SUDDILIVE || SHIVAMOGGA
ಕೊಲ್ಲೂರು ಟು ಕೊಡಚಾದ್ರಿ, ಜೀಪ್ ಪಲ್ಟಿ-Jeep turnover at Kodachadri
ಕೊಡಚಾದ್ರಿಗೆ ತೆರಳುತ್ತಿದ್ದ ಜೀಪ್ ಪಲ್ಟಿಹೊಡೆದಿದೆ. ಕೇರಳ ಮೂಲದ ಪ್ರಯಾಣಿಕರು ಇದ್ದ ಜೀಪ್ ಪಲ್ಟಿಯಾಗಿದ್ದು, ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಹೊಸನಗರ ತಾಲೂಕಿನ ಕೊಡಚಾದ್ರಿ ಬೆಟ್ಟಕ್ಕೆ ಪ್ರವಾಸಿಗರು ತೆರಳುತ್ತಿದ್ದರು. ಕೊಲ್ಲೂರಿನಿಂದ ಜೀಪ್ ನಲ್ಲಿ ಕೊಡಚಾದ್ರಿ ಬೆಟ್ಟಕ್ಕೆ ತೆರಳುತ್ತಿದ್ದ ಜೀಪ್ ಚಲಾಯಿಸುತ್ತಿದ್ದ ಚಾಲಕನ ನಿಯಂತ್ರಣ ತಪ್ಪಿ ಚೀಪು ಪಲ್ಟಿಯಾಗಿದೆ. ಇಂದು ಬೆಳಿಗ್ಗೆ ಈ ಘಟನೆ ನಡೆದಿದೆ. ನಿಟ್ಟೂರು – ಕಟ್ಟಿನಹೊಳೆ ಮಾರ್ಗದ ಕುಂಬಳೆ ಗ್ರಾಮದ ಬಳಿ ಜೀಪ್ ಪಲ್ಟಿಯಾಗಿದೆ.
ಜೀಪ್ ನಲ್ಲಿ ತೆರಳುತ್ತಿದ್ದ ಕೇರಳ ಮೂಲದ 8 ಜನ ಪ್ರವಾಸಿಗರಿಗೆ. ಸಣ್ಣಪುಟ್ಟ ಗಾಯಗಳಾಗಿವೆ. ಪಲ್ಟಿಯಾದ ಜೀಪ್ ಭಾಗಶಃ ಜಖಂಗೊಂಡಿದೆ. ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕೊಲ್ಲೂರಿನಿಂದಲೇ ಪ್ರಯಾಣಿಕರು ಕೊಡಚಾದ್ರಿಗೆ ಜೀಪ್ ಮೂಲಕ ತೆರಳುವಾಗ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.
Jeep turnover at Kodachadri