SUDDILIVE || SHIVAMOGGA
ಹಿಂದೂ ಸಂಘಟನಾ ಮಹಾಮಂಡಳಿಯ ಗಣಪತಿ ಪ್ರತಿಷ್ಠಾಪನೆ - Ganapati installation by Hindu Sanghatana Mahamandal
81 ನೇ ವರ್ಷದ ಹಿಂದೂ ಮಹಾಸಭಾ ಗಣಪತಿಯನ್ನ ನಗರದ ಭೀಮೇಶ್ವರ ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಗಿದೆ. ಪ್ರತಿಷ್ಠಾಪನೆಯ ವೇಳೆ ಶಾಸಕ ಚೆನ್ನಬಸಪ್ಪ ಮತ್ತು ಹಿಂದೂ ಮಹಾಸಭಾ ಗಣಪತಿ ಪ್ರಯಿಷ್ಠಾಪನೆಯ ಜಿಲ್ಲಾಧ್ಯಕ್ಷ ಸುರೇಶ್ ಕುಮಾರ್ ಶೆಟ್ಟಿ, ದತ್ತಣ್ಣ, ರಾಜು ಮಾಲ್ತೇಶ್ ಮೊದಲಾದವರು ಹಾಜರಿದ್ದರು.
4 ಅಡಿ ಗಣಪತಿಯನ್ನ ಕುಂಬಾರಗುಂಡಿಯಲ್ಲಿರವ ಮಹೇಶಪ್ಪನವರ ಮನೆಯಿಂದ ಸುಮಾರು 11-55 ರಂದು ಹೊರತರಲಾಯಿತು. ನಂತರ ಕೋಟೆ ಭೀಮೇಶ್ವರ ದೇವಸ್ಥಾನದ ವರೆಗೆ ಮೆರವಣಿಗೆಯಲ್ಲಿ ಹೊತ್ತು ತರಲಾಯಿತು.
12-40 ರವೇಳೆ ಭೀಮೇಶ್ವರ ದೇವಸ್ಥಾನ ತಲುಪಿದ ಮೆರವಣಿಗೆ 12-43 ರಂದು ದೇವಸ್ಥಾನದಲ್ಲಿ ಗಣೇಶನ ಮೂರ್ತಿಯನ್ನ ಪೀಠಾರೋಹಣ ಮಾಡಲಾಯಿತು. ಶ್ರೀವಿಶ್ವಾಸು ಸಂವತ್ಸರದ ಭಾದ್ರಪದ ಶುದ್ಧ ಚತುರ್ತಿಯ ಹಿಂದೂ ಮಹಾಸಭಾಗಣಪತಿಯನ್ನ ಭೀಮೇಶ್ವರ ದೇವರನ್ನ ಸುತ್ತು ಹಾಕಿ ನಂತರ ಪೀಠಾರೋಹಣ ಮಾಡಲಾಯಿತು.
ಈ ವೇಳೆ ಮಾತನಾಡಿದ ಶಾಸಕ ಚೆನ್ನಬಸಪ್ಪ 11 ದಿನ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಕಲಾರೋಹಣ ತಂಡದವರಿಂದ ಹಾಸ್ಯ ನಾಟಕ, ಸೆ.2 ರಂದು ನರಕಾಸುರ ವಧೆಯ ಯಕ್ಷಗಾನ ಸೆ.3 ರಂದು ಕೋಣಂದೂರು ತೀರ್ಥಹಳ್ಳಿಯವರಿಂದ ಗಾನಾಂಜಲಿ, ಸೆ.5 ರಂದು ಸುದರ್ಶನ ವಿಜಯ ಯಕ್ಷಗಾನ ನಡೆಯಲಿದೆ ಎಂದರು.
ಸೆ.6 ರಂದು ರಾಜಬೀದಿ ಉತ್ಸವ ನಡೆದರೆ ಹಿಂದಿನ ದಿನ ಸೆ.5 ರಂದು ಮಹಾಮಂಗಳಾರತಿ ನಡೆಯಲಿದೆ ಎಂದು ತಿಳಿಸಿದರು.
Ganapati installation by Hindu Sanghatana Mahamandal





