SUDDILIVE || SHIVAMOGGA
ಹ್ಯಾಟ್ಸ್ ಆಫ್ ಟು ಅನಿಲ್ ಸಾರ್-Hats off to Anil sir.
ಶ್ರೀ ಅನಿಲ್ ಕುಮಾರ್ ಎಸ್ ಭೂಮರಡ್ಡಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು_1 ಶಿವಮೊಗ್ಗ ಜಿಲ್ಲೆ ರವರು, ದಕ್ಷಿಣ ಕನ್ನಡ ಜಿಲ್ಲೆಗೆ ವರ್ಗಾವಣೆಗೊಂಡಿದ್ದು, ಇಂದು ಎ ಜಿ ಕಾರಿಯಪ್ಪ ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2 ಶಿವಮೊಗ್ಗ ರವರಿಗೆ ಕರ್ತವ್ಯವನ್ನು ಹಸ್ತಾಂತರಿಸಿ, ಕರ್ತವ್ಯದಿಂದ ಬಿಡುಗಡೆ ಹೊಂದಿದ್ದಾರೆ.
ಎ ಜಿ ಕಾರಿಯಪ್ಪ ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2 ಶಿವಮೊಗ್ಗ ರವರು ಈ ದಿನದಿಂದ ಹೆಚ್ಚುವರಿ ಪೊಲೀಸ್ ಅಧೀಕ್ಷಕರು-1 ಹುದ್ದೆಯ ಸಂಪೂರ್ಣ ಪ್ರಭಾರವನ್ನು ವಹಿಸಿಕೊಂಡು ಮುಂದುವರೆದಿರುತ್ತಾರೆ ಎಂದು ಎಸ್ಪಿ ಮಿಥುನ್ ಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಅನಿಲ್ ಕುಮಾರ್ ಭೂಮರೆಡ್ಡಿ ಅವರು 1994 ರಲ್ಲಿ ಸಬ್ ಇನ್ಸ್‌ಪೆಕ್ಟರ್ ಆಗಿ ಪೊಲೀಸ್ ಇಲಾಖೆಗೆ ಸೇರಿದರು. ಇವರಿಗೆ ಶಿವಮೊಗ್ಗ ಹೊದೇನಲ್ಲ. ಶಿವಮೊಗ್ಗ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಪಿಎಸ್‌ಐ, ಸರ್ಕಲ್ ಇನ್ಸ್‌ಪೆಕ್ಟರ್ ಮತ್ತು ಪೊಲೀಸ್ ಉಪಾಧೀಕ್ಷಕರಾಗಿ ಕೆಲಸ ಮಾಡಿದ್ದಾರೆ. ಇತ್ತೀಚೆಗೆ, ಅವರು ಗಣರಾಜ್ಯೋತ್ಸವದ ಸಂದರ್ಭದಲ್ಲಿ ಪ್ರತಿಭಾನ್ವಿತ ಸೇವೆಗಾಗಿ ರಾಷ್ಟ್ರಪತಿಗಳ ಪದಕಕ್ಕೆ ಆಯ್ಕೆಯಾಗಿದ್ದಾರು.
ನೇರ ನಿಷ್ಠೂರವಂತ ಅಧಿಕಾರಿ ಎನಿಸಿಕೊಂಡಿರುವ ಅನಿಲ್ ಸಾರ್ ಗೆ ಅವರ ಡಿವೈಎಸ್ಪಿ, ಪಿಐ, ಎಸ್ಐ ಗಳು ಹಾಗೂ ಸಿಬ್ಬಂದಿಗಳು ಹೃದಯಪೂರಕ ಬೀಳ್ಕೊಡುಗೆ ನೀಡಿದ್ದಾರೆ.