SUDDILIVE || SHIVAMOGGA
ಗಣಪನ ಮೂರ್ತಿಗಳ ಭರ್ಜರಿ ಮಾರಾಟ- Huge sale of Ganesha idols
ನಾಳೆಯ ಗಣೇಶನ ಹಬ್ಬಕ್ಕೆ ಮೂರ್ತಿಗಳ ಮಾರಾಟ ಭರದಿಂದ ಸಾಗಿದೆ. ನಗರದ ಸೈನ್ಸ್ ಮೈದಾನ ಸೇರಿ ಹಲವೆಡೆ ಗಣೇಶ ಮೂರ್ತಿ ಮಾರಾಟ ಬಿರಿಸುಗೊಂಡಿದೆ. ಸೈನ್ಸ್ ಮೈದಾನದಲ್ಲಿ ಸರಿಸುಮಾರು 50 ಕ್ಕೂ ಹೆಚ್ಚು ಅಂಗಡಿಗಳಲ್ಲಿ ಮಾರಾಟವಾಗುತ್ತಿದೆ.
ಮನೆಯಲ್ಲಿ ಗಣಪತಿ ಕೂರಿಸಲು 400 ರೂ ನಿಂದ ಆರಂಭವಾಗುತ್ತದೆ. ಮನೆಯಲ್ಲಿ ಚಿಕ್ಕಗಣಪತಿಯಿಂದ ದೊಡ್ಡ ಗಣಪತಿಯನ್ನ ಕೂರಿಸಲಾಗುವುದು. ಇಲ್ಲಿ ಮೂರ್ತಿಯ ಅಳತೆಯ ಮೇಲೆ ಮಾರಾಟವಾಗುತ್ತಿದೆ. ಇನ್ನು ಪೆಂಡಾಲ್ ನಲ್ಲಿ ಪ್ರತಿಷ್ಠಾಪಿಸುವ ಗಣಪತಿ ಮೂರ್ತಿಗಳ ಮಾರಾಟವೂ ಜೋರಾಗಿದೆ.
5.5 ಅಡಿಗಳಿಂದ 6 ಅಡಿ ಮೂರ್ತಿಗಳು 21-25 ಸಾವಿರ ರೂ ವರೆಗೆ ಮಾರಾಟವಾಗುತ್ತಿದೆ. ಇಲ್ಲಿ ವಿನ್ಯಾಸಗಳ ಮೇಲೆ ದರ ಫಿಕ್ಸ್ ಆಗಿದೆ. 3.5 ಅಡಿಯಿಂದ ನಾಲ್ಕು ಅಡಿ ಗಣಪನ ಮೂರ್ತಿ 10 ಸಾವಿರ ರೂ. ನಿಂದ 18 ಸಾವಿರ ರೂ. ವರೆಗೆ ಮಾರಾಟವಾಗುತ್ತಿದ್ದಾರೆ. 2.5 ರಿಂದ 2.75 ಅಡಿ ಗಣಪನ ಮೂರ್ತಿ 6000 ರೂಗಳಿಂದ 8000 ಗಣಪನ ಮೂರ್ತಿ ಮಾರಾಟವಾಗುತ್ತಿದೆ.
ಶಿವನ ತೋಳಿನಲ್ಲಿ ಗಣಪ, ಕೃಷ್ಣನ ಅವತಾರದಲ್ಲಿ ಗಣಪ, ಬಸವನ ಮೇಲೆ, ಶಂಕುವಿನಮೇಲೆ ಗಣಪನ ಆಕೃತಿಗಳು ಮತ್ತು ವಿವಿಧ ಭಂಗಿಯ ಗಣಪನ ಮೂರ್ತಿಯ ವಿಗ್ರಹಗಳು ಮಾರಾಟವಾಗುತ್ತಿದೆ. ನಾಳೆಯ ವೇಳೆಗೆ ಈ ದರಗಳು ಕುಸಿಯುವ ಸಾಧ್ಯತೆಯಿದೆ. ಬಹುತೇಕ ಗಣಪತಿಗಳು ಹಾರನಹಳ್ಳಿಯಲ್ಲಿ ತಯಾರಿಕೆ ಮಾಡುವ ಮೂರ್ತಿಗಳೆ ಹೆಚ್ಚಿದೆ.
ಈ ಬಾರಿ ಗಣಪತಿ ಪ್ರತಿಷ್ಠಾಪನೆಗಳು ಹೆಚ್ಚಾಗಿವೆ. ಜಿಲ್ಲೆಯಲ್ಲಿ 3584 ಗಣಪತಿ ಪ್ರತಿಷ್ಠಾಪನೆಯಾಗುತ್ತಿವೆ. ಮೂರು ದಿನಗಳ ನಂತರ ವಿಸರ್ಜನೆಗೊಳ್ಳುವ ಗಣಪತಿ ಪೆಂಡಾಲ್ ಗಳು ಇದರಲ್ಲಿ 1200 ಗಣಪತಿಗಳಿವೆ. ನಗರದಲ್ಲಿ 850 ಕ್ಕೂ ಹೆಚ್ಚು ಗಣಪತಿಗಳು ಪ್ರತಿಷ್ಠಾಪನೆಯಾದರೆ ಇದರಲ್ಲಿ 684 ಗಣಪತಿಗಳು ಮೂರುದಿನಗಳ ನಂತರ ವಿಸರ್ಜನೆಯಾಗುವ ಗಣಪತಿಗಳನ್ನ ಪ್ರತಿಷ್ಠಾಪಿಸಲಾಗುತ್ತಿದೆ.
Huge sale of Ganesha idols

