ad

ಕಾರು ಮತ್ತು ಲೇಲ್ಯಾಂಡ್ ವಾಹನದ ನಡುವೆ ಅಪಘಾತ-Accident between a car and a Leyland vehicle

SUDDILIVE || SHIVAMOGGA 

ಕಾರು ಮತ್ತು ಲೇಲ್ಯಾಂಡ್ ವಾಹನದ ನಡುವೆ ಅಪಘಾತ-Accident between a car and a Leyland vehicle

Accident, anadapura

ಸಾಗರ ತಾಲೂಕಿನ ಆನಂದಪುರದ ಸಮೀಪದ ಹೊಸೂರು ಸೇತುವೆ ಬಳಿ ನೆಕ್ಸನ್ ಕಾರು ಹಾಗೂ ಅಶೋಕ್ ಲೇಲ್ಯಾಂಡ್ ವಾಹನ ಪರಸ್ಪರ ಡಿಕ್ಕಿ ಹೊಡೆದ ಘಟನೆ ನಡೆದಿದೆ.

ಸಾಗರದಿಂದ ಹೊಸೂರಿನತ್ತ ತೆರಳುತ್ತಿದ್ದ ನೆಕ್ಸಾನ್ ಕಾರಿಗೆ, ಆನಂದಪುರದಿಂದ ಸಾಗರದತ್ತ ಬರುತ್ತಿದ್ದ ಅಶೋಕ್ ಲೇಲ್ಯಾಂಡ್ ವಾಹನ ಡಿಕ್ಕಿಯಾದ ಪರಿಣಾಮ, ಕಾರು ರಸ್ತೆ ಬದಿಯ ಲೈಟ್ ಕಂಬಕ್ಕೂ ಢಿಕ್ಕಿ ಹೊಡೆದು ಹಾನಿಗೊಳಗಾಗಿದೆ.

ಘಟನೆಯಲ್ಲಿ ಕಾರು ಚಾಲಕ ಹಾಗೂ ಅಶೋಕ್ ಲೇಲ್ಯಾಂಡ್ ವಾಹನದ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದೆ ಎಂದು ತಿಳಿದುಬಂದಿದೆ. ಘಟನೆಯ ನಂತರ ಆನಂದಪುರ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

Accident between a car and a Leyland vehicle

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close