SUDDILIVE || SORABA
ಹಿಂಜಾವೆಯಿಂದ ಆ.11 ರಂದು ಬೃಹತ್ ಪಂಜಿನ ಮೆರವಣಿಗೆ-Huge torchlight procession from Hinjave on August 11th
ಹಿಂದೂ ಜಾಗರಣ ವೇದಿಕೆ ತಾಲೂಕು ಘಟಕದಿಂದ ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ಬೃಹತ್ ಪಂಜಿನ ಮೆರವಣಿಗೆಯನ್ನು ಆ.11ರಂದು ಸಂಜೆ 6ಕ್ಕೆ ಪಟ್ಟಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಮೆರವಣಿಗೆಯು ಪಟ್ಟಣದ ಖಾಸಗಿ ಬಸ್ ನಿಲ್ದಾಣದಿಂದ ಮುಖ್ಯ ರಸ್ತೆ ಮಾರ್ಗವಾಗಿ ಶ್ರೀ ರಂಗನಾಥ ದೇವಸ್ಥಾನದ ವರಗೆ ಭಾರತಮಾತೆಯ ಭಾವಚಿತ್ರದೊಂದಿಗೆ ಸಾಗಲಿದೆ. ಮೆರವಣಿಗೆಗೆ ಜಡೆ ಹಿರೇಮಠ ಹಾಗೂ ಸೊರಬ ಕಾನುಕೇರಿ ಮಠದ ಶ್ರೀ ಘನಬಸವ ಅಮರೇಶ್ವರ ಸ್ವಾಮೀಜಿ ಚಾಲನೆ ನೀಡಲಿದ್ದಾರೆ.
ಸವಾಲುಗಳು ಸಾವಿರ ಉತ್ತರ ಒಂದೇ ಜಾಗರಣ ಎಂಬ ಧ್ಯೇಯದೊಂದಿಗೆ ಪಟ್ಟಣದ ಪುರ ನಾಗರೀಕರು, ಸಮಸ್ತ ಹಿಂದೂ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಕೋರಿದೆ.
Huge torchlight procession from Hinjave