ಮೀಟರ್ ಹಾಕಲು ಒಪ್ಪದ ಚಾಲಕನಿಗೆ ಬಿತ್ತು ದಂಡ-Driver fined for refusing to install meter

SUDDILIVE || SHIVAMOGGA

ಮೀಟರ್ ಹಾಕಲು ಒಪ್ಪದ ಚಾಲಕನಿಗೆ ಬಿತ್ತು ದಂಡ-Driver fined for refusing to install meter

ಟ್ರಾಫಿಕ್ ಪೊಲೀಸ್ ಠಾಣೆಯ ಸಿಪಿಐ ಆಗಿ ದೇವರಾಜ್ ಬಂದ ಮೇಲೆ ಸ್ಪಲ್ಪ ಬದಲಾವಣೆ ಕಂಡು ಬರುತ್ತಿದೆ. ಬಸ್ ನವರಿಗೆ ಖಡಕ್ ಸೂಚನೆ, ಗಾಂಧಿ ಬಜಾರ್ ನಲ್ಲಿ ಫುಟ್ ಪಾತ್ ವ್ಯಾಪಾರಿಗಳಿಗೆ ಖಡಕ್ ಸೂಚನೆ ನೀಡಿರುವುದು ಸ್ವಾಗತಾರ್ಹವೆನಿಸಿದೆ. 

ಈಗ ಮತ್ತೊಂದು ಗಮನಾರ್ಹ ಕೆಲಸ ನಡೆಸಿರುವ ಸಿಪಿಐ ಅವರಿಂದ ಸೂಪರ್ ಕೆಲಸ ಆಗಿದೆ. ಆಟೋ ಮೀಟರ್ ಹಾಕಲು ಒಪ್ಪದ ಆಟೋ ಚಾಲಕನಿಗೆ ಸಿಬ್ಬಂದಿಗಳ ಮೂಲಕ ಬಿಸಿ ಮುಟ್ಟಿಸಿದ್ದಾರೆ. 

ಆಟೋ‌ ಮೀಟರ್ ಹಾಕಲು ಹೇಳಿದ ಪ್ರಯಾಣಿಕರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಚಾಲಕನಿಗೆ ದಂಡ ವಿಧಿಸಿದ್ದಾರೆ.  ಪ್ರಯಾಣಿಕರಿಂದ ದೂರು‌ ಬಂದ  ಹಿನ್ನೆಲೆಯಲ್ಲಿ ಆಟೋ ಚಾಲಕನಿಗೆ ₹500 ದಂಡ ವಿಧಿಸಿ‌ ಮುಂದಿನ ದಿನಗಳಲ್ಲಿ ಈ ರೀತಿ ಮಾಡದಂತೆ ಮತ್ತು ಕಡ್ಡಾಯವಾಗಿ ಆಟೋ ಮೀಟರ್ ಹಾಕುವಂತೆ  ಸೂಕ್ತ ತಿಳುವಳಿಕೆ ನೀಡಿದೆ.

Driver fined for refusing to install meter

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close