ad

ವಿಷ ಸೇವಿಸಿದ್ದ ಸಿಇಒ ಮನೆಯ ಅಡುಗೆ ಕೆಲಸ ಮಾಡುತ್ತಿದ್ದ ವ್ಯಕ್ತಿ ಸಾವು- A man who worked as a cook at the CEO's house died after consuming poison

 SUDDILIVE || SHIVAMOGGA

ವಿಷ ಸೇವಿಸಿದ್ದ ಸಿಇಒ ಮನೆಯ ಅಡುಗೆ ಕೆಲಸ ಮಾಡುತ್ತಿದ್ದ ವ್ಯಕ್ತಿ ಸಾವು-A man who worked as a cook at the CEO's house died after consuming poison

CEO, Poision


ನೋಟಿಸ್ ನೀಡಿದ ವಿಚಾರಕ್ಕೆ ವಿಷ ಸೇವಿಸಿದ್ದ ಜಿಲ್ಲಾ ಪಂಚಾಯತ್ ಸಿಇಒ ಮನೆಯ ಅಡುಗೆ ಕೆಲಸ ಮಾಡುವ ವ್ಯಕ್ತಿಯ ಸಾವಾಗಿದೆ. ಈಗ ಈ ಪ್ರಕರಣ ಯಾರ ವಿರುದ್ಧ ತಿರುಗಲಿದೆ ಎಂಬುದು ಕುತೂಹಲಕಾರಿಯಾಗಿದೆ. 

ಎರಡು ದಿನ ರಜೆ ಕೇಳಿ ಹೋಗಿದ್ದ ಸಿಇಒ ಮನೆಯ ಅಡುಗೆ ಕೆಲಸದಾತ ಸುರೇಶ್ 10 ದಿನದ ಬಳಿಕ ಬಂದ ಹಿನ್ನಲೆಯಲ್ಲಿ ಆತನಿಗೆ ನೋಟೀಸ್ ನೀಡಲಾಗಿತ್ತು. ಈ ನೊಟೀಸ್ ಗೆ ಹೆದರಿ ಸುರೇಶ್ ರೌಂಡಪ್ ಸೇವಿಸಿದ್ದರು. ಅಸ್ವಸ್ಥರಾಗಿದ್ದ ಸುರೇಶ್ ಅವರನ್ನ ಮೆಗ್ಗಾನ್ ಗೆ ದಾಖಲಿಸಲಾಗಿತ್ತು. 

ಮೆಗ್ಗಾನ್ ನಲ್ಲಿ ದಾಖಲಾಗಿದ್ದ ಸುರೇಶ್ ರಿಗೆ ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ದಾಖಲಾದ ಮೂರು ದಿನಗಳ ನಂತರ ಸುರೇಶ್ ಗೆ ಚಿಕಿತ್ಸೆ ಫಲಕಾರಿಯಾಗದೆ ಸಾವಾಗಿದೆ. ಅವರ ಮೃತದೇಹವನ್ನ ಮೆಗ್ಗಾನ್ ಗೆ ಸಾಗಿಸಲಾಗಿದೆ. 


ಘಟನೆ ನಡೆದ ದಿನವೆ ಈ ಪ್ರಕರಣವನ್ನ ಮಾಧ್ಯಮಗಳಿಂದ ದೂರ ಇಡುವ ಪ್ರಯತ್ನ ನಡೆದಿತ್ತು. ಜೀವ ಇದ್ದಾಗ ಯಾವ ರೀತಿ ಸ್ಟೇಟ್ ಮೆಂಟ್ ಆಗಿದೆ ಎಂಬುದೇ ಮಾಹಿತಿಯಿಲ್ಲವಾದ್ದರಿಂದ ಈ ಪ್ರಕರಣದಲ್ಲಿ ಆರೋಪಿ ಯಾರಾಗ್ತಾರೆ ಎಂಬುದೇ ಗೊತ್ತಾಗುತ್ತಿಲ್ಲ. ಮಾಹಿತಿ ಪ್ರಕಾರ ಕರ್ತವ್ಯ ಲೋಪದಲ್ಲಿ ನಿಂದಿಸಿ ನೋಟೀಸ್ ನೀಡಿದ್ದರೆ ಕ್ರಮವಾಗಲಿದೆ. ಕೇವಲ ಕರ್ತವ್ಯ ಲೋಪಕ್ಕೆ ನೋಟೀಸ್ ನೀಡಿದ್ದರೆ ಪ್ರಕರಣ ಬಹುತೇಕ ಬಿದ್ದು ಹೋಗಲಿದೆ. 

A man who worked as a cook at the CEO's house died after consuming poison.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close