SUDDILIVE || SHIVAMOGGA
ಬಿಡಾಡಿ ಗೋವುಗಳ ರಕ್ಷಣೆಗೆ ಶೀಘ್ರದಲ್ಲಿ ಗೋವರ್ಧನ ತಂಡ ರಚನೆ-Govardhan team to be formed soon to protect stray cows
ಬಿಡಾಡಿಗೋವುಗಳ ರಕ್ಷಣೆಗೆ ಇಂದು ಗೋವರ್ಧನ ತಂಡ ರಚಿಸಲಾಗಿದೆ. ಈ ಗೋವರ್ಧನ ತಂಡ ಬಿಡಾಡಿ ಗೋವುಗಳ ಸಂರಕ್ಷಣ ಅಭಿಯಾನವನ್ನ ಆರಂಭಿಸಿದೆ.
ಗೋ ಶಾಲೆಗಳ ಪೋಷಣೆಯಲ್ಲಿ ಈ ತಂಡ ಭಾಗಿಯಾಗಲಿದ್ದು, ಅಭಿಯಾನದಲ್ಲಿ ದೇಣಿಗೆ ನೀಡಿದ ಕುಟುಂಬವನ್ನು ಗೋ ಸಂರಕ್ಷಣ ಗೃಹವೆಂದು ಗುರುತಿಸಿ ಮನೆಯ ಬಿತ್ತಿಪತ್ರ ಹಚ್ಚಲಾಗುವುದು. ಅಭಿಯಾನದಲ್ಲಿ ಭಾಗಿಯಾದವರಿಗೆ ಮತಬೇಧವಿಲ್ಲದೆ ವರ್ಷಕ್ಕೊಮ್ಮೆ ಭೋಜನಕೂಟ ನಡೆಸುವುದು.
ಅಭಿಯಾನದಲ್ಲಿ ಭಾಗಿಯಾದವರಿಗೆ ಮನೆ ಗೃಹಪ್ರವೇಶ ಮತ್ತು ಗೋ ಪೂಜೆಗೆ ಅವಕಾಶ ನೀಡಲಾಗುವುದು. ಆಸಕ್ತರು ಈ ಅಭಿಯಾನದ ಬಗ್ಗೆ ಹೆಚ್ಚಿನಮಾಹಿತಿ ಪಡೆಯಲು ಕೆ.ಈ.ಕಾಂತೇಶ್, ಮೊ.9980555554, ಶೃಂಗೇರಿ ಹೆಚ್ ಎಸ್ ನಾಗರಾಜ್ ಮೊ. 9448241149 ಉಮೇಶ್ ಆರಾಧ್ಯ ಮೊ. 9886177311 ಸಂಪರ್ಕಿಸಬಹುದಾಗಿದೆ.
ಈ ವೇಳೆ ಮಾತನಾಡಿದ ಮಾಜಿ ಡಿಸಿಎಂ ಈಶ್ವರಪ್ಪ, ಅನೇಕ ಸಂಘಟಬೆಗಳ ಮೂಲಕ ಈ ಗೋವರ್ಧನ ತಂಡವನ್ನ ರಚಿಸಲಾಗಿದೆ. ಗೋವು ನನ್ನ ತಾಯಿ ಎಂದು ಯಾರು ಭಾವಿಸುತ್ತಾರೋ ಅವರು ಗೋವರ್ಧನಕ್ಕೆ ಬನ್ನಿ ಎಂದು ಕರೆ ನೀಡಿದರು.
ಗೋವಿನ ಪ್ರೇಮಿಗಳು ಬನ್ನಿ ಸೆಪ್ಟಂಬರ್ 1 ರಂದು ಸಭೆ ಸೇರಿ ಗೋವಿಗೆ ಭೂಮಿಕೊಟ್ಟವರ ಹೆಸರು ಪ್ರಕಟಿಸಲಾಗುವುದು. ಅಕ್ಟೋಬರ್ 5 ರಂದು ಶೃಂಗೇರಿ ಜಗದ್ಗುರುಗಳು ಬರಲಿದ್ದು ಅವರ ಮೂಲಕ ಗೋವರ್ಧನ ತಂಡ ಲೋಕರ್ಪಣೆಯಾಗಲಿದೆ ಎಂದರು.
ಸಭೆಯಲ್ಲಿ ರಾಷ್ಟ್ರಭಕ್ತರ ಬಳಗದ ಕೆ.ಈ.ಕಾಂತೇಶ್, ಮಾಜಿ ಎಂಎಲ್ ಸಿ ಮನೋಹರ ಮಸ್ಕಿ, ಬ್ರಾಹ್ಮಣ ಸಂಘದ ಜಿಲ್ಲಾಧ್ಯಕ್ಷ ನಟರಾಜ ಭಾಗವತ್, ಉಮೇಶ್ ಆರಾಧ್ಯ, ಶೇಷಾಚಲ, ಹೆಚ್ ಎಸ್ ನಾಗರಾಜ್ ಮೊದಲಾದವರು ಉಪಸ್ಥಿತರಿದ್ದರು.
Govardhan team to be formed soon