SUDDILIVE || SHIVAMOGGA
ಆನೆಯ ಟ್ರಂಚ್ ನಲ್ಲಿ ವ್ಯಕ್ತಿಯ ಮೃತ ದೇಹಪತ್ತೆ-Man's body found in elephant's trunch
ಆನೆ ಟ್ರಂಚ್ ನಲ್ಲಿ ವ್ಯಕ್ತಿಯೋರ್ವನ ಶವವೊಂದು ಪತ್ತೆಯಾಗಿದ್ದು ಆತನ ಸಾವು ಅನುಮಾನಸ್ಪದಕ್ಕೆ ಕಾರಣವಾಗಿದೆ.
ಕುಂಸಿ ಪೊಲೀಸ್ ಠಾಣೆಯ ಸಿರಿಗೆರೆ ಅಂಚೆಯ ಆಡಿನಕೊಟ್ಟಿಗೆ ಗ್ರಾಮದಲ್ಲಿ ನಿನ್ನೆ ಗಣಪತಿ ಪ್ರತಿಷ್ಠಾಪನೆ ಮಾಡಿ ಮೂರು ದಿನದ ಹಿನ್ನಲೆಯಲ್ಲಿ ವಿಸರ್ಜನೆ ಮಾಡಲಾಗಿದೆ. ಕೆರೆಗೆ ಹೋಗಿ ಗಣಪತಿ ವಿಸರ್ಜನೆ ಮಾಡಿ ಬಂದ ವ್ಯಕ್ತಿ ಮನೆ ಬಾರದ ಹಿನ್ನಲ್ಲೆಯಲ್ಲಿ ನಾಗರಾಜ್ ಸಿಎಂ (34) ಎಂಬಾತನಿಗಾಗಿ ಹುಡುಕಾಡಲಾಗಿದೆ.
ಆನೆ ಟ್ರಂಚ್ ನಲ್ಲಿ ಮಳೆಯ ನೀರು ಸಂಗ್ರಹವಾದ ಕಾರಣ ಆತ ಪತ್ತೆಯಾಗಿರಲಿಲ್ಲ. ಇಂದು ಟ್ರಂಚ್ ನ ದಂಡೆ ಹೊಡೆದು ನೀರು ಖಾಲಿ ಮಾಡಿದಾಗ ನೀರಿನಲ್ಲಿ ಆತನ ಮೃತದೇಹ ಪತ್ತೆಯಾಗಿದೆ. ಈತನ ಮೃತ ದೇಹ ಆನೆ ಟ್ರಂಚ್ ನಲ್ಲಿ ಪತ್ತೆಯಾದ ಕಾರಣ ಆತನ ಸಾವು ಅನುಮಾನಸ್ಪದಕ್ಕೆ ಎನ್ನಲಾಗಿದೆ.
ಇವೆಲ್ಲದಕ್ಕೂ ಮಿಗಿಲಾಗಿ ಈ ಆನೆ ಟ್ರಂಚ್ ಅವೈಜ್ಞಾನಿಕವಾಗಿದ್ದು ಹಲವುಬಾರಿ ಅರಣ್ಯ ಇಲಾಖೆಗೆ ಮನವಿ ಮಾಡಿಕೊಳ್ಳಲಾಗಿದೆ. ಮನವಿ ಮಾಡಿಕೊಳ್ಳಲಾದರೂ ಇಲಾಖೆ ನಿರ್ಲಕ್ಷ ವಹಿಸಿದೆ. ಗ್ರಾಮ ಪಂಚಾಯಿತಿಗೂ ಮನವಿ ನೀಡಿದರು ಮನವಿಗೆ ಯಾವ ಅಧಿಕಾರಿಗಳು ಸ್ಪಂಧಿಸಿಲ್ಲ. ಇಂದು ಗ್ರಾಮಸ್ಥನೋರ್ವ ಟ್ರಂಚ್ ಗೆ ಬಿದ್ದು ಜೀವ ಕಳೆದುಕೊಂಡಿದ್ದಾನೆ. ಇದಕ್ಕೆ ಈ ಎರಡೂ ಇಲಾಖೆಯ ಅಧಿಕಾರಿಗಳು ಕಾರಣ ಎಂಬುದು ಗ್ರಾಮಸ್ಥರ ಆರೋಪವಾಗಿದೆ.
Man's body found in elephant's trunch
