ad

ಸಿಸಿ ಟಿವಿಯಲ್ಲಿ ಗೋವುಗಳ ಕಳುವು ದೃಶ್ಯ ಸೆರೆ-Cow theft caught on CCTV

SUDDILIVE || BHADRAVATHI

ಸಿಸಿ ಟಿವಿಯಲ್ಲಿ ಗೋವುಗಳ ಕಳುವು ದೃಶ್ಯ ಸೆರೆ-Cow theft caught on CCTV

Cow, Theft

ಇಂದು ಬೆಳಗಿನ ಜಾವ 3 ಗಂಟೆ 45 ನಿಮಿಷ ಸುಮಾರಿಗೆ ಭದ್ರಾವತಿಯ ರೈಲ್ವೆ ಸ್ಟೇಷನ್ ಬಳಿಯಲ್ಲಿ  ಚಾಮೇಗೌಡ ಲೈನ್ ವಾಸಿ ಸುಬ್ರಹ್ಮಣ್ಯ ಅವರಿಗೆ ಸೇರಿದಂತಹ ಆಕಳನ್ನು ಕಳುವು ಮಾಡಲಾಗಿದೆ. ಕಳುವು ಮಾಡಿರುವ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ.   


ಬಿಳಿಯ ಬಣ್ಣದ ಆಕಳ ಕೊಂಬನ್ನ ಹಿಡಿದು ವ್ಯಕ್ತಿಯೊಬ್ಬ ವಾಹನದಲ್ಲಿ ತುಂಬಿಸಿಕೊಂಡು ಹೋಗಿರುವ ಘಟನೆ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.  ಆಕಳು ಏಳೆಂಟು ತಿಂಗಳು ಗರ್ಭ ವ್ಯವಸ್ಥೆಯಲ್ಲಿದ್ದು ಆ ಆಕಳನ್ನ ಕಳುವು ಮಾಡಿರುವ ಬಗ್ಗೆ ಹಿಂದೂ ಸಂಘಟನ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.  

ಭದ್ರಾವತಿ ತಾಲೂಕು ಮತ್ತು ಸುತ್ತಮುತ್ತಲಿನಲ್ಲಿ  ಅತಿಯಾಗಿ ಗೋ ಕಳ್ಳತನ ವಾಗುತ್ತಿದೆ.  ಎಲ್ಲಾ ಗೋವುಗಳು ಭದ್ರಾವತಿ ಅನ್ವರ್ ಕಾಲೋನಿ. ದೊಣಬಘಟ್ಟ ಗೌಡ್ರಹಳ್ಳಿ ತಿಪ್ಪಳಾಪುರ ಬೊಮ್ಮನಕಟ್ಟೆಯಲ್ಲಿ ಪ್ರತಿದಿನ ಗೋ ಹತ್ಯೆ ನಡೆಯುತ್ತದೆ. ಅಕ್ರಮ ಗೋಹತ್ಯೆಯನ್ನು ಕಂಡರೂ ಕಾಣದಂತೆ  ಭದ್ರಾವತಿ ಪೊಲೀಸರು ಕುಳಿತಿದ್ದಾರೆ ಎಂದು ಸಂಘಟನೆ ಆಕ್ರೋಶ ವ್ಯವಕ್ತಪಡಿಸಿದ್ದಾರೆ. 

Cow theft caught on CCTV

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close