SUDDILIVE || SHIVAMOGGA
ಮಾನಸಿಕ ಚಿಕಿತ್ಸೆಗೆ ಬಂದಿದ್ದವ, ಉಳ್ಳಾಲದಿಂದ ಬಂದಿದ್ದ ವಿವಾಹಿತ ಮಹಿಳೆ ಸೇರಿ ನಾಲ್ವರು ನಾಪತ್ತೆ-ಸುಳಿವು ಸಿಕ್ಕರೆ ದೊಡ್ಡಪೇಟೆಗೆ ತಿಳಿಸಿ-Four people, including a person who came for mental health treatment and a married woman from Ullal, are missing - if you have any information, please inform Doddapet
ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿವಿಧೆಡೆ 4 ಜನ ಕಾಣೆಯಾಗಿದ್ದಾರೆ. ಇವರೆಲ್ಲರೂ ಜನವರಿ, 2024 ನೇ ಸಾಲಿನ ಆಗಸ್ಟ್ ಮಾಹೆಗಳಲ್ಲಿ ಕಾಣೆಯಾಗಿದ್ದಾರೆ. ಇವರ ಸುಳಿವು ದೊರೆತಲ್ಲಿ ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಠಾಣೆ ದೂ.ಸಂ.: 08182-261414 ನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.
ಹಾಸನದ ವಿಜಯನಗರ ವಾಸಿ ಬಿ. ಚಂದ್ರಗೌಡ ಎಂಬುವವರ ಮಗ 35 ವರ್ಷದ ವಿಜಯಕುಮಾರ್ ಎಂಬ ವ್ಯಕ್ತಿ ಜು. 19 ರಂದು ಶಿವಮೊಗ್ಗದ ಮಾನಸಾ ಆಸ್ಪತ್ರೆಯಿಂದ ಕಾಣೆಯಾಗಿರುತ್ತಾರೆ. ಈತನ ಚಹರೆ ಎತ್ತರ 5.6 ಅಡಿ, ತೆಳುವಾದ ಮೈಕಟ್ಟು, ಕೋಲುಮುಖ, ಗೋಧಿ ಮೈಬಣ್ಣ ಹೊಂದಿದ್ದು, ಎಡಗೈ ಮೇಲೆ ಸೂರಿ ಎಂಬ ಟ್ಯಾಟೂ ಇರುತ್ತದೆ. ಈತ ಹೊರಹೋಗುವಾಗ ಬಿಳಿ ಬಣ್ಣದ ಶರ್ಟ್, ಬೂದಿ ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ.
ಪಂಜಾಜೆ ಮನೆ, ಉಳ್ಳಾಲ ತಾಲೂಕು ಪ್ರವೀಣ್‌ಕುಮಾರ್ ಎಂಬುವವರ ಪತ್ನಿ 21 ವರ್ಷದ ಪೂಜಾ ಎಂಬುವವರು ಆಗಸ್ಟ್ 2024 ಮಾಹೆಯಲ್ಲಿ ದಾವಣಗೆರೆಯ ತನ್ನ ತಾಯಿ ಮನೆಗೆ ಹೋಗುವಾಗ ಶಿವಮೊಗ್ಗ ದ ಖಾಸಗಿ ಬಸ್ ನಿಲ್ದಾಣದಿಂದ ಕಾಣೆಯಾಗಿರುತ್ತಾರೆ. ಈಕೆಯ ಚಹರೆ 4.2 ಅಡಿ ಎತ್ತರ, ಸಾಧಾರಣ ಮೈಕಟ್ಟು, ಎಣ್ಣೆಕೆಂಪು ಮೈಬಣ್ಣ ಹೊಂದಿದ್ದು, ಎಡ ಮೊಣಕೈ ಮೇಲೆ ಪ್ರವೀಣ್ ಮತ್ತು ಬಲ ಮೊಣಕೈ ಮೇಲೆ ಹಾಲು ಎಂದು ಟ್ಯಾಟೂ ಹಾಕಿಸಿಕೊಂಡಿರುತ್ತಾರೆ. ಮೈಮೆಲೆ ಹಳದಿ ಬಣ್ಣದ ಚೂಡಿದಾರ, ಬಿಳಿ ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ.
ಶಿವಮೊಗ್ಗದ ಭಾರತಿ ಕಾಲೋನಿ 2ನೇ ಕ್ರಾಸ್ ವಾಸಿ, ಎನ್.ಟಿ.ರಸ್ತೆಯಲ್ಲಿ ಗಿರಿ ಟಿಫನ್ ಸೆಂಟರ್ ನಡೆಸುತ್ತಿದ್ದ 50 ವರ್ಷದ ಶ್ರೀನಿವಾಸ ಮತ್ತು 45 ವರ್ಷದ ಜಯಮ್ಮ ದಂಪತಿಗಳು ಜು.05 ರಂದು ಮನೆಯಿಂದ ಹೊರಗೆ ಹೋದವರು ಈವರೆಗೂ ವಾಪಾಸ್ಸಾಗಿರುವುದಿಲ್ಲ. ಶ್ರೀನಿವಾಸರ ಚಹರೆ 5.4 ಅಡಿ ಎತ್ತರ, ಗೋಧಿ ಮೈಬಣ್ಣ, ಸಾಧಾರಣಾ ಮೈಕಟ್ಟು, ಬಲಗೈ ಮೇಲೆ ಜಯಮ್ಮ ಎಂಬ ಹಚ್ಚೆ ಗುರುತಿದೆ. ಕೆಂಪು ಶರ್ಟ್ ಮತ್ತು ನೀಲಿ ಪಂಚೆ ಧರಿಸಿರುತ್ತಾರೆ. ಜಯಮ್ಮನವರ ಚಹರೆ 5.1 ಅಡಿ ಎತ್ತರ, ಬಿಳಿ ಮೈಬಣ್ಣ, ಸಾಧಾರಣಾ ಮೈಕಟ್ಟು, ಬಲಗೈ ಮೇಲೆ ಶ್ರೀನಿವಾಸ ಎಂಬ ಹಚ್ಚೆ ಇರುತ್ತದೆ. ಕಿತ್ತಳೆ ಬಣ್ಣದ ಚೂಡಿದಾರ್ ಧರಿಸಿರುತ್ತಾರೆ.
Four people are missing