ad

ವಿಶ್ವ ಪ್ರವಾಸೋದ್ಯಮ ದಿನಾಚರಣೆ-ಏನು ಹೇಳುದ್ರು ಡಿಸಿ ಸಿಇಒ-World Tourism Day - What did the DC CEO say?

 SUDDILIVE || SHIVAMOGGA

ವಿಶ್ವ ಪ್ರವಾಸೋದ್ಯಮ ದಿನಾಚರಣೆ-ಏನು ಹೇಳುದ್ರು ಡಿಸಿ ಸಿಇಒ-World Tourism Day - What did the DC CEO say?



ಜಿಲ್ಲೆಯ ಪ್ರವಾಸೋದ್ಯಮ, ಜಿಲ್ಲಾಪಂಚಾಯತ್, ಹಾಗೂ ಜಿಲ್ಲಾಡಳಿತದ ಸಂಯುಕ್ತ ಆಶ್ರಯದಲ್ಲಿ ಸೆಪ್ಟಂಬರ್ 27 ರಂದು ವಿಶ್ವ ಪ್ರವಾಸೋದ್ಯಮ ದಿನಾಚರಣೆ ಹಮ್ಮಿಕೊಳ್ಳಲಾಗಿದ್ದು, ಜಿಲ್ಲೆಯ ಪ್ರವಾಸೋದ್ಯಮವನ್ನ ಉತ್ತೇಜಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. 

ವಿಶ್ವ ಪ್ರವಾಸೋದ್ಯಮ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ಹಲವು ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಇದು ಪ್ರವಾಸೋದ್ಯಮದ ಜಾಗೃತಿ, ಯುವ ಪ್ರತಿಭೆ, ಸೃಜನಾತ್ಮಕತೆ ಮತ್ತು ಕಲಸತ್ಮಕ ಸಾಮರ್ಥ್ಯವನ್ನ ಪ್ರದರ್ಶಿಸಲು ಮತ್ತು ಬ್ರಾಂಡಿಂಗ್ ಬಲಪಡಿಸಲು ಉದ್ದೇಶವಾಗಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿಲ್ಲೆಯಲ್ಲಿ 40 ಪ್ರವೋಸೋದ್ಯಮಗಳನ್ನ ಗುರುತಿಸಲಾಗಿದೆ ಫೊಟೊಗ್ರಫಿ, ವಿಡಿಯೋಗ್ರಫಿ ಹಮ್ಮಿಕೊಳ್ಳಲಾಗಿದೆ. ರೀಲ್ಸ್ ಸ್ಪರ್ಧೆ, ಲೋಗೋ ವಿನ್ಯಾಸ ಟ್ಯಾಗಲೈನ್ ಸ್ಪರ್ಧೆ, ಹಮ್ಮಿಕೊಳ್ಳಲಾಗಿದೆ.

ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಬರುಔರಿಗೆ ಮಾಹಿತಿಇಲ್ಲ. ಹಾಗಾಗಿ ವೆಬ್ ಸೈಟ್ ನಿರ್ಮಿಸಲಾಗುತ್ತಿದೆ. ಇತಿಹಾಸ, ಸ್ಥಳಕ್ಕೆ ಹೋಗುವ ಮಾಹಿತಿ, ವಸತಿ ಬಗ್ಗೆನೂ ಮಾಹಿತಿಯಿದೆ. ಸೈಚನಾ ಫಲಕಗಳನ್ನ ನಡೆಸಲಾಗುವುದು. ಆ.27 ರಂದು ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಉದ್ಘಾಟಿಸಲಾಗುವುದು. ಇದನ್ನ ಆ.11 ರಿಂದ ಸೆಪ್ಟಂಬರ್ 10 ರವರೆಗೆ ನಡೆಯಲಿದೆ.  

ನೈಸರ್ಗಿಕ ವೈಭವ, ಧಾರ್ಮಿಕ-ಸಾಂಸ್ಕೃತಿಕ ಪರಂಪರೆಪರ್ವತ, ನದಿಗಳು, ಜಲಪಾತಗಳು ಮತ್ತು ಚಾರಣ ಸ್ಥಳಗಳ ಕುರಿತು ಹೆಚ್ಚಿನ ಪ್ರಚಾರ ಮಾಡಲಾಗುತ್ತಿದೆ. ಸ್ಪರ್ಧೆಗಳು ಒಂದು ತಿಂಗಳು ನಡೆಯಲಿದ್ದರೆ, ಸೆಪ್ಟಂಬರ್ 27ರಂದು ಲೋಗೋ, ಹಮ್ಮಿಕೊಳ್ಳಲಾಗುತ್ತಿದೆ.

 ಮೂರು ಕಾಲು ಲಕ್ಷ ಬಹುಮಾನವಿದೆ. ರಿಜಿಸ್ಟ್ರೇಷನ್ ನ್ನ ಆ.11 ರಿಂದ ಆ.20 ರವರೆಗೆ ನಡೆಯಲಿದೆ. ಆ.20 ರ ನಂತರ ಸ್ಪರ್ಧೆಗಳು ನಡೆಯಲಿದೆ ಎಂದು ಜಿಪಂ ಸಿಇಒ ತಿಳಿಸಿದರು. 

ಸಿಗಂದೂರು, ನೈಟ್ ಲ್ಯಾಂಡ್ ಕೊಡಚಾದ್ರಿ ಬಗ್ಗೆ ಹೇಳಿಕೆ

ಸಿಗಂದೂರಿನಲ್ಲಿ ಲಾಂಚ್ ಅಭಿವೃದ್ಧಿ ಪಡಿಸಲಾಗುತ್ತಿದೆ. ಶ್ರೀಘ್ರದಲ್ಲಿ ಆರಂಭಿಸಲಾಗುವುದು. ಅದು ಅಲ್ಲಿನ ಸಿಬ್ವಂದಿಗಳನ್ನೂ ಬಳಸಿಕೊಳ್ಳುವ ಪ್ರಯತ್ನ ನಡೆಯಲಾಗುತ್ತಿದೆ. ಅಲ್ಲಿನ ಪರಿಸ್ಥತಿಯನ್ನ‌ಅವಲೋಕಿಸಿ ಲಾಂಚ್ ಅಭಿವೃದ್ಧಿ ಪಡಿಸಲಾಹುವುದು. ಕೊಡಚಾದ್ರಿಯಲ್ಲಿ ವಾಹನ ಬಾಡಿಗೆದಾರರ ಹಾವಳಿಯ ಬಗ್ಗೆ ಕುಳಿತು ಚರ್ಚಿಸಲಾಗುವುದು. 20 ಪಂಚಾಯಿತಿಗಳ ಅಡಿ ಬರುವ ಪ್ರವಾಸೋದ್ಯಮದಲ್ಲಿ ವ್ಯವಸ್ಥೆ ಮಾಡುವ ಬಗ್ಗೆ ನಿಧಾನವಾಗಿ ಕ್ರಮ ಜರುಗಿಸಲಾಗುವುದು ಎಂದರು. 300 ಭೂಕುಸಿತ ಸಂಭವನೆ ಬಗ್ಗೆ ಲೆಕ್ಕಹಾಕಲಾಹಿದೆ 107 ಅರ್ಜೆಂಟ್ ಮಾಡಲಾಗುತ್ತಿದೆ. 80 ಕೋಟಿ ಹಣ ಬಿಡುಗಡೆಗೆ ಪ್ರಕ್ರಿಯೆ ನಡೆಯಲಿದೆ ಎಂದರು. 

World Tourism Day - What did the DC CEO say?

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close