SUDDILIVE || SHIVAMOGGA
ನ್ಯಾಯಾಲಯದಲ್ಲಿದ್ದ ಬ್ಯಾಟರಿ ಕಳವು-Battery stolen from court
ಬಾಲರಾಜ ಅರಸ್ ರಸ್ತೆಯಲ್ಲಿರುವ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಯು.ಪಿ.ಎಸ್‌ಗೆ ಅಳವಡಿಸಿದ್ದ ಬ್ಯಾಟಿರಿಗಳು ಕಳ್ಳತನವಾಗಿವೆ. ಒಟ್ಟು 24 ಬ್ಯಾಟರಿಗಳು ಕಳ್ಳತನವಾಗಿವೆ ಎಂದು ನ್ಯಾಯಾಲಯದ ಪ್ರಭಾರ ಮುಖ್ಯ ಆಡಳಿತಾಧಿಕಾರಿ ದೂರು ನೀಡಿದ್ದಾರೆ.
ಜುಲೈ 28ರಂದು ಸಂಜೆ 4 ಗಂಟೆಗೆ ನ್ಯಾಯಾಲಯದ ಯು.ಪಿ.ಎಸ್ ಕನೆಕ್ಷನ್ ಸ್ಥಗಿತಗೊಂಡಿತ್ತು. ಯು.ಪಿ.ಎಸ್ ಕೊಠಡಿಯಲ್ಲಿ ಪರಿಶೀಲನೆಗೆ ತೆರಳಿದ್ದಾಗ 24 ಬ್ಯಾಟರಿಗಳು ಇರಲಿಲ್ಲ. 2019ರಲ್ಲಿ ಈ ಬ್ಯಾಟರಿಗಳನ್ನು ಅಳವಡಿಸಲಾಗಿತ್ತು. ಎರಡು ತಿಂಗಳ ಹಿಂದೆ ಸರ್ವಿಸ್‌ಗಾಗಿ ಪರಿಶೀಲಿಸಿದಾಗ ಬ್ಯಾಟರಿಗಳು ಇದ್ದವು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಬ್ಯಾಟರಿಗಳು ಕಳ್ಳತನವಾಗಿರುವ ಕುರಿತು ಜಯನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ತನಿಖೆ ನಡೆಯುತ್ತಿದೆ.
Battery stolen from court