SUDDILIVE || HOSANSGARA
ನೀರಿಗೆ ವಿಷ ಬೆರೆಸಿದ ಪ್ರಕರಣ-ಬಹಿರಂಗಗೊಂಡ ತನಿಖೆ-Investigation into water poisoning case revealed
ಬಹಳ ಗಂಭೀರವಾಗಿದ್ದ ವಿಷಯ ಮಕ್ಕಳಾಟಿಕೆಯಲ್ಲಿ ಕೊನೆಯಾಗಿದೆ. ಮಕ್ಕಳ ಹುಡುಗಾಟಿಕೆಯಲ್ಲಿ ನೀರಿಗೆ ವಿಷ ಬೆರೆಸಿದ್ದಾಗಿ ತನಿಖೆಯಿಂದ ತಿಳಿದು ಬಂದಿದೆ.
ಹೊಸನಗರ ತಾಲೂಕಿನ ಹೂವಿನಕೋಣಿ ಶಾಲೆಯಲ್ಲಿ ನೀರಿನ ತೊಟ್ಟಿಗೆ ವಿಷ ಬೆರೆಸಿದ ಪ್ರಕರಣದಿಙದ ಮಕ್ಕಳು ಅಸ್ವಸ್ಥರಾಗಿ ಆಸ್ಪತ್ರೆ ನಾಲ್ಕು ದಿನಗಳ ಹಿಂದೆ ದಾಖಲಾಗಿದ್ದರು. ಈ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ರವರು ಸಹ ಟ್ವೀಟ್ ಮೂಲಕ ಪ್ರತಿಕ್ರಿಯಿಸಿ ಭಯೋತ್ಪಾದನೆಗಿಂತ ಗಂಭೀರ ವಿಷಯ ಎಂದು ತಿಳಿಸಿದ್ದರು.
ಸಿಎಂ ಅವರ ಅದೇಶ ಬೆನ್ನಲ್ಲೇ ತನಿಖೆ ಚುರುಕುಗೊಂಡಿತ್ತು. ಪೊಲೀಸರು ಫುಲ್ ಅಲರ್ಟ್ ಆಗಿದ್ದು ವಿವಿಧ ರೀತಿಯಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದರು. ಪ್ರಕರಣ ಭೇದಿಸಲು ಮೂರು ತಂಡಗಳ ರಚನೆಯನ್ನು ಶಿವಮೊಗ್ಗ ಎಸ್ಪಿ ಮಿಥುನ್ ಕುಮಾರ್ ಮಾಡಿದ್ದರು. ತನಿಖೆಗಾಗಿ ಒಟ್ಟು 18 ಪೊಲೀಸರ ನಿಯೋಜಿಸಿದ್ದರು. ತೀರ್ಥಹಳ್ಳಿ ಡಿವೈಎಸ್ಪಿ ಅರವಿಂದ್ ಕಲಗುಜ್ಜಿ ನೇತೃತ್ವದಲ್ಲಿ ತಂಡ ರಚನೆ ಆಗಿತ್ತು. ಟೆಕ್ನಿಕಲ್ ಎವಿಡೆನ್ಸ್ ಕಲೆಹಾಲು ಪೊಲೀಸರು ಮುಂದಾಗಿದ್ದಾರೆ. ಟವರ್ ಡಂಪ್ ಮೂಲಕ ತನಿಖೆ ಆರಂಭ ಮಾಡಿದ್ದರು.
ಐದನೇ ತರಗತಿಯ ಬಾಲಕನೇ ಈ ಕೃತ್ಯ ನಡೆಸಿರುವುದಾಗಿ ತನಿಖೆಯಿಂದ ಬೆಳಕಿಗೆ ಬಂದಿದೆ. ಈ ಘಟನೆ ನಡೆಯುವ 15 ದಿನಗಳ ಹಿಂದೆ ಈತನ ಸ್ನೇಹಿತ ಫಿನಾಯಿಲ್ ಹಾಕಿದ್ದನ್ನ ಗಮನಿಸಿದ ಬಾಲಕ ನೀರಿಗೆ ವಿಷ ಬೆರೆಸಿದ್ದಾನೆ ಎಂದು ತಿಳಿದು ಬಂದಿದೆ. ಮಕ್ಕಳ ಈ ಹುಡುಗಾಟಿಕೆ ಇತರರ ಪ್ರಾಣಕ್ಕೆ ಆಪತ್ತು ತಂದಿತ್ತು.
Investigation into water poisoning case revealed