SUDDILIVE || SHIKARIPURA
ಎಂಪಿಎಂ ತೋಪಿನಲ್ಲಿ 3 ವರ್ಷದ ಗಂಡು ಚಿರತೆಯ ಮೃತದೇಹ ಪತ್ತೆ-Body of 3-year-old male leopard found in MPM grove
ಶಿಕಾರಿಪುರ ತಾಲೂಕು ಹೊಸೂರು ಹೋಬಳಿ ಗೊಗ್ಗಾ ಗ್ರಾಮಾದ ಸರ್ವೆ ನಂಬರ್ 197 ರಲ್ಲಿರುವ ಎಂಪಿಎಂ ತೋಪಿನಲ್ಲಿ ಮೂರು ವರ್ಷದ ಗಂಡು ಚಿರತೆಯ ಮೃತದೇಹವೊಂದ ಪತ್ತೆಯಾಗಿದೆ.
ಸಧ್ಯಕ್ಕೆ ಈ ಚಿರತೆ ಸತ್ತಿರುವ ಬಗ್ಗೆ ಅನುಮಾನಗಳಿವೆ. ಆದರೆ ನಿಖರ ಮಾಹಿತಿಯಿಲ್ಲ. ಮರಣೋತ್ತರ ಪರೀಕ್ಷೆಯಲ್ಲಿ ಅನುಮಾನ ಪಡುವ ಅಂಶ ಹೊರಬಂದಿಲ್ಲವಾದರೂ ಎಫ್ಎಸ್ ಎಲ್ ಗಾಗಿ ಕಾಯಲಾಗುತ್ತಿದೆ. ಮೃತ ಚಿರತೆಯ ದೇಹದಲ್ಲಿ ಯಾವುದೇ ಅನುಮಾನಸ್ಪದ ಗಾಯಗಳಾಗಲಿ, ಇತರೆ ಅಂಶಗಳು ಕಂಡು ಬಂದಿಲ್ಲ.
ನ್ಯಾಯಾಲಯದ ಆದೇಶದ ಮೇರೆಗೆ ಚಿರತೆಯ ಅಂತ್ಯಕ್ರಿಯೆಯವನ್ನ ಶಿಕಾರಿಪುರದ ಕನ್ಸರ್ವೇಟಿವ್ ಫಾರೆಸ್ಟ್ ಅವರು ಮಾಡಿಮುಗಿಸಿದ್ದಾರೆ. ಸಾಗರದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮೋಹನ್ ಕುಮಾರ್, ಶಿಕಾರಿಪುರದ ತಹಶೀಲ್ದಾರರಾದ ಮಂಜುಳಾ ಶಂಕರ್, ಸರ್ಕಾರೇತರ ಸಂಸ್ಥೆಯ ಪ್ರತಿನಿಧಿಗಳು, ಗುಗ್ಗ ಗ್ರಾಮ ಪಂಚಾಯತಿ ಸದಸ್ಯರು ಅರಣ್ಯ ಇಲಾಖೆ ಎಂಪಿಎಂ ಸಿಬ್ಬಂದಿಗಳ ಸಮಕ್ಷಮದಲ್ಲಿ ಪಶುವೈದ್ಯಾಧಿಕಾರಿಗಳಿಂದ ಮರಣೋತ್ತರ ಪರೀಕ್ಷೆ ನಡೆದಿದೆ.
Body of 3-year-old male leopard found in MPM grove