SUDDILIVE || SHIVAMOGGA
ಫುಡ್ ಕೋರ್ಟ್ ನ ಮೇಲೆ ಅಧಿಕಾರಿಗಳ ದಾಳಿ-Officials raid food court
ಶಿವಮೊಗ್ಗದ್ಲಿರುವ ಮಾಂಸಹಾರಿ ಮತ್ತು ಸಸ್ಯಹಾರಿ ಫುಡ್ ಕೋರ್ಟ್ ನಲ್ಲಿ ಫುಡ್ ಸೇಫ್ಟಿ ಅಧಿಕಾರಿಗಳು ಮತ್ತು ಪಾಲಿಕೆಯ ನಿರೀಕ್ಷಕರು ದಾಳಿ ನಡೆಸಿ ಸ್ವಚ್ಛತೆ, ಆಹಾರದ ಗುಣಮಟ್ಟ ಕುರಿತಂತೆ ಜಾಗೃತಿ ಮೂಡಿಸಿದ್ದಾರೆ. ಗಲೀಜುಕಂಡ ಅಂಗಡಿಗಳಿಗೆ ದಂಡ ವಿಧಿಸಿದ್ದಾರೆ.
ಮಲ್ಲಿಕಾರ್ಜುನ ಚಲನ ಚಿತ್ರ ಮಂದಿರದ ಪಕ್ಕದ ಓಣಿಯಲ್ಲಿರುವ ಫುಡ್ ಕೋರ್ಟ್ ಮತ್ತು ಸಾವರ್ ಲೈನ್ ರಸ್ತೆಯಲ್ಲಿರುವ ಮಾಂಸಹಾರಿ ಫುಡ್ ಕೋರ್ಟ್ ನಲ್ಲಿ 30 ಕ್ಕೂ ಹೆಚ್ಚು ಅಂಗಡಿಗಳಲ್ಲಿ ದಾಳಿ ನಡೆಸಿ ಜಾಗೃತಿ ಅರಿವಿಗಾಗಿ ದಂಡ ವಿಧಿಸಲಾಗಿದೆ.
ಫುಡ್ ಕೋರ್ಟ್ ನಲ್ಲಿ ಆಹಾರ ಗುಣಮಟ್ಟ, ಸ್ವಚ್ಛತೆ ಕುರಿತು ಸಾರ್ವಜನಿಕರಿಂದ ಬಂದ ದೂರಿನ ಆಧಾರದ ಮೇರೆಗೆ ಇಂದು ಪಾಲಿಕೆ ಹೆಲ್ತ್ ಇನ್ ಸ್ಪೆಕ್ಟರ್ ವಸಂತ್ ಮತ್ತು ಫುಡ್ ಸೇಫ್ಟಿ ಅಧಿಕಾರಿಗಳಾದ ಶಶಿಕುಮಾರ್ ಅವರ ನೇತೃತ್ವದಲ್ಲಿ ದಾಳಿ ನಡೆದಿದೆ. ದಾಳಿಯಲ್ಲಿ ಹಲವು ಗುಣಮಟ್ಟದ ಆಹಾರ ಮತ್ತು ಸ್ವಚ್ಛತೆಗ ಒತ್ತು ನೀಡದಿದ್ದರೆ ಅಂಗಡಿ ಪರವಾನಗಿ ಸಹ ರದ್ದು ಮಾಡುವ ಎಚ್ಚರಿಕೆಯನ್ನೂ ಸಹ ನೀಡಲಾಗಿದೆ.
Officials raid food court
