಹರಿಸಿದರೆ, ಮಧ್ಯಾಹ್ನದ ನಂತರ ಮತ್ತೆರಡು ಗೇಟುಗಳನ್ನು ತೆರೆದು ನೀರನ್ನು ಹರಿಸಲಾಗಿದೆ. ಇದರಿಂದ ಮತ್ತೆ ಜೋಗದಲ್ಲಿ ಜಲಪಾತಗಳು ಮೈದುಂಬಿಕೊಂಡಿವೆ.




ಮಧ್ಯಾಹ್ನದ ನಂತರ ಒಟ್ಟು 7 ಗೇಟ್ ಗಳಿಂದ 15000 ಕ್ಯೂ ಸೆಕ್ ನೀರನ್ನ ಜಲಾಶಯಕ್ಕೆ ಹರಿಸಲಾಗಿದೆ. ಇಂದು ಬೆಳಿಗ್ಗೆ ಜಲಾಶಯಕ್ಕೆ 20154 ಕ್ಯೂಸೆಕ್ ನೀರು ಹರಿದು ಬರುತ್ತಿದ್ದರೆ ಮಧ್ಯಾಹ್ನದ ನಂತರ 25 ಕ್ಯೂಸೆಕ್ ಒಳಹರಿವಿತ್ತು. ಇದರಿಂದ ಗರಿಷ್ಠ 1819 ಅಡಿ ನೀರು ಸಂಗ್ರಹದ ಜಲಾಶಯದಲ್ಲಿ ಈಗ ಸಧ್ಯಕ್ಕೆ 1817.30 ಅಡಿ ನೀರು ಸಂಗ್ರಹವಿದೆ. ಕಳೆದ ವರ್ಷವೂ ಈ ಸಮಯದಲ್ಲಿ ಇಷ್ಟೇ ಮಟ್ಟದ ನೀರು ಸಂಗ್ರಹವಿತ್ತು. 

ಈ ಕುರಿತು ಸುದ್ದಿಲೈವ್ ಗೆ ಮಾಹಿತಿ ನೀಡಿದ ಲಿಂಗನಮಕ್ಕಿ ಜಲಾಶಯದ ಅಧಿಕಾರಿ ಶಿವಕುಮಾರ್ ಇಂದು  ಲಿಂಗನಮಕ್ಕಿ ಜಲಾನಯನ ಪ್ರದೇಶದಲ್ಲಿ  ರೆಡ್ ಅಲರ್ಟ್ ಇದ್ದರೆ, ನಾಳೆ ಆರಂಜ್ ಅಲರ್ಟ್ ಇದೆ ಈ ಹಿನ್ಬಲೆಯಲ್ಲಿ ಜಲಾಶಯದ 7  ಗೇಟು ತೆರೆದು ನದಿಗೆ ಹರಿಸಲಾಗುತ್ತಿದೆ ಎಂದರು. 

ಇನ್ನು ಭದ್ರಾಜಲಾಶಯಕ್ಕೆ 6511 ಕ್ಯೂಸೆಕ್ ನೀರು ಹರಿದು ಬರುತ್ತಿದ್ದರೆ 4115 ಕ್ಯೂ ಸೆಕ್ ನೀರನ್ನ ಜಲಾಶಯಕ್ಕೆ ಹರಿಸಲಾಗುತ್ತಿದೆ. 186 ಅಡಿ ನೀರು ಸಂಗ್ರಹದ ಜಲಾಶಯದಲ್ಲಿ ಇಂದು 184.5 ಅಡಿ ನೀರು ಸಂಗ್ರಹವಾಗಿದೆ ಕಳೆದ ವರ್ಷ ಈ ದಿನದ ವೇಳೆ 180.7 ಅಡಿ ನೀರಿತ್ತು. ತುಂಗ ನದಿಗೆ 12 ಸಾವಿರ ಕ್ಯೂಸೆಕ್ ನೀರು ಒಳಹರಿವಿದ್ದರೆ 10 ಸಾವಿರ ಕ್ಯೂಸೆಕ್ ಹೊರಹರಿವಿದೆ. 

7 gates opened from Linganamakki

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close