SUDDILIVE || SHIVAMOGGA
ನಾಳೆ ಮತ್ತು ಆ.23 ರಂದು ವಿದ್ಯುತ್ ವ್ಯತ್ಯಯ-Power outage tomorrow and August 23rd
ಆಲ್ಕೋಳ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಫೀಡರ್ ಎ.ಎಫ್-04 ರಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ಆ.23 ರಂದು ಬೆಳಗ್ಗೆ 10.00 ರಿಂದ ಸಂಜೆ 5.00ರವರೆಗೆ ಅಮೃತ ಲೇಔಟ್, ಸಿಟಿ ಕ್ಲಬ್, ಮಹೇಂದ್ರ ಶೋರೂಂ ಮುಖ್ಯರಸ್ತೆ, ಗಾಡಿಕೊಪ್ಪ, ಶರಾವತಿ ಡೆಂಟಲ್ ಕಾಲೇಜು, ಹರ್ಷ ಫರ್ನ್ ಸುತ್ತಮುತ್ತ, ಮಲ್ಲಿಗೇನಹಳ್ಳಿ, ಎಬಿವಿಪಿ ಲೇಔಟ್, ಮ್ಯಾಕ್ಷ್ ಅರುಣೋದಯ ಲೇಔಟ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.
ಶಿವಮೊಗ್ಗ ನಗರದ ಭರಮಪ್ಪ ನಗರದಲ್ಲಿ ಆ. 22 ರಂದು ವಿದ್ಯುತ್ ಕಾಮಗಾರಿ ಹಮ್ಮಿಕೊಂಡಿದ್ದು ಅಶೋಕ ರಸ್ತೆ, ಎಸ್ ಪಿಎಂ ರಸ್ತೆ, ವಿನಾಯಕ ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಿಗ್ಗೆ 9 ರಿಂದ ಸಂಜೆ 6 ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.
Power outage tomorrow and August 23rd