SUDDILIVE || SHIVAMOGGA
ಸಕ್ರೆಬೈಲಿಗೆ ಪಿಸಿಸಿಎಫ್ ಭೇಟಿ-PCCF visit sakrebailu
ಸಕ್ಕರೆಬೈಲು ಆನೆ ಶಿಬಿರದಲ್ಲಿ ಆನೆಗಳಿಗಿಲ್ಲ ಎಂಬ ಆರೋಪಗಳು ಕೇಳಿ ಬಂದ ಬೆನ್ನಲ್ಲೇ ಪಿಸಿಸಿಎಫ್ ನಿನ್ನೆ ಶಿಬಿರಕ್ಕೆ ಭೇಟಿ ನೀಡಿದ್ದಾರೆ. ಆನೆಗಳನ್ನ ತಪಾಸಣೆ ನಡೆಸಿದ್ದಾರೆ.
ಕಾಡಿನಲ್ಲಿ ವಿಕ್ರಾಂತ ದಷ್ಟಪುಷ್ಟವಾಗಿ ಸಮೃದ್ಧಿಯಾಗಿ ಇದ್ದ.
*ವಿಕ್ರಾಂತನಿಗೆ ವಿಕ್ರಾಂತನೇ ಸರಿಸಾಟಿ
*ಸಾಯುವ ಹಂತತಕ್ಕೆ ತಲುಪಿದ ವಿಕ್ರಾಂತ.
*ಬೆನ್ನು ಬಾಗಿ ಬಡಕಲು ಅದ ವಿಕ್ರಾಂತ.
*ಮೈಯೆಲ್ಲಾ ಗಾಯವಾಗಿ ನೋವಿನ ಮಾಡುವಲ್ಲಿ ಇರುವ ವಿಕ್ರಾಂತ.
*ಆನೆ ಪಾಳಗಿಸುವುದೇ ನರಕಯಾತನೆ.ಮತ್ತೆ ಮರು ಹುಟ್ಟು ಪಡೆಯುವ ಕಾಡಾನೆ,ಹೆಚ್ಚು ಕಮ್ಮಿ ಆದರೆ ಸಾವು ಖಚಿತ.
*ಸಕ್ಕರೆಬೈಲು ಆನೆ ಬಿಡಾರದಲ್ಲಿ ಇವೆ ಸಾಕಷ್ಟು ರೋಗರುಜಿನ ಆನೆಗಳು,ನಿರ್ವಹಣೆ ಸರಿ ಇಲ್ಲದೆ ಇಲ್ಲಿವರೆಗೂ 20ಕ್ಕು ಹೆಚ್ಚು ಆನೆಗಳು ಬಲಿ.ಸತ್ತಿವೆ.
*ಸಕ್ಕರೆಬೈಲು ಆನೆ ಬಿಡಾರಕ್ಕೆ ಬೇಕು ವೈಜ್ಞಾನಿಕ, ಆರೋಗ್ಯ ಪೂರ್ಣ ವ್ಯವಸ್ಥೆ
*ಹಿಂದಿನ ಪಶುವೈದ್ಯ ವಿನಯ್ ಅಜ್ಞಾನದಿಂದ ಹಲವು ಆನೆಗಳ ಸಾವು,ಅಕ್ರಮ ಚಟುವಟಿಕೆ,ಭ್ರಷ್ಟಾಚಾರ,ಪೂರ್ಣ ತನಿಖೆ ಆಗಬೇಕು ಕಾನೂನು ಕ್ರಮ ಆಗಬೇಕು .
*ಸಕ್ಕರೆಬೈಲು ಆನೆ ಶಿಬಿರ ಆನೆ ಮಾನವ ಸಂಘರ್ಷ ಇರುವ ಕಡೆ ಸ್ಥಳಾಂತರ ಮಾಡುವುದು ಸೂಕ್ತ,ತಜ್ಞರ ವರದಿಯಲ್ಲೂ ಉಲ್ಲೇಖ .
ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಸುತ್ತ ಮುತ್ತಲಿನ ಪರಿಸರದಲ್ಲಿ ವಿಜೃಂಭಣೆಯಿಂದ ರಾಜನಂತೆ ಇದ್ದ ವಿಕ್ರಾಂತ್ ಆನೆಯನ್ನು ಇತ್ತೀಚೆಗೆ ಸೆರೆ ಹಿಡಿದು ಸಕ್ಕರೆ ಬೈಲು ಆನೆ ಶಿಬಿರದ ಕ್ರಾಲ್ ನಲ್ಲಿ ಬಂಧಿಸಿ ಅವನನ್ನು ಪಳಗಿಸಿದ ರೀತಿ ನೋಡಿದರೆ ಎಂಥವರಿಗೂ ಕಣ್ಣಲ್ಲಿ ನೀರು ಬರುತ್ತದೆ.
ಒಂದು ಕಾಡಾನೆಯನ್ನು ಅತ್ಯಂತ ಚಿತ್ರ ಹಿಂಸೆ ಕೊಟ್ಟು ಪಳಗಿಸುವ ಅಗತ್ಯ ಏನು ಇದೆ.ಅದರಲ್ಲಿ ಈ ರೀತಿ ಹೊಡೆದು ಬಡೆದು ಆನೆಗೆ ನರಕಯಾತನೆ ತೋರಿಸಿ ಅದನ್ನು ಜೀವಂತ ಶವ ಮಾಡುವುದು ಅಮಾನವೀಯ ಘಟನೆ ಮತ್ತು ಕ್ರೌರ್ಯದ ಪರಮಾವಧಿ ಅಲ್ಲದೆ ಇನ್ನೇನು?ವಿಕ್ರಾಂತ ಕಾಲಿನಲ್ಲಿ ಗಾಯ ರಕ್ತ ಕಿವು ಬರುತ್ತಿದ್ದು,ನರಕಯಾತನೆ ಅನುಭವಿಸುತ್ತಿದ್ದಾನೆ.
ಸಕ್ಕರೆಬೈಲು ಆನೆ ಶಿಬಿರದಲ್ಲಿ ಆನೆಗಳಿಗೆ ಇಲ್ಲ ರಕ್ಷಣೆ.
ಈಗಾಗಲೇ ಈ ಶಿಬಿರದಲ್ಲಿ 20ಕ್ಕು ಹೆಚ್ಚು ಆನೆಗಳು ಮೃತಪಟ್ಟಿವೆ.ಹಾಸನ ಜಿಲ್ಲೆಯಲ್ಲಿ ಸೆರೆ ಹಿಡಿದ ಬಹುತೇಕ ಆನೆಗಳನ್ನು ಇಲ್ಲಿ ತಂದು ಪಳಗಿಸುವ ಕಾರ್ಯ ಆಗುತ್ತಿದೆ.ಪಾಪದ ಎಷ್ಟೋ ಆನೆಗಳನ್ನು ಇಲ್ಲಿ ತಂದು ಸರಿಯಾಗಿ ನೋಡಿಕೊಳ್ಳದೆ ಆನೆಗಳು ಸತ್ತಿವೆ.ಅವುಗಳನ್ನು ಲಾಲನೆ, ಪಾಲನೆ, ಪೋಷಣೆ ಸರಿಯಾಗಿ ಮಾಡದೆ ರೋಗ ರುಜಿನ ಬಂದು ಸೊತ್ತಿರುವುದು ಇದೆ.
PCCF visit sakrebailu
