ad

ಹೋರಾಟ ನಡೆಸಿದ್ದ ಜಿಲ್ಲಾ ಉಸ್ತುವರಿ ಸಚಿವರು ಅಧಿಕಾರ ಬಂದ ಮೇಲೆ ಹಾರಾಡುತ್ತಿದ್ದಾರೆ-ವಿಜೇಂದ್ರ-the district In-charge minister flying

 SUDDILIVE || SHIVAMOGGA

ಹೋರಾಟ ನಡೆಸಿದ್ದ ಜಿಲ್ಲಾ ಉಸ್ತುವರಿ ಸಚಿವರು ಅಧಿಕಾರ ಬಂದ ಮೇಲೆ ಹಾರಾಡುತ್ತಿದ್ದಾರೆ-ವಿಜೇಂದ್ರ-The district in-charge minister who fought is now flying after coming to power - Vijendra

Vihendra, Flying

ರಾಜ್ಯದಲ್ಲಿ ಮಳೆ ಚೆನ್ನಾಗಿ ಆಗಿದ್ದರು ರಸಗೊಬ್ವರಕ್ಕಾಗಿ ಹೋರಾಟ ನಡೆಯುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜೇಂದ್ರ ತಿಳಿಸಿದರು. 

ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನಾ ಮೆರವಣಿಗೆಯನ್ನ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದ ರೈತರ ಬಗ್ಗೆ ತಾತ್ಸಾರ, ದ್ವೇಷಕಾರುತ್ತಿದ್ದೀರಿ ಸಿದ್ದರಾಮಯ್ಯ ನವರೆ ಎಂದು ಪ್ರಶ್ನಿಸಿದರು. 

ನಾಡಿಗೆ ಎರಡು ಹೊತ್ತು ಅನ್ನವನ್ನ ಹಾಕುತ್ತಿರುವ ರೈತರ ಬಗ್ಗೆ ನಿರ್ಲಕ್ಷವೇಕೆ? ಹಿಂದಿನ ಸಿದ್ದರಾಮಯ್ಯ ಸರ್ಕಾರದಲ್ಲಿ 4283 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎರಡನೇ ಬಾರಿ ಮುಖ್ಯಮಂತ್ರಿಯಾದಾಗ ಎರಡು ವರ್ಷದಲ್ಲಿ 900 ಕ್ಕೂ ಹೆಚ್ಚು ರೈತರ ಆತ್ಮಹತ್ಯೆಯಾಗಿದೆ. ರಾಜ್ಯದಲ್ಲಿ ಮುಂಗಾರು ಆಗಿದೆ ಎಂದು ಕೇಂದ್ರ ಎಲ್ಲಾ ರಾಜ್ಯ ಸರ್ಕಾರಕ್ಕೆ ಯುರಿಯಾವನ್ನ‌ಕಳುಹಿಸಿದೆ. ಅದರಂತೆ ರಾಜ್ಯಕ್ಕೆ ಅಗತ್ಯ ಯೂರಿಯಾ ಸರಬರಾಜಾಗಿದೆ. 

ಈ ರಾಜ್ಯದಲ್ಲಿ ಕೃಷಿ ಸಚಿವರು ಯಾರು ಎಂದು ಗೊತ್ತಿಲ್ಲ. 8.73 ಲಕ್ಷ ಮೆಟ್ರಿಕ್ ಟನ್ ಗೊಬ್ವರವನ್ನ ಕೇಂದ್ರ ರಾಜ್ಯ ಸರ್ಕಾರಕ್ಕೆ ಕಳುಹಿಸಿದೆ ಎಂದು ಒಮ್ಮೆ ಕೃಷಿ ಸಚಿವರು ಹೇಳ್ತಾರೆ. ರೈತರು ರಸಗೊಬ್ಬರ ಅಭಾವವಿದೆ ಎಂದು ಬೀದಿಗಿಳಿದ ಮೇಲೆ ರಾಜ್ಯಕ್ಕೆ ಕೇಂದ್ರ ಸರಿಯಾಗಿ ಸಾಗಾಣಿಕೆ ಮಾಡಿಲ್ಲ ಎಂದು ಹೇಳ್ತಾರೆ. 

ಮಾತು ಎತ್ತಿದರೆ ದೆಹಲಿಗೆ ಹೋಗುವ ಕಾಂಗ್ರೆಸ್ ಮಂತ್ರಿಗಳು ಅದರ ಬದಲು ರೈತರಿಗಾಗಿ ದೆಹಲಿಗೆ ಹೋಗಿದ್ದರೆ ರೈತರು ಬೀದಿಗೆ ಇಳಿಯುತ್ತಿರಲಿಲ್ಲ. ವಿಪಕ್ಷದಲ್ಲಿರುವಾಗ ಬುಗುರ್ ಹುಕುಂ ಜಮೀನಿಗಾಗಿ ಹೋರಾಟ ಮಾಡಿದ್ದ ಜಿಲ್ಲಾ ಉಸ್ತುವಾರಿ ಸಚಿವರು ಇಂದು ಅಧಿಕಾರ ಸಿಕ್ಕ ನಂತರ ಹಾರಾಡುತ್ತಿದ್ದಾರೆ. ನಿಮ್ಮಿಂದ ಪಾಠ ಕಲಿಯುವ ಅಗತ್ಯವಿಲ್ಲ. ಶಿಷ್ಠಾಚಾರದ ಬಗ್ಗೆ ಮಾತನಾಡುವ ಶಿಕ್ಷಣ ಸಚಿವರು ರೈತರ ಬಗ್ಗೆ ಮಾತನಾಡುತ್ತಿಲ್ಲವೇಕೆ ಎಂದು ಆಗ್ರಹಿಸಿದರು.

1 ಲಕ್ಷ ರೈತರು ಜಿಲ್ಲೆಯಲ್ಲಿ ಸಾಗುವಳಿ ಮಾಡಿಕೊಂಡು ಬರುತ್ತಿದ್ದಾರೆ.  ಕಂದಾಯ ಇಲಾಖೆಯ ಆರ್ಟಿಸಿಯಲ್ಲಿರುವ ಗೋಮಾಳ ಜಾಗವನ್ನ ಫಲಾನುಭಾವಿಗಳ ಸಂಖ್ಯೆ 35 ಸಾವಿರ ಜನ ರೈತರಿದ್ದಾರೆ. ಆರ್ಟಿಸಿಯಲ್ಲಿ ನಮೂದು ಮಾಡದ ಕಾರಣ ಕಂದಾಯ ಭೂಮಿ ಎಂದು ಅರ್ಜಿ ಸಲ್ಲಿಸಿದ್ದಾರೆ. ಅವರನ್ನ‌ ಕೆಲ ಪರಿಸರ ವಾದಿಗಳು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ ಕಾರಣ ಒಕ್ಕಲೆಬ್ಬಿಸಲಾಗಿದೆ ಎಂದು ದೂರಿದರು. 

ರೈತರಿಗೆ ನೋಟಿಸ್ ಕೊಡುವುದನ್ನ ನಿಲ್ಲಿಸಬೇಕು. ಮರಗಳನ್ನ ಕಡಿಯಬಾರದು. ಮರ ಕಡಿದರೆ ಬಿಜೆಪಿ ಬೀದಿಗಿಳಿಯಲಿದೆ. ಸಂಧರ್ಭ ಬಂದರೆ ಪಾದಯಾತ್ರೆಗೂ ಸೈ ಎಂದು ವಿಜೇಂದ್ರ ತಿಳಿಸಿದರು.

the district In-charge minister flying

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close