SUDDILIVE || YADURU
ಗಮನ ಸೆಳೆಯುತ್ತಿದೆ ಸುಳಗೋಡು ಯಡೂರಿನಲ್ಲಿ ಸ್ಥಾಪನೆಗೊಂಡ ಗಣಪತಿ, ಶಾಸಕ ಆರಗ ಜ್ಞಾನೇಂದ್ರ ಮೆಚ್ಚುಗೆ-The Ganapati installed in Sulagodu Yadur is attracting attention, MLA Araga Gyanendra praises it
ನಾಡಿನೆಲ್ಲೆಡೆ ಗಣೇಶೋತ್ಸವದ ಸಂಭ್ರಮ ಸುಳುಗೋಡು–ಯಡೂರು ವಿನಾಯಕ ಸೇವಾ ಸಮಿತಿ, ಪ್ರತಿವರ್ಷವೂ ವಿಭಿನ್ನ. Zoom background ಅವರ ಸಿಗಂದೂರು ಸೇತುವೆಯ ಮಾದರಿಯ ಗಣಪತಿ - ಶಾಸಕರು & ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನಾಡಿನ ಮೂಲೆಮೂಲೆಗೂ ಗಣೇಶ ಚತುರ್ಥಿಯ ಹಬ್ಬದ ಕಳೆಗೂಡಿದೆ. ವಿಶೇಷವಾಗಿ ಮಲೆನಾಡಿನ ತೀವ್ರ ಮಳೆಯ ನಡುವೆಯೂ ಸಾರ್ವಜನಿಕ ಗಣೇಶೋತ್ಸವಗಳನ್ನು ಗ್ರಾಮೀಣರು ಅಪಾರ ಉತ್ಸಾಹದಿಂದ ವಿಜೃಂಭಣೆಯಿಂದ ಆಚರಿಸುತ್ತಿದ್ದಾರೆ.
ಸುಳುಗೋಡು–ಯಡೂರು ವಿನಾಯಕ ಸೇವಾ ಸಮಿತಿ, ಪ್ರತಿವರ್ಷವೂ ವಿಭಿನ್ನ ಆಕರ್ಷಣೆಗಳ ಮೂಲಕ ಭಕ್ತರ ಮನಗೆದ್ದ ಸಂಸ್ಥೆ. ಹಿಂದಿನ ವರ್ಷ ಮಾಣಿ ಡ್ಯಾಂ ಮಾದರಿಯನ್ನು ನಿರ್ಮಿಸಿ ಎಲ್ಲರ ಮೆಚ್ಚುಗೆ ಪಡೆದಿದ್ದ ಸಮಿತಿ, ಈ ಬಾರಿ ಯಡೂರಿನ ಅಭೀಶ್ ಹಾಗೂ ಪ್ರಜ್ವಲ್ ಮಾಲೀಕತ್ವದ ಸಂಸ್ಥೆ Zoom backgrounds ಕೈಚಳಕದಲ್ಲಿ ಅರಳಿದ ಇತ್ತೀಚೆಗಷ್ಟೇ ಲೋಕಾರ್ಪಣೆಗೊಂಡ ಸಿಗಂದೂರು ಸೇತುವೆಯ ಅದ್ಭುತ ಮಾದರಿಯು ಗಣೇಶೋತ್ಸವಕ್ಕೆ ವಿಶಿಷ್ಟ ಮೆರಗು ನೀಡಿದೆ.
ಆದರೆ ಈ ಬಾರಿ ಸಮಿತಿಯ ವಿಶೇಷತೆ ಕೇವಲ ಕಲಾತ್ಮಕತೆಯಲ್ಲಿ ಮಾತ್ರ ಸೀಮಿತವಾಗಿರದೆ, ಗ್ರಾಮದ ಸಮಗ್ರ ಅಭಿವೃದ್ಧಿಯ ಅವಶ್ಯಕತೆಗಳ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಗ್ರಾಮಸ್ಥರಲ್ಲಿ ಹೋರಾಟದ ಕಿಚ್ಚು ಹೊತ್ತಿಸುವ ಕೆಲಸವನ್ನೂ ಕೈಗೊಂಡಿದೆ. ಹಬ್ಬದ ಸಂಭ್ರಮದ ನಡುವೆ ಸಮಾಜಮುಖಿ ಚಟುವಟಿಕೆಯನ್ನು ಹಬ್ಬದ ಅಂಗವಾಗಿ ಸೇರಿಸಿರುವುದು ಸ್ಥಳೀಯರಲ್ಲಿ ಹೊಸ ಚೈತನ್ಯವನ್ನು ಉಂಟುಮಾಡಿದೆ.
ಎಪಿಎಂಸಿ ಗಣಪ
ಅದರಂತೆ ಶಿವಮೊಗ್ಗದಲ್ಲಿಯೂ ಸಹ ವೊಶೇಷವಾಗಿ ಗಣಪತಿಯನ್ನ ಪ್ರತಿಷ್ಠಾಪಿಸಲಾಗಿದೆ. ವಿನೋಬ ನಗರ ಎಪಿಎಂಸಿ ಯಾರ್ಡ್ ನಲ್ಲಿ ಗೆಳೆಯರ ಬಳಗ ಸ್ಥಾಪಿಸಿದ ಗಣಪನಿಗೆ ಆಟದ ಉಪಕರಣಗಳಿಂದ ಅಲಂಕರಿಸಲಾಗಿದೆ. ಗೋಲಿ, ಕ್ರಿಕೆಟ್ ಬ್ಯಾಟು, ಚಿನ್ನಿದಾಂಡು, ಕೆರಂ ಉಪಕರಣಗಳು ಮೊದಲಾದವುಗಳಿಂದ ನಿರ್ಮಿಸಲಾಗಿದೆ.
![]() |
ಮಲವಗೊಪ್ಪದ ಧರ್ಮಸ್ಥಳದ ಗಣಪ |
ಮಲಗೊಪ್ಪದ ಗಣಪತಿ
ಧರ್ಮಸ್ಥಳದ ಮಂಜುನಾಥ ಸ್ವಾಮಿ ಹಾಗೂ ಅಣ್ಣಪ್ಪ ಸ್ವಾಮಿ ಎಲ್ಲರಿಗೂ ಕಾಪಾಡಲಿ. ಧರ್ಮವೂ ಉಳಿಯಲಿ. ಅಧರ್ಮವಾಗಿ ಮಾಡಿದ ಆರೋಪಗಳಿಗೆ ತಕ್ಕ ಶಾಸ್ತಿಯಾಗಲೀ......ಈ ಹಿನ್ನೆಲೆಯಲ್ಲಿ ಅಲಂಕರಿಸಲ್ಪಟ್ಟ ಗಣಪತಿ ಶಿವಮೊಗ್ಗದಲ್ಲಿ ಗಮನ ಸೆಳೆಯುತ್ತಿದೆ. ಮಲವಗೊಪ್ಪದ ಮೂರನೇ ತಿರುವಿನಲ್ಲಿ ಓಂ ಶ್ರೀ ಯುವಕರ ವಿದ್ಯಾ ಗಣಪತಿ ಸಂಘದವತಿಯಿಂದ ಪ್ರತಿಷ್ಠಾಪಿಸಲಾಗಿರುವ ತಂದೆ ಈಶ್ವರನ ಜೊತೆಗೆ ಭುವಿಗಿಳಿದು ಬಂದ ಗಣಪ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಓಂಗಣಪತಿ ಮತ್ತು ನ್ಯೂಮಂಡ್ಲಿಯ ಅಲಂಕಾರವೇನು?
ಅದರಂತೆ ಗಾಂಧಿ ಬಜಾರ್ ನಲ್ಲಿರುವ ತುಳಜಾಭವಾನಿಯಲ್ಲಿ ಗೋವರ್ಧನ ಗಿರಿ ಗಣಪನ ಅಂಕಾರವಿದ್ದರೆ. ಅಶೋಕ ರಸ್ತೆಯ ಓಂಗಣಪತಿಯಲ್ಲಿ ಕೋಟೆ ಆಂಜನೇಯ ಸ್ವಾಮಿ ತೇರನ್ನ ರಚಿಸಲಾಗಿದೆ. ಹೀಗೆ ವಿಶೇಷವಾಗಿ ಈ ಬಾರಿ ಗಣಪತಿಗಳು ಪ್ರತಿಷ್ಠಾಪನೆಗೊಳ್ಳುತ್ತಿದೆ. ಅರಂತೆ ನ್ಯೂ ಮಂಡ್ಲಿಯ ತೀರ್ಥಹಳ್ಳಿ ರಸ್ತೆಗೆ ಈ ಬಾರಿ ಭಗವದ್ಗೀತೆಯ ಗೀತೋಪದೇಶದ ಪ್ರತಿಗಳನ್ನ ಮಾಡಲಾಗುತ್ತಿದೆ. ಕಳೆದ ಬಾರಿ ಆಂಜನೇಯನ ಪ್ರತಿಮೆ ರಚಿಸಲಾಗಿತ್ತು.
The Ganapati installed in Sulagodu Yadur is attracting