SUDDILIVE || SHIVAMOGGA
ಶಿವಮೊಗ್ಗ ನಿಲ್ದಾಣದಲ್ಲಿ ಕೆಲಸ ವಂಚನೆ-fraud in the name of job
ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಉದ್ಯೋಗವಕಾಶ ಕೊಡಿಸುವುದಾಗಿ ನಂಬಿಸಿ ವಂಚನೆ ಪ್ರಕರಣಗಳು ನಡೆದಿದೆ. ನಿಶ್ಚಿತವಾಗಿ ಕೆಲಸ ಕೊಡಿಸುವುದಾಗಿ ನಂಬಿಸಿ ಯುವಕರಿಂದ ಹಣ ಪಡೆದು ವಂಚಿಸಲಾಗಿದೆ.
ವಿಮಾನ ನಿಲ್ದಾಣದಲ್ಲಿ ಕೆಲಸ ಖಾಲಿ ಇದೆ ಎಂದು ಹಲವು ಆನ್‌ಲೈನ್ ವೇದಿಕೆಗಳನ್ನು ನಕಲಿ ಜಾಹೀರಾತು ಪ್ರಕಟಿಸಲಾಗಿದೆ. ಇದನ್ನು ನಂಬಿ ಕರೆ ಮಾಡಿದವರಿಂದ ಗೂಗಲ್ ಪೇ, ಫೋನ್ ಪೇ ಮೂಲಕ ಹಣ ಪಡೆದು ವಂಚಿಸಲಾಗುತ್ತಿದೆ.
ಚಿತ್ರದುರ್ಗ ಜಿಲ್ಲೆ ಹೊಸದುರ್ಗದ ಅಕ್ಷಯ್ ಎಂಬುವವರು ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಉದ್ಯೋಗವಕಾಶದ ಜಾಹೀರಾತು ಗಮನಿಸಿ, ಅದರಲ್ಲಿದ್ದ ನಂಬರ್‌ಗೆ ಕರೆ ಮಾಡಿದ್ದಾರೆ. ಸಂಸ್ಥೆಯೊಂದರ ಹೆಚ್.ಆರ್ ಎಂದು ಮಾತನಾಡಿದ ವ್ಯಕ್ತಿ, ಏರ್‌ಪೋರ್ಟ್‌ನಲ್ಲಿ ಕೆಲಸ ಗ್ಯಾರಂಟಿ ಎಂದು ನಂಬಿಸಿದ್ದಾರೆ. ಬಳಿಕ ಅಕ್ಷಯ್ ಮೊಬೈಲ್‌ಗೆ ಅರ್ಜಿಯೊಂದನ್ನು ರವಾನಿಸಿದ್ದಾರೆ. ಇದರ ಬೆನ್ನಿಗೆ ಫೋನ್ ಪೇ ಮೂಲಕ ₹500 ಹಣ ಪಡೆದಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ವಂಚನೆಗೊಳಗಾದ ಅಕ್ಷಯ್, ಮೊದಲು ಫೋನ್ ಪೇ ಮೂಲಕ ₹500 ಪಡೆದಿದ್ದಾರೆ. ಈಗ ಮತ್ತೆ ₹2000 ಫೋನ್ ಪೇ ಮಾಡುವಂತೆ ತಿಳಿಸಿದ್ದಾರೆ. ಬಾಕಿ ₹2000ಗಳನ್ನು ವಿಮಾನ ನಿಲ್ದಾಣದ ಬಳಿ ಬಂದಾಗ ಕೊಡುಬೇಕಾಗುತ್ತದೆ ಎಂದು ತಿಳಿಸಿದ್ದಾರೆ. ಅನುಮಾನಗೊಂಡು ಮತ್ತಷ್ಟು ಪರಿಶೀಲನೆ ನಡೆಸಿದಾಗ ವಂಚನೆಯಾಗಿರುವುದು ಗೊತ್ತಾಗಿದೆ.
ಶಿವಮೊಗ್ಗ ವಿಮಾನ ನಿಲ್ದಾಣದ ಉದ್ಘಾಟನೆ ಸಂದರ್ಭ ಇದೇ ಮಾದರಿ ವಂಚನೆಗಳು ಆಗಿದ್ದವು. ಈಗ ವಿವಿಧ ಡಿಜಿಟಲ್ ವೇದಿಕೆಗಳಲ್ಲಿ ಜಾಹೀರಾತು ಪ್ರಕಟಿಸಿ ಹಣ ಪಡೆದು ವಂಚಿಸಲಾಗುತ್ತಿದೆ. ಸಣ್ಣ ಮೊತ್ತವಾದ್ದರಿಂದ ಬಹತೇಕರು ದೂರು ನೀಡಲು ಹಿಂದೇಟು ಹಾಕುತ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ವಂಚಕರು ಉದ್ಯೋಗಾಕಾಂಕ್ಷಿಗಳಿಗೆ ವಂಚಿಸುತ್ತಿದ್ದಾರೆ.
fraud in the name of job