SUDDILIVE || SHIVAMOGGA
ತೂಗುಕತ್ತಿಯಂತೆ ನೇತಾಡುತ್ತಿದೆ ಯಡಿಯೂರಪ್ಪನವರ ಅಭಿನಂದನಾ ಫ್ಲೆಕ್ಸ್-Yediyurappa's congratulatory flex is hanging like a hanging sword
ಕಾರ್ಯಕ್ರಮ ಮುಗಿದ ಮೇಲೆ ಎಲ್ಲವೂ ಕಸ ಎಂಬುದು ಸತ್ಯವಾಗಿದೆ. ಇತ್ತೀಚೆಗೆ ಸರ್ಜಿ ಕನ್ವೆನ್ಷನ್ ಹಾಲಿನಲ್ಲಿ ಲಿಂಗಾಯತ ವೀರಶೈವ ಸಂಘ ಹಮ್ಮಿಕೊಂಡಿದ್ದ ಯಡೂರಪ್ಪರವರಿಗೆ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕಾಗಿ ಹಾಕಿದ ಫ್ಲೆಕ್ಸ್ ವೊಂದು ತೂಗುಕತ್ತಿಯಾಗಿ ನೇತಾಡುತ್ತಿದೆ. ಯಾರ ಮೇಲಾದರೂ ಬೀಳುವ ಅಪಾಯದಲ್ಲಿ ಫ್ಲೆಕ್ಸ್ ಒಂದು ನೇತಾಡುತ್ತಿದೆ.
ಸವಳಂಗ ರಸ್ತೆಯ ರೈಲ್ವೆ ಓವರ್ ಬ್ರಿಡ್ಜ್ ಮೇಲೆ ಯಡಿಯೂರಪ್ಪನವರಿಗೆ ಸನ್ಮಾನದ ಕಾರ್ಯಕ್ರಮದ ಪ್ಲೆಕ್ಸನ್ನು ಹಾಕಿಸಲಾಗಿತ್ತು. ಯಾವ ರೀತಿ ರಾರಾಜಿಸುತ್ತಿತ್ತು ಅಂದರೆ ಎಂಥ ಕಾರ್ಯಕ್ರಮಗಳನ್ನು ನಾಚಿಸುವಂತೆ ಫ್ಲೆಕ್ಸ್ ಗಳು ರಾರಾಜಿಸುತ್ತಿತ್ತು. ಕಾರ್ಯಕ್ರಮ ಮುಗಿದ ಮೇಲೆ ಈ ಆಯೋಜಕರಿಗೆ ತಾಕೀತು ಮಾಡುವ ಧೈರ್ಯವನ್ನೇ ಜಿಲ್ಲಾಡಳಿತ ಕಳೆದುಕೊಂಡಂತೆ ಭಾಸವಾಗುತ್ತಿದೆ.
ರೈಲ್ವೆ ಓವರ್ ಬ್ರಿಡ್ಜ್ ಸೇತುವೆಗೆ ಕಟ್ಟಲಾಗಿದ್ದ ಯಡಿಯೂರಪ್ಪರ ಫ್ಲೆಕ್ಸ್ ಒಂದು ಮೂಲ ರಂಗಪ್ಪ ವೈನ್ ಶಾಪ್ ಎದುರು ನೇತಾಡುತ್ತಿದೆ ಇದಕ್ಕೆ ಮಳೆಯನ್ನು ಸಹ ಹೊಡೆದಿದ್ದು ಯಾರಾದರೂ ಮೇಲೆಯಾದರೂ ಯಾವುದೇ ಕ್ಷಣದಲ್ಲಿ ಬೀಳುವ ಅಪಾಯದಲ್ಲಿದೆ. ಹಾಗಾಗಿ ಇದನ್ನು ತಕ್ಷಣ ವಿಲೇವಾರಿ ಮಾಡುವ ಜರೂರಿಸಹವಿದೆ.
ಕಾರ್ಯಕ್ರಮ ಮುಗಿದ ಮೇಲೆ ಕಸದಂತಾಗಿರುವ ಫ್ಲೆಕ್ಸ್ ಗಳು ಯಾರಾದರೂ ತಲೆ ಮೇಲೆ ಬೀಳುವ ಅಪಾಯ ಇರುವುದರಿಂದ ಇದರ ವಿಲೇವಾರಿ ಅಗತ್ಯವಿದೆ. ಫ್ಲೇಕ್ಸ್ ಅನ್ನು ಓವರ್ ಬ್ರಿಡ್ಜ್ ಮೇಲೆ ತೆಗಿಸಲಾಗಿದ್ದರೂ ಸಹ ಇದೊಂದು ಫ್ಲೆಕ್ಸ್ ತೂಗು ಕತ್ತಿಯಂತೆ ನೇತಾಡುತ್ತಿದೆ.
hanging sword