ad

ಸಂಸದರ ಎಷ್ಟನೇ ಹುಟ್ಟುಹಬ್ಬ ಇವತ್ತು? MP Birthday celebration

 SUDDILIVE || SHIVAMOGGA

ಸಂಸದರ ಎಷ್ಟನೇ ಹುಟ್ಟುಹಬ್ಬ ಇವತ್ತು?  MP Birthday celebration 

Mp, Birthday

ಶಿವಮೊಗ್ಗ ಜಿಲ್ಲೆಯ ಸಂಸದರ 53 ನೇ ಹುಟ್ಟುಹಬ್ಬ ನಡೆದಿದೆ. ವಿನೋಬನಗರದ ಮನೆಯಲ್ಲಿ ನಡೆದ ಹುಟ್ಟುಹಬ್ಬ ಜಾತ್ರೆಯಂತಾಗಿದೆ. ಈ ವೇಳೆ ವಿದ್ಯಾರ್ಥಿಗಳಿಗೆ ತ್ರೈಸಿಕಲ್ ಮೊಬೈಲ್ ಮತ್ತು ವಿಕಲಚೇತನರ ಸ್ಟ್ಯಾಂಡ್ ಸಹ ಹಂಚಲಾಯಿತು.

ನಂತರ ಮಾತನಾಡಿದ ಸಂಸದರು ಮೊದಲ ಚುನಾವಣೆಯಲ್ಲಿ ಗೆದ್ದ ಅಂತರ ನಾಲ್ಕನೇ ಲೋಕಸಭಾ ಚುನಾವಣೆಯ ಸ್ಪರ್ಧೆಯ ಗೆಲುವಿನ ಅಂತರದಲ್ಲಿ ವ್ಯತ್ತಾಸವಾಗಿದೆ.  2.43 ಲಕ್ಷ ಗೆಲುವ ನಾಲ್ಕನೇ ಚುನಾವಣೆಯಾಗಿದೆ. ಜಿಲ್ಲೆಗೆ ವಾಟರ್ ವೇಸ್ ಬಿಟ್ಟು, ರೋಡ್ ವೇಸ್, ಏರ್ ವೇಸ್, ವಾಟರ್ ವೇಸ್ ಸಹ ಜಿಲ್ಲೆಗೆ ತಂದಿದ್ದೇನೆ. ವಾಟರ್ ವೇಸ್ ತರುವ ಮೂಲಕ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಹೆಚ್ಚಿಸುವ ಪ್ರಯತ್ನ ನಡೆದಿದೆ ಎಂದರು. 

ಕೋಟೆಗಂಗೂರ್ ನಲ್ಲಿ ರೈಲ್ವೆ ಕೋಚಿಂಗ್ ಡಿಪೊ ಭರದಿಂದ ಸಾಗುತ್ತಿದೆ. ಶಿವಮೊಗ್ಗ-ಹರಿಹರಕ್ಕೆ ಲ್ಯಾಂಡ್ ರಾಜ್ಯಸರ್ಕಾರ ಹಿಂಜರಿದ ಪರಿಣಾಮ ಅಕ್ವಜೀಷನ್ ಕೈಬಿಡಲಾಗಿದೆ. ತಾಳಗುಪ್ಪದಿಂದ ಶಿರಸಿಗೆ ಸರ್ವೆ ನಡೆದಿದೆ. ತಾಳಗುಪ್ಪ ಹೊನ್ನಾವರ ಮಾರ್ಗವನ್ನ ಪರಿಗಣಿಸುವಂತೆ ರೈಲ್ವೆ ಕೇಂದ್ರ ಸಚಿವರಿಗೆ ಪ್ರಸ್ತಾಪಿಸಲಾಗಿದೆ ಎಂದರು. 

ಆಗುಂಬೆ ಟನಲ್ ನಿಂದಲೇ ಮಂಗಳೂರಿಗೆ ರೈಲ್ವೆ ಹಳಿ ನಿರ್ಮಿಸಲು ಪ್ರಯತ್ನಿಸಲಾಗಿತ್ತು.‌ ಅದನ್ನ ಸಚಿವರು ಬೇಡ ಅಂದಿದ್ದಾರೆ. ಕೋಟೆಗಂಗೂರಿನಿಂದ ಮಂಗಳೂರಿಗೆ ಸಿಂಗಲ್ ವೇ ಮೂಲಕ ಮಂಗಳೂರಿಗೆ ಸಂಪರ್ಕಿಸಲು ಮಾರ್ಗ ನೋಡಲಾಗಿದೆ. ಅರಸಾಳಿಂದ, ತೀರ್ಥಹಳ್ಳಿ ಮತ್ತು ಶೃಂಗೇರಿ ಮೂಲಕ ಮಂಗಳೂರಿಗೆ ಹೊಸಮಾರ್ಗ ತೆಗೆದುಕೊಂಡುಹೋಗುವ ಪ್ರಯತ್ನ ನಡೆದಿದೆ. ಜಿಲ್ಲೆಯಲ್ಲಿ ಏರ್ಪೋರ್ಟ್,ರೈಲ್ವೆ ಅಭಿವೃದ್ಧಿ ಮಾಡಲಾಗುವುದು. ಅರಣ್ಯ ಕ್ಲಿಯರೆನ್ಸ್ ಗೆ ಅಧಿಕಾರಿಗಳು ಹಂತ ಹಂತವಾಗಿ ನೀಡಲಿದ್ದಾರೆ ಎಂದರು. 

ಶೆಟ್ಟಿಹಳ್ಳಿ ಅಭಯಾರಣ್ಯ 600 ಸ್ಕ್ವಯರ್ ಮೀಟರ್ ಕ್ಕೂ ಹೆಚ್ಚು ಅರಣ್ಯವಿತ್ತು. ಅದನ್ನ ಕಡಿಮೆಗೊಳಿಸಿ ಕಂದಾಯ ಜಾಗವನ್ನಾಗಿ ಮಾಡಲಾಗಿದೆ. ಇದನ್ನ ಅರಣ್ಯ ಎಂದು ಹೇಳಲಾಗುತ್ತಿತ್ತು. ಈ ವಿಷಯವನ್ನೂ ಯಾರೋ ಒಬ್ಬರು ನ್ಯಾಯಾಲಯಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಅದು ಅರಣ್ಯ ಜಾಗವಲ್ಲ ಎಂದರು. 

ಗಂಗೊಳ್ಳಿ ಕುಂದಾಪುರದ ನಡುವಿನ ಸೇತುವೆಗೆ ಕ್ಲಿಯೆನ್ಸ್ ಬೇಕಿತ್ತು ಒಂದು ಕಿಮಿ ಸೇತುವೆ ಕಾಮಗಾರಿಗೆ ಅನುಮತಿ ದೊರೆತಿದೆ ಎಂದ ಸಂಸದರು. ಹಿಂದೆಯೂ ತೆರಿಗೆ ಕಟ್ಟುತ್ತಿದ್ದರು. ಕೆಲಸ ಆಗ್ತಾಯಿರಲಿಲ್ಲ. ಈಗ ತೆರಿಗೆ ಕಟ್ಟುತ್ತಿದ್ದ ತಕ್ಕಂತೆ ಅಭಿವೃದ್ಧಿಯಾಗಿದೆ ಎಂದರು. 



ಹೈಡ್ರೋಪವರ್ ಶಕ್ತಿ ಹೆಚ್ಚಾಗಿದೆ. ಶರಾವತಿ ಪಂಪ್ಡ್ ಸ್ಟೋರೇಜ್ ಗೆ ಬಿಜೆಪಿ ವಿರೋಧವಿದೆ. ಸಣ್ಣಪ್ರಮಾಣದ ವಿದ್ಯುತ್ ಉತ್ಪಾದನೆಗಿಂತ ದೊಡ್ಡಮಟ್ಟದ ವಿದ್ಯುತ್ ಪ್ರಮಾಣ ಹೆಚ್ಚಿಸ ಬೇಕಿತ್ತು ಎಂದರು.

ಗುಟ್ಟಾಗೆ ಉಳಿಯಿತು ಸಂಸದರ ಹುಟ್ಟುಹಬ್ಬ

ಸಂಸದರ ಹುಟ್ಟುಹಬ್ಬ ಆಚರಣೆ ಭರದಿಂದ ನಡೆದಿದೆ. ಬಹುತೇಕ ಗಣ್ಯರು ಸಂಸದರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನ ಹೇಳಿದ್ದಾರೆ. ಆದರೆ ಯಾವುದೇ ಬ್ಯಾನರ್ ವಿಶ್ ಗಳಲ್ಲಿ ಸಂಸದರ ಎಷ್ಟನೇ ಹುಟ್ಟುಹಬ್ಬ ಎಂಬುದೇ ಉಲ್ಲೇಖವಿದ್ದು ಈ ಕುರಿತು ಸಂಸದರನೇ ಕೇಳಿದಾಗ ಮುಗುಳ್ನಕ್ಕು ಗುಟ್ಟಾಗಿ ಇಡಲಾಗಿಎ ಎಂದು ಹೇಳಿದರು.  

MP Birthday celebration

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close