ad

ಎಪಿಎಂಸಿಯಲ್ಲಿ ಯುವಕನಿಗೆ ಇರಿತ- ಚಿಕಿತ್ಸೆ ಫಲಕಾರಿಯಾಗದೆ ಯುವಕ ಸಾವು- Murder of a young man in Shivamogga APMC

 SUDDILIVE || SHIVAMOGGA

ಎಪಿಎಂಸಿಯಲ್ಲಿ ಯುವಕನಿಗೆ ಇರಿತ- ಚಿಕಿತ್ಸೆ ಫಲಕಾರಿಯಾಗದೆ ಯುವಕ ಸಾವು- Murder of a young man in Shivamogga APMC      



ವಿನೋಬನಗರದ ಎಪಿಎಂಸಿ ಯಾರ್ಡ್ ನಲ್ಲಿ ರುವ ಹೋಟೆಲ್ ವೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವಕನ ಮೇಲೆ ಆಯುಧಗಳಿಂದ ಇರಿಯಲಾಗಿದ್ದು ಯುವಕ ಚಿಕಿತ್ಸೆ ಫಲಕಾರಿಯಾಗದೆ ಸಾವಾಗಿರುವ ಘಟನೆ ನಡೆದಿದೆ. 

ತಾಲೂಕಿನ ಬನ್ನಿಕೆರೆ ಗ್ರಾಮದ ಜನಾರ್ಧನ (26) ಎಂಬ ಯುವಕನ ಮೇಲೆ ಹನುಮಂತ ಎಂಬ ವ್ಯಕ್ತಿ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾನೆ. ತೀವ್ರ ಇರಿತಕ್ಕೊಳಗಾದ ಯುವಕನನ್ನ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. 

ನಿನ್ನೆ ರಾತ್ರಿ ಈ ಘಟನೆ ನಡೆದಿದೆ. ಚಿಕಿತ್ಸೆ ಫಲಕಾರಿಯಾಗದೆ ಜನಾರ್ಧನ ಸಾವನ್ನಪ್ಪಿದ್ದಾನೆ. 6 ವರ್ಷದ ಹಿಂದೆ ಊರೊಂದರ ಜಾತ್ರೆಗೆ ಹನುಮಂತು ಜೊತೆಗೆ ಬೈಕಿನಲ್ಲಿ ಹೋಗುವಾಗ ಅಪಘಾತವಾಗಿದ್ದು ಅಪಘಾತದಲ್ಲಿ ಹನುಮಂತುವಿಗೆ ತೀವ್ರಗಾಯವಾಗಿತ್ತು. ಗಾಯಗೊಂಡಿದ್ದ ಹನುಮಂತುವಿಗೆ ಸೂಕ್ತ ಚಿಕಿತ್ಸೆಯಾಗಲಿ ಅಥವಾ ಪರಿಹಾರ ನೀಡಿಲ್ಲ ಎಂಬ ಕಾರಣಕ್ಕೆ ಹನುಮಂತು ಜನಾರ್ಧನ ಮೇಲೆ ದ್ವೇಷ ಕಾರುತ್ತಿದ್ದ ಎನ್ನಲಾಗಿದೆ. ನಿನ್ನೆ ಇದೇ ವಿಚಾರಕ್ಕೆ ಆಯುಧಗಳಿಂದ ಇರಿದಿರುವ ಶಂಕೆ ವ್ಯಕ್ತವಾಗಿದೆ.

ಜಗನ್ನಾಥ ಮತ್ತು ಹನುಮಂತು ಇಬ್ಬರೂ ಸಂಬಂಧಿಗಳಾಗಿದ್ದಾರೆ. ಸಂಬಂಧದಲ್ಲಿ ಇಬ್ವರೂ ಚಿಕ್ಕಪ್ಪ ದೊಡ್ಡಪ್ಪನ ಮಕ್ಕಳು ಎನ್ನಲಾಗುತ್ತಿದೆ. ಹನುಮಂತು ಅವರನ್ನ ನಿನ್ನೆ ರಾತ್ರಿಯೇ ವಿನೋಬ ನಗರ ಪೊಲೀಸರು ವಶಕ್ಕೆ ಪಡೆದಿದ್ದರು. ಮೃತದೇಹವನ್ನ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. 

Murder of a young man in Shivamogga APMC

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close