ದೇಶ ಭಕ್ತಿ ಗೀತೆಯನ್ನ ಸಹಿಸಿಕೊಳ್ಳದ ಕಾಂಗ್ರೆಸ್ ಸರ್ವನಾಶವಾಗಲಿದೆ-ಶಾಸಕ ಚೆನ್ನಬಸಪ್ಪ ಭವಿಷ್ಯ- Congress will be destroyed

 SUDDILIVE || SHIVAMOGGA

ದೇಶಭಕ್ತಿಗೀತೆಯನ್ನ ಸಹಿಸಿಕೊಳ್ಳದ ಕಾಂಗ್ರೆಸ್ ಸರ್ವನಾಶವಾಗಲಿದೆ-ಶಾಸಕ ಚೆನ್ನಬಸಪ್ಪ ಭವಿಷ್ಯ-Congress that does not tolerate patriotic songs will be destroyed - MLA Chennabasappa predicts

Congress, Mlachennabasappa



ದಸರಾ ಉದ್ಘಾಟನೆಯನ್ನ ಸಾಹಿತಿಯಿಂದ ಉದ್ಘಾಟಿಸುತ್ತಿರುವುದು ಮತ್ತು ಚಾಮುಂಡಿ ಬೆಟ್ಟ ಹಿಂದೂಗಳ ಆಸ್ತಿ ಅಲ್ಲ ಎಂದ ಡಿಕೆಶಿಗೆ ಶಿವಮೊಗ್ಗದಲ್ಲಿ ಶಾಸಕ ಚೆನ್ನ ಬಸಪ್ಪ ತಿರುಗೇಟು ನೀಡಿದ್ದಾರೆ. 

ಅವರು ಮಾಧ್ಯಮಗಳ ಮುಂದೆ ಮಾತನಾಡಿ ಸಾಹಿತಿ ಭಾನು ಮುಷ್ತಾಕ್ ಅವರ ಹೆಸರನ್ನ ಮತ್ತು ಡಿಸಿಎಂ ಡಿಕೆಶಿಯ ಹೆಸರನ್ನ ಉಲ್ಲೇಖಿಸದೆ  ವಾಗ್ದಾಳಿ ನಡೆಸಿದರು.  ರಾಜ್ಯ ಸರ್ಕಾರ ಎರಡೂ ವಿಷಯಗಳ ಕುರಿತು ಪರಿಯಾವಲೋಚನೆ ಮಾಡಬೇಕು. ಸದಾವತ್ಸಲೆ ಮಾತೃಭೂಮಿ ವಿಚಾರದಲ್ಲಿ ಡಿಕೆಶಿ ಕ್ಷಮೆ ಕೇಳಿದ್ದಾರೆ. ದೇಶ ಭಕ್ತಗೀತೆ ಹಾಡಿದರೆ ಸಹಿಸಿಕೊಳ್ಳದ ಕಾಂಗ್ರೆಸ್ ಸರ್ವನಾಶವಾಗುತ್ತೆ ಎಂದು ಭವಿಷ್ಯ ನುಡಿದರು.

ದುಷ್ಟರ ಸಂಹರ ಮಾಡಿದ ಚಾಮುಂಡಿ ದೇವಿಯ ಪೂಜೆಯ ಬದಲು ಮಹಿಷಾಸುರನ ದಿನಾಚರಣೆ ಆಚರಿಸುವ ಮನಸ್ಥಿತಿ ಉಳ್ಳವರು ರಾಜ್ಯದಲ್ಲಿದ್ದಾರೆ. ದಸರಾ ಉದ್ಘಾಟಕರಿಗೆ, ಸಾಹಿತಿಗಳಿಗೆ ನಮ್ಮ ದೇವರ ಬಗ್ಗೆ ನಂಬಿಕೆಯಿದೆಯಾ ಎಂದು ಪ್ರಶ್ನಿಸಿದ ಅವರು ದಸರಾ ಉದ್ಘಾಟನೆ ವಿಷಯದಲ್ಲಿ ಅವರು ಮೂರ್ತಿ ಪೂಜೆ ಮಾಡ್ತಾರಾ  ಎಂದು ಕೇಳಿದರು.

ಚಾಮುಂಡಿ ದೇವಿ ಕ್ರಿಶ್ಚಿಯನ್ನರದ್ದಾಗಲಿ ಅಥವಾ ಮುಸ್ಲೀಂರದ್ದಾಗಲಿ ಆಸ್ತಿನಾ? ಆ ದೇವತೆ ಹಿಂದೂಗಳ ಆಸ್ತಿ ಹಾಗಾಗಿ ರಾಜ್ಯ ಸರ್ಕಾರ ಈ ಎರಡೂ ವಿಷಯದಲ್ಲಿ ಪರ್ಯಾವಲೋಕನ ಮಾಡಬೇಕು. ಬಿಜೆಪಿ ಈ ವಿಷಯದಲ್ಲಿ ರಾಜಕಾರಣ ಮಾಡುತ್ತಿಲ್ಲ. ಆದರೆ ತುಷ್ಠೀಕರಣ ಮಾಡುವ ಭರದಲ್ಲಿ ವೈಭವೀಕರಣದ ದಸರಾಕ್ಕೆ ಯಾವ ಹಿಂದೂಗಳು ಸಿಗಲಿಲ್ಲವಾ ಇದನ್ನ ಕೇಳಿದರೆ ಕಾಂಗ್ರೆಸ್ ಉರಿದುಕೊಳ್ಳುತ್ತೆ ಎಂದು ಹೇಳಿದರು. 

ಇದನ್ನ ಎಚ್ಚರಿಕೆ ಗಂಟೆಯಾಗಿ ಹಿಂದೂ ಸಮಾಜ ತೆಗೆದುಕೊಳ್ಳಬೇಕಿದೆ. ಒಂದು ಹಂತ ಮೀರಿದರೆ ಸಹಿಷ್ಣತೆ ತಡೆಯಲಾಗದು. ಹಿಂದೂಗಳನ್ನ ಕರೆದು ದಸರಾಗೆ ಚಾಲನೆ ನೀಡಿ ಇಲ್ಲ ಅಧೋಗತಿಗೆ ಕಾಂಗ್ರೆಸ್ ಇಳಿಯಲಿದೆ ಎಂದರು. 

ಕಾಂಗ್ರೆಸ್ ಸರ್ವನಾಶವಾಗುತ್ತೆ

ಸದನದಲ್ಲಿ ಡಿಸಿಎಂ ಡಿಕೆಶಿ ಆರ್ ಎಸ್ ಎಸ್ ಗೀತೆಯನ್ನ ಹಾಡಿ ಕ್ಷಮೆಕೇಳಿದ್ದಾರೆ. ಇದಕ್ಕೆ ನಗುಬರುತ್ತೆ. ಕಾಂಗ್ರೆಸ್ ಸದಾ ವತ್ಸಲೆ ಹಾಡಿದರೆ ಸಹಿಸಿಕೊಳ್ಳಲ್ಲ. ಕಾಂಗ್ರಸ್ ಗೆ ಜನ್ಮಕೊಟ್ಟ ಯಹೂಬ್ ಯಹೂಮ್ ಈ ದೇಶದವನಲ್ಲ. ಹಾಗಾಗಿ ಈ ದೇಶಕ್ಕೆ ನಡೆದುಕೊಳ್ಳ ಬಾರದು ಎಂಬುದು ಅವರ ಉದ್ದೇಶವಾಗಿದೆ. ದೇಶ ಭಕ್ತರ ಸಂತತಿ ಹೆಚ್ಚಾಗಬೇಕಂಬ ವೇಳೆಯಲ್ಲಿ ಸದಾವತ್ಸಲೆ ಮಾತೃಭೂಮಿ ಗೀತೆ ಹಾಡಿದರೆ ದೇಶ ವಿರೋಧಿ ಗೀತೆ ಎಂಬಂತೆ ಬಿಂಬಿಸಲಾಗುತ್ತಿದೆ. ದಿನಾ ನಾವು ಈ ಮಾತೃಭೂಮಿಗೆ ಋಣವಾಗಿರಬೇಕು ಎಂಬ ಹಾಡು ಕಾಂಗ್ರೆಸ್ ಗೆ ತಡೆದುಕೊಳ್ಳಲಾಗದು. ಕಾಂಗ್ರೆಸ್ ಸರ್ವನಾಶವಾಗುತ್ತೆ ಎಂದು ಎಚ್ಚರಿಸಿದರು. 

 Congress will be destroyed

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close