SUDDILIVE || SHIVAMOGGA
ಬಂಜಾರ ಮತ್ತು ಸಹೋದರ ಜಾತಿಗೆ ಶೇಕಡವಾರು ಮೀಸಲಿನಲ್ಲಿ ಹೆಚ್ಚಳಕ್ಕೆ ಒತ್ತಾಯ-Demand for increase in percentage reservation for Banjara and allied castes
ಬಂಜಾರ, ಕೊರಚ, ಕೊರಮ ಭೋವಿ ಸಮಾಜಕ್ಕೆ ನಿಗದಿ ಪಡಿಸಿರುವ 4% ಒಳಮೀಸಲಿನಿಂದ 5% ಗೆ ಏರಿಸಬೇಕು. ಈ ಸಮುದಾಯವನ್ನ ಅಸ್ಪೃಶ್ಯರಲ್ಲದ ಜಾತಿ ಎಂದು ಕರೆದಿರುವುದನ್ನ ಕೈಬಿಡಬೇಕೆಂದು ಬಂಜಾರ ವಿದ್ಯಾರ್ಥಿ ಸಂಘ ಆಗ್ರಹಿಸಿದೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಸಂಘದ ಅಧ್ಯಕ್ಷ ಗಿರೀಶ್ ಆ.4 ರಂದು ಸಮೀಕ್ಷೆ ಪೂರ್ಣಗೊಳಿಸಿ ನ್ಯಾಯವಾದಿ ನಾಗಮೋಹನ್ ದಾಸ್ ಅವರು ಸರ್ಕಾರಕ್ಕೆ ವರದಿ ನೀಡಿದ್ದಾರೆ. ವೈಜ್ಞಾನಿಕ ದತ್ತಾಂಶಗಳನ್ನ ಸಂಗ್ರಹಿಸಿ ನೀಡಲಾಗಿದೆ ಎಂದರು.
ನ್ಯಾಯಾಧೀಶರ ಒಳ ಮೀಸಲು ಶಿಫಾರಸ್ಸು ಬಂಜಾರ ಸಮುದಾಯಕ್ಕೆ ಮಾರ್ಪಾಡಿಸಿರುವ ಬಗ್ಗೆ ಅತಂಕವಿದೆ. ಕೆಲ ಮಾಧ್ಯಮಗಳಲ್ಲಿ ಪ.ಸಮುದಾಯದಲ್ಲಿ 1% ಎಡಗೈ 6% ಗುಂಪು ೩ರಲ್ಲಿ ಬರುವ ಬಲಗೈಗೆ 3% ಬಂಜಾರ ಮತ್ತಿತರೆಗೆ 4% ಎಂದು ನಿಗದಿ ಮಾಡಿದೆ. ಬಂಜಾರ ಕೊರಮ ಕೊರಚ ಸಮುದಾಯಕ್ಕೆ ಇದನ್ನ 5% ಹೆಚ್ಚಿಸಬೇಕು.
ಸಾಮಾಜಿಕ ಮತ್ತು ಶೈಕ್ಷಣಿಕ ನ್ಯಾಯ ಕಲ್ಪಿಸಬೇಕು ಎಂಬುದು ಸಂವಿಧಾನದ ಆಗ್ರಹಿಸಿದೆ. ಆರಂಭದಲ್ಲಿ ಒಳಮೀಸಲು ಜಾರಿಗೊಳಿಸುವಾಗ 2011 ರ ಜನಸಂಖ್ಯೆಯನ್ನ ಆಧಾರವಾಗಿಟ್ಟುಕೊಂಡು ವರದಿಯನ್ನ ಜಾರಿಗೆ ತರುವ ಅಪಾಯವಾಗಿತ್ತು. ನಾಗಮೋಹನ್ ದಾಸ್ ಅಸ್ಪೃಶ್ಯರಲ್ಲದ ಜಾತಿಗಳು ಎಂದು ಬಂಜಾರ ಭೋವಿ ಕೊರಚ ಮತ್ತು ಕೊರಮ ಜಾತಿಗಳನ್ನ ಕರೆಯಲಾಗಿದೆ. ಇದು ಅಸಂವಿಧಾನಿಕ ಪದವಾಗಿದೆ ಇದನ್ನ ಕೈಬಿಡಬೇಕು ಎಂದರು.
ಸಮೀಕ್ಷೆಯಲ್ಲಿ ಬಂಜಾರ ಸಮುದಾಯಗಳು ವಲಸೆಹೋಗಲಿದೆ. ವಲಸೆ ಹೋದಾಗ ಮೀಸಲಾತಿಯನ್ನ ವರ್ಗೀಕರಿಸಿದ್ದು ಮತ್ತು ಈ ಸಮುದಾಯಗಳನ್ನ ಸೇರಿಸಿ ಸಹೋದರ ಜಾತಿಗಳಿಗೆ 4% ಹೇಗೆ ನಿಗದಿ ಪಡಿಸಲಾಗಿದೆ ಎಂಬುದು ಗೊತ್ತಾಗಬೇಕಿದೆ. ನಮ್ಮ ಅಹವಾಲು ಸ್ವೀಕರಿಸಿ ಬಂಜಾರ ಮತ್ತು ಸಹೋದರ ಜಾತಿಗಳಿಗೆ ಶೇಕಡವಾರುಗಳಲ್ಲಿ ಹೆಚ್ಚಿಸಬೇಕು. ಕ್ಯಾಬಿನೆಟ್ ನಲ್ಲಿ ವರದಿಯನ್ನ ಜಾರಿ ಮಾಡುವ ಸಾಧ್ಯತೆಯಿದೆ. ಮತ್ತೊಂದಿಷ್ಟು ಸಮಯ ಪಡೆದು ಸರ್ಕಾರ ಸಮುದಾಯಕ್ಕೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ನಿಗದಿ ಪಡಿಸಬೇಕು ಎಂದರು.
Demand for increase in percentage reservation for Banjara and allied castes