ad

ಸೌಹಾರ್ದತೆ ಮೆರೆದ ಗೋಪಾಳದ ದ್ರೌಪದಮ್ಮ ಕನ್ನಡ ಯುವಕರ ಸಂಘದವರ ಗಣಪತಿ ವಿಸರ್ಜನಾ ಮೆರವಣಿಗೆ-Ganapati Visarjana procession of Gopala Draupadamma Kannada Youth Association in a spirit of harmony

SUDDILIVE || SHIVAMOGGA

ಸೌಹಾರ್ದತೆ ಮೆರೆದ ಗೋಪಾಳದ  ದ್ರೌಪದಮ್ಮ ಕನ್ನಡ ಯುವಕರ ಸಂಘದವರ ಗಣಪತಿ ವಿಸರ್ಜನಾ ಮೆರವಣಿಗೆ-Ganapati Visarjana procession of Gopala Draupadamma Kannada Youth Association in a spirit of harmony

Ganapathi, Visarjane



ಶಿವಮೊಗ್ಗದಲ್ಲಿ ಗಣಪತಿ ವಿಸರ್ಜನೆ ವೇಳೆಯಲ್ಲಿಯೂ ಸಹ  ಹಿಂದೂ ಮುಸ್ಲೀಂ ಸೌಹಾರ್ದ ಮೆರೆದಿದ್ದಾರೆ. ಈ ಸೌಹಾರ್ಧತೆ ಇದೇನು ಮೊದಲಲ್ಲ. ಈ ಹಿಂದೆಯೂ ಹಲವು ಗಣಪತಿ ವಿಸರ್ಜನೆ ವೇಳೆ ಹೂವಿನ ಹಾರ ಹಾಕಿ ಸೌಹಾರ್ಧ ಮೆರೆಯಲಾಗಿತ್ತು. ಈ ಬಾರಿ ಇದು ಮೊದಲ ಬಾರಿಗೆ ಮಸೀದಿ ಕಮಿಟಿಯವರೆ ಗಣಪತಿಗೆ ಹಾರ ಹಾಕಿ ಗಣಪತಿಯನ್ನ‌ ಬೀಳ್ಕೊಟ್ಟಿದ್ದಾರೆ. 

ಇಂದು ತುಂಗಾನಗರ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ 60 ಕ್ಕೂ ಹೆಚ್ಚು ಗಣಪನ ವಿಸರ್ಜನಾ ಮೆರವಣಿಗೆ ನಡೆದಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಹಗಲು ರಾತ್ರಿ ಶ್ರಮಿಸುತ್ತಿದೆ. ಅದರಂತೆ ಇಂದು ಗೋಪಾಳದ  ದ್ರ್ವಾಪದಮ್ಮ ಕನ್ನಡ ಯುವಕರ ಸಂಘದವರ ಗಣಪತಿ ವಿಸರ್ಜನಾ ಮೆರವಣಿಗೆ ನಡೆದಿದೆ. 


ಮೆರವಣಿಗೆಯಲ್ಲಿ ಜೆಪಿ ನಗರದ ಆಜಂ ಮಸೀದಿ ಕಮಿಟಿಯವರಾದ ಸ್ಯೆಫುಲ್ಲಾ . ಹಾಗು ದರ್ಗಾ ಕಮಿಟಿಯ ಸತ್ತಾರ್ ಸಾಬ್ ಇತರೆ ಮುಸ್ಲಿಂ ಮುಖಂಡರು ಗಣಪತಿಗೆ ಹೂವಿನ ಹಾರಹಾಕಿ ಭಾವ್ಯೆಕ್ಯತೆ ಮೆರೆದಿದ್ದಾರೆ.  ಈ ಸಮಯದಲ್ಲಿ ಗಣಪತಿ ಪ್ರತಿಷ್ಟಾನದ ಅಧ್ಯಕ್ಷರಾದ ರಾಮು ಮುಖಂಡರಾದ  ವೆಂಕಟೇಶ್ . ವಸಂತ್ ..ಭಾಸ್ಕರ್ ಮತ್ತು ತುಂಗಾನಗರದ ಪೋಲಿಸ್ ಇನ್ಸ್ಪೆಕ್ಟರ್ ಕೆ.ಟಿ.ಗುರುರಾಜ & ಸಿಬ್ಬಂದಿಯವರು ಉಪಸ್ಥಿತರಿದ್ದರು.

Ganapati Visarjana procession of Gopala Draupadamma Kannada Youth Association in a spirit of harmony

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close