SUDDILIVE || SHIVAMOGGA
ಶ್ರೀಗಂಧ ಮರ ಕಳ್ಳರ ಬಂಧನ-Sandalwood thieves arrested
ಶ್ರೀಗಂಧ ಮರ ಕಡಿದು ಸಣ್ಣ ತುಂಡುಗಳನ್ನಾಗಿ ಮಾಡಿ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ಸುಮಾರು ₹15,000 ಮೌಲ್ಯದ 3 ಕೆ.ಜಿ 520 ಗ್ರಾಂ ತೂಕದ ಶ್ರೀಗಂಧದ ಮರದ ತುಂಡುಗಳನ್ನು ವಶಕ್ಕೆ ಪಡೆಯಲಾಗಿದೆ.
ಸಾದಿಕ್ ಬೇಗ್ (46) ಮತ್ತು ನಿಜಾಮುದ್ದಿನ್ (52) ಬಂಧಿತರು. ಅಶೋಕ ನಗರ ಚಾನಲ್ ಬಳಿ ಆರೋಪಿಗಳು ಮರದ ತುಂಡುಗಳನ್ನು ಚೀಲದಲ್ಲಿ ಇಟ್ಟುಕೊಂಡಿರುವ ಕುರಿತು ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು.
ದಾಳಿ ನಡೆಸಿದ ಪೊಲೀಸರು ಚೀಲವನ್ನು ವಶಕ್ಕೆ ಪಡೆದು ಪರಿಶೀಲಿಸಿದಾಗ ಅದರಲ್ಲಿ ಶ್ರೀಗಂಧದ ತುಂಡುಗಳಿದ್ದವು. ವಿಚಾರಣೆ ಮಾಡಿದಾಗ ಶರಾವತಿ ನಗರದ ಖಾಲಿ ನಿವೇಶನದಲ್ಲಿದ್ದ ಶ್ರೀಗಂಧದ ಮರವನ್ನು ಕಡಿದು, ಸಣ್ಣ ತುಂಡುಗಳಾಗಿ ಕತ್ತರಿಸಿ ಮಾರಾಟ ಮಾಡುತ್ತಿದ್ದಿದ್ದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಘಟನೆ ಸಂಬಂಧ ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.