SUDDILIVE || SHIVAMOGGA
ಕೆಸರುಗದ್ದೆಯ ಕ್ರೀಡೋತ್ಸವದಲ್ಲಿ ಮಿಂದೆದ್ದ ಮಕ್ಕಳು ಮಹಿಳೆಯರು ಹಾಗೂ ಪುರುಷರು-Children, women and men drowned at the Kesarugadde sports festival
ಶಿವಮೊಗ್ಗದಲ್ಲಿ ಕೆಸರುಗದ್ದೆ ಕ್ರೀಡೋತ್ಸವ ಕಲರವ ಆರಂಭಗೊಂಡಿದೆ. ಈ ಕ್ರೀಡೋತ್ಸವಕ್ಕೆ ಜೆಸಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ಚಾಲನೆ ನೀಡಿದ್ದಾರೆ. ಬೆಳಿಗ್ಗೆಯಿಂದ ಈ ಕ್ರೀಡೋತ್ಸವದಲ್ಲಿ ದೊಡ್ಡವರಿಂದ ಹಿಡಿದು ಸಣ್ಣವರ ವರೆಗೆ 200 ಜನರು ನೋಂದಣಿ ಮಾಡಿಕೊಂಡಿದ್ದಾರೆ.
ಗೋಂಧಿ ಚಟ್ನಹಳ್ಳಿಯಲ್ಲಿ ನಗರದ ಜನ ಹಳ್ಳಿಯ ಸೊಗಡಿನಲ್ಲಿ ಆಟವಾಡುತ್ತಿರುವುದು ವಿಶೇಷವಾಗಿದೆ. ವಾಲಿಬಾಲ್, ಹಗ್ಗ ಜಗ್ಗಾಟ, ನಿಧಿಶೋಧ , ರನ್ನಿಂಗ್ ರೇಸ್ ಮೊದಲಾದವರು ಸೇರಿ 15 ಆಟಗಳನ್ನ ಇಡಲಾಗಿದೆ.
ಆಟದಲ್ಲಿ ಈಗಾಗಲೇ ನಿಧಿ ಶೋಧ ಮತ್ತು ವಯಸ್ಕರ ರನ್ನಿಂಗ್ ರೇಸ್ ಮುಗಿದಿದೆ ನಿಧಿಶೋಧದಲ್ಲಿ ಹೊಸನಗರದ ಇಬ್ವರು ಯುವಕರು ವಿಜೇತರಾಗಿದ್ದಾರೆ. ನಿಧಿಶೋಧದಲ್ಲಿ ಹೊಸನಗರದ ಮಹೇಶ ಮತ್ತು ಕೇಶವರಿಗೆ ಬೆಳ್ಳಿ ನಾಣ್ಯ ದೊರೆತಿದ್ದು ಇಬ್ಬರಿಗೂ ಮೊದಲ ಬಹುಮಾನ ದೊರೆತಿದೆ.
ರನ್ನಿಂಗ್ ರೇಸ್ ನಲ್ಲಿ 50 ಮೀ ಓಟದಲ್ಲಿ ಆಕಾಶ್ ಗೆಲವು ಸಾಧಿಸಿದ್ದಾರೆ. ಉಳಿದ ಆಟ ಮುಂದುವರೆದಿದೆ. ಆಟಕ್ಕೂ ಮುಂಚೆ ಪುರುಷ ಮತ್ತು ಮಹಿಳೆಯರು ಕೆಸರು ಗದ್ದೆಯಲ್ಲಿ ಮಿಂದೆದ್ದಿದ್ದಾರೆ.
Kesarugadde sports