ad

ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಬೃಹತ್ ಪ್ರತಿಭಟನೆ- BJP holds massive protest against state government

SUDDILIVE || SHIVAMOGGA

ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಬೃಹತ್ ಪ್ರತಿಭಟನೆ-BJP holds massive protest against state government

Bjp, protest

ಶಿವಮೊಗ್ಗ ಬಿಜೆಪಿ ರೈತ ಮೋರ್ಚಾದಿಂದ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬೃಹತ್ ಹೋರಾಟ ನಡೆಸಲಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆದಿದೆ. 

ಶಿವಮೊಗ್ಗ ನಗರದ  ಗೋಪಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ  ವರೆಗೆ  ಪ್ರತಿಭಟನಾ ಮೆರವಣಿಗೆ ನಡೆದಿದೆ. ಪ್ರತಿಭಟನೆಯಲ್ಲಿ ನೂರಾರು ಜನ ಕಾರ್ಯಕರ್ತರು, ರೈತರು ಭಾಗಿಯಾಗಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರದ ಘೊಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಲಾಯಿತು. 

ಕಾಂಗ್ರೆಸ್ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದೆ. ಬಗುರ್ ಹುಕುಂದಾರರಿಗೆ ಹಕ್ಕುಪತ್ರ ನೀಡುವಲ್ಲಿ ವಿಫಲ, ಕಾಡಿಗೆ ಹಸುಗಳನ್ನ ಬಿಡುವುದಕ್ಕೆ ನಿಷೇಧ, ರಸಗೊಬ್ಬರ ಕೊರತೆ ಮೊದಲಾದ ವಿಷಯಗಳ ವಿರುದ್ಧ ಬಿಜೆಪಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. 

ರಾಜ್ಯದಲ್ಲಿ ರಸಗೊಬ್ಬರ ಸಮಸ್ಯೆ ನಿವಾರಿಸಲು ಬಿಜೆಪಿ ಆಗ್ರಹಿಸಿದೆ. ತೊಲಗಲಿ, ತೊಲಗಲಿ ಕಾಂಗ್ರೆಸ್ ತೊಲಗಲಿ ಎಂದು ಘೋಷಣೆ ಕೂಗಿ ಡಿಸಿ ಕಚೇರಿ ಎದುರು ರಸ್ತೆ ತಡೆ ಮಾಡಿ ಬಿಜೆಪಿ ಕಾರ್ಯಕರ್ತರು ಪ್ರತಿಭಟಿಸಿದ್ದಾರೆ. 

ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವ ಹರತಾಳು ಹಾಲಪ್ಪ, 43 ಶಾಲೆಗಳನ್ನ ಸಾಗರ ತಾಲೂಕು ತುಮರಿ ಭಾಗದಲ್ಲಿ ಮುಚ್ಚಲಾಗಿದೆ. ಹೊಸನಗರ ಆಸ್ಪತ್ರೆಯಲ್ಲಿ ವೈದ್ಯರಿಲ್ಲ. 108 ಅಂಬ್ಯುಲೆನ್ಸ್ ಸೇವೆ ಬಂದ್ ಆಗಿದೆ. ಸೊರಬದಲ್ಲಿ ಜಿಲ್ಲೆ ಉಸ್ತುವಾರಿ ಸಚಿವ ಸಚಿವರ ನಾಲ್ಕು ಇಸ್ಪೀಟ್ ಕ್ಲಬ್ ಬಂದ್ ಮಾಡಲಾಗಿದೆ. ನನ್ನ ಸಂಬಂಧಿಯ ಇಸ್ಪೀಟ್ ಬೆಂಗಳೂರಿನಲ್ಲಿದೆ ಅದನ್ನ ಪರವಾನಗಿ ಪಡೆದು ನಡೆಸಲಾಗುತ್ತಿದೆ. ಇದನ್ನ ಪ್ರಶ್ನಿಸಿದರೆ ನಾನು 55 ಸಾವಿರ ಮತದಿಂದ ಗೆದ್ದಿದ್ದೇನೆ ಎಂದು ಶಿಕ್ಷಣ ಸಚಿವರು ಹೇಳ್ತಾರೆ. ಗೆಲ್ಲುವವರನ್ನೇ ಕೇಳೋದು ಇದನ್ನ ಯಾಕೆ ಮಾಡಲಿಲ್ಲ ಎಂದು  ತಿಳಿಸಿದರು. 

ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ, ಏಕಾಏಕಿ ಶುಂಠಿ ಮತ್ತು ಅಡಿಕೆ ಕಿತ್ತುಹಾಕುವ ಸಂಸ್ಕೃತಿ ಈ ರಾಜ್ಯ ಸರ್ಕಾರದಲ್ಲಿ ನಡೆದುಕೊಂಡು ಬಂದಿದೆ. ಅರಣ್ಯ ಇಲಾಖೆ 2015 ನೇ ಇಸವಿಯ ಹಿಂದೆ ಇರುವ ಜಾಗವನ್ನ ಮುಟ್ಟೊದಿಲ್ಲ ಎನ್ನುತ್ತದೆ. ಹೊಸನಗರದಲ್ಲಿ ಮುಟ್ಟಲಿಲ್ಲ ಕಡೆದುಹಾಕಿದ್ದಾರೆ. ಕಸ್ತೂರಿ ರಂಗನ್ ವರದಿ ಜಾರಿಗೆ ತರಬೇಡಿ ಎಂದು ನಾನು ಬೊಮ್ಮಾಯಿ ಸರ್ಕಾರ ಇದ್ದಾಗ ಹೇಳಿದ್ದೆ. ರಕ್ತ ಕ್ರಾಂತಿಯಾಗುತ್ತೆ ಎಂದಿದ್ದೆ ನಿಲ್ಸಿದ್ರು. ಈಗ ಸಿದ್ದರಾಮಯ್ಯ ಸರ್ಕಾರ ನಾವು ನಿಲ್ಸಿದ್ವಿ ಎಂದು ಪ್ರಚಾರ ಪಡೆಯುತ್ತಿದ್ದಾರೆ ಎಂದು ದೂರಿದರು.

ಫಾರೆಸ್ಟ್ ಮಿನಿಸ್ಟರ್ ಕುಳಿತು ವ್ಯವಧಾನವಿಲ್ಲ. ಜಾನುವಾರುಗಳಿಗೆ ಹಾಕಿದ ಆಹಾರಕ್ಕೆ ಹಾಕಿದ ವಿಷ ಸೇವಿಸಿ ಹುಲಿ ಸತ್ತರೆ ಜಾನುವಾರುಗಳನ್ನ ಕಾಡಿಗೆ ಬಿಡಬೇಡಿ ಎಂದು ಆದೇಶಿಸಿದರು. ಶೀತ ಬಂದರೆ ಮೂಗು ಕೊಯ್ಯುವ ವ್ಯವಸ್ಥೆ ಬಂದಿದೆ ಎಂದು ವ್ಯಂಗ್ಯವಾಡಿದರು.

BJP holds massive protest against state government

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close