SUDDILIVE. || SHIRALKOPPA
ಚಂದ್ರಗುತ್ತಿಗೆ ಪಾದಯಾತ್ರೆಗೆ ಹೊರಟಿದ್ದ ವ್ಯಕ್ತಿಗೆ ಬೈಕ್ ಡಿಕ್ಕಿ-A man who was going on a Chandragutti was hit by a bike.
ರೇಣುಕಾಂಬ ದೇವಿ ದರ್ಶನಕ್ಕೆ ಪಾದಯಾತ್ರೆ ಮಾಡುತ್ತಿದ್ದ ವ್ಯಕ್ತಿಗೆ ಬೈಕ್ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದಾರೆ. ಮಂಚಿಕೊಪ್ಪದ ಸಮೀಪ ಹಿರೇಕೆರೂರು – ಶಿರಾಳಕೊಪ್ಪ ರಸ್ತೆಯಲ್ಲಿ ಅಪಘಾತವಾಗಿದೆ.
ಘಟನೆಯಲ್ಲಿ ಪಾದಯಾತ್ರೆ ಮಾಡುತ್ತಿದ್ದ ರಾಣೆಬೆನ್ನೂರಿನ ಬೀರಪ್ಪ, ಬೈಕ್ ಸವಾರರಾದ ಅರುಣ ಮತ್ತು ಮನೋಜ್ ಎಂಬುವವರು ಗಾಯಗೊಂಡಿದ್ದಾರೆ.
ಹೇಗಾಯ್ತು ಘಟನೆ?
ರಾಣೇಬೆನ್ನೂರಿನ ಬೀರಪ್ಪ ಆರು ಮಂದಿ ತಮ್ಮೂರಿನಿಂದ ಚಂದ್ರಗುತ್ತಿಯ ಶ್ರೀ ರೇಣುಕಾದೇವಿ ದರ್ಶನಕ್ಕೆ ಪಾದಯಾತ್ರೆ ಮಾಡುತ್ತಿದ್ದರು. ಮಂಚಿಕೊಪ್ಪದ ಬಳಿ ಬೆಳಗಿನ ಜಾವ ನಡೆದು ಹೋಗುತ್ತಿದ್ದಾಗ ಹಿಂಬದಿಯಿಂದ ವೇಗವಾಗಿ ಬಂದ ಬೈಕ್ ಡಿಕ್ಕಿ ಹೊಡೆದು ಬೀರಪ್ಪ ರಸ್ತೆ ಮೇಲೆ ಬಿದ್ದಿದ್ದರು. ಎರಡು ಕಾಲು, ಕೈಗಳು, ಭುಜಕ್ಕೆ ಪೆಟ್ಟಾಗಿತ್ತು. ಬೈಕ್‌ನಲ್ಲಿದ್ದ ಅರುಣ್ ಮತ್ತು ಮನೋಜ್ ಎಂಬುವವರಿಗು ತರಚಿದ ಗಾಯವಾಗಿತ್ತು.
ಗಾಯಾಳುಗಳನ್ನು ಕೂಡಲೆ ಶಿರಾಳಕೊಪ್ಪ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಘಟನೆ ಸಂಬಂಧ ಶಿರಾಳಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
A man hit by bike